ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಗ್ರಾ.ಪಂ ಚುನಾವಣೆ: ಕೊಡಗಿನಲ್ಲಿ ಭಾರಿ ಅಕ್ರಮ ಮದ್ಯ ವಶ

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಡಿಸೆಂಬರ್ 7: ರಾಜ್ಯದಲ್ಲಿ ಗ್ರಾ.ಪಂ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಅಕ್ರಮ ಮದ್ಯ ಸಾಗಾಟ ಜೋರಾಗಿ ಸಾಗಿದ್ದು, ಅಬಕಾರಿ ಉಪ ಆಯುಕ್ತರ ಮಾರ್ಗದರ್ಶನದಂತೆ ಭಾನುವಾರ ಕೊಡಗು ಜಿಲ್ಲೆಯ ಕುಶಾಲನಗರ ವ್ಯಾಪ್ತಿಯಲ್ಲಿ ಭಾರಿ ಪ್ರಮಾಣದ ಅಕ್ರಮ ಮದ್ಯವನ್ನು ವಶಪಡಿಸಿಕೊಳ್ಳಲಾಗಿದೆ.

ಅಬಕಾರಿ ಅಧಿಕಾರಿಗಳು ಗಸ್ತು ನಡೆಸುತ್ತಿದ್ದ ಸಂದರ್ಭದಲ್ಲಿ ವಾಹನ ಸಂಖ್ಯೆ ಕೆಎ.45ಎಂ.5216(ಇನ್ನೋವಾ ಕ್ರಿಸ್ಟಾ)ದಲ್ಲಿ ಅಕ್ರಮವಾಗಿ 10.5 ಲೀಟರ್ ಮದ್ಯವನ್ನು ಸಾಗಾಣಿಕೆ ಮಾಡುತ್ತಿದ್ದ ಹಿನ್ನೆಲೆಯಲ್ಲಿ ಅಬಕಾರಿ ಕಾಯ್ದೆ 1965ರ ಕಲಂ 11, 14, 32 ಮತ್ತು 38(ಎ)ರ ಅಡಿಯಲ್ಲಿ ಪ್ರಕರಣ ದಾಖಲಿಸಿ ಇಬ್ಬರು ಆರೋಪಿಗಳನ್ನು ದಸ್ತಗಿರಿಪಡಿಸಿ ಘನ ನ್ಯಾಯಾಲಯಕ್ಕೆ ಒಪ್ಪಿಸಲಾಯಿತು.

ಎಮ್‌ಆರ್‌ಎಫ್‌ ರೇಸ್ ನಲ್ಲಿ ಕೊಡಗಿನ ಧನುಷ್ ಮಿಂಚಿಂಗ್ಎಮ್‌ಆರ್‌ಎಫ್‌ ರೇಸ್ ನಲ್ಲಿ ಕೊಡಗಿನ ಧನುಷ್ ಮಿಂಚಿಂಗ್

ಈ ಪ್ರಕರಣದಲ್ಲಿ ಜಪ್ತಿ ಮಾಡಲಾದ ವಾಹನ ಮತ್ತು ಮದ್ಯದ ಅಂದಾಜು ಮೌಲ್ಯ ರೂ.22,05,040 ನ್ನು ಅಬಕಾರಿ ಇಲಾಖೆ ವಶಕ್ಕೆ ಪಡೆಯಲಾಗಿದೆ. ಅಕ್ರಮ ಮದ್ಯ ಸಾಗಾಟ ಪ್ರಕರಣವನ್ನು ಅಬಕಾರಿ ಉಪ ಆಯುಕ್ತರ ಕಚೇರಿಯ ಅಬಕಾರಿ ನಿರೀಕ್ಷಕರಾದ ಸಿ.ಲಕ್ಷ್ಮೀಶ ಅವರು ದಾಖಲಿಸಿದ್ದಾರೆ.

Gram Panchayat Election: Massive Illegal Liquor Seized In Kodagu

Recommended Video

ಜಸ್ಟ್ ಕ್ಯಾಮರಾ ನೋಡಿ ತಬ್ಬಿಬ್ಬಾಗಿ ಘೋಷಣೆ ಕೂಗಿದ ನಾಯಕರು | Oneindia Kannada

ಈ ಪ್ರಕರಣವನ್ನು ಪತ್ತೆ ಹಚ್ಚುವ ಸಂದರ್ಭದಲ್ಲಿ ಅಬಕಾರಿ ಇಲಾಖೆಯ ಅಬಕಾರಿ ಹಿರಿಯ ರಕ್ಷಕರಾದ ಕೆ.ಎಸ್.ಉತ್ತಪ್ಪ, ಕೆ.ಎಸ್.ರಾಜು ಮತ್ತು ಅಬಕಾರಿ ರಕ್ಷಕರಾದ ಶಿವಣ್ಣ, ವಾಹನ ಚಾಲಕರಾದ ಸುನೀಲ್ ಕುಶಾಲಪ್ಪ ಇತರರು ಇದ್ದರು.

English summary
Under the guidance of the Deputy Commissioner of Excise, a large quantity of illicit liquor was seized in Kushalanagar area of ​​Kodagu district on Sunday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X