ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಾಹನಕ್ಕೆ ಫ್ಯಾನ್ಸಿ ನಂಬರ್ ಕೊಡಿಸುತ್ತೇನೆಂದು ನಾಮ ಹಾಕಿದ ಆಸಾಮಿ

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ನವೆಂಬರ್ 12: ವಾಹನಗಳ ರಿಜಿಸ್ಟ್ರೇಷನ್ ಮಾಡಿಸಿಕೊಡುತ್ತೇವೆಂದು ನಂಬಿಸಿ ವಂಚನೆ ಎಸಗುತ್ತಿದ್ದ ಜಾಲವೊಂದು ಕೊಡಗಿನಲ್ಲಿ ಹುಟ್ಟಿಕೊಂಡಿದೆ. ಇದಕ್ಕೆ ಕಡಿವಾಣ ಹಾಕುವ ನಿಟ್ಟಿನಲ್ಲಿ ಪೊಲೀಸರೂ ಕಾರ್ಯಪ್ರವೃತ್ತರಾಗಿದ್ದಾರೆ.

ಮಡಿಕೇರಿ ನಿವಾಸಿ ಬಿ.ಸಿ. ಕುಶಾಲಪ್ಪ ಎಂಬುವವರು ಕಳೆದ ಆಗಸ್ಟ್‌ ತಿಂಗಳಿನಲ್ಲಿ ಮೂರು ಲಕ್ಷ ರೂಪಾಯಿ ಬೆಲೆಯ ಟಿವಿಎಸ್ ಅಪಾಚೆ ಆರ್‌ ಆರ್‌ 130 ಬೈಕ್ ಖರೀದಿಸಿದ್ದರು. ಇದಕ್ಕೆ ಫ್ಯಾನ್ಸಿ ನಂಬರ್‌ ಅಳವಡಿಸಲು ಆರ್‌ ಟಿಒ ಮಧ್ಯವರ್ತಿ ಚೇತನ್‌ ಎಂಬಾತನಿಗೆ ಕಂತುಗಳಲ್ಲಿ ಒಟ್ಟು 75 ಸಾವಿರ ರೂಪಾಯಿ ಹಣವನ್ನೂ ನೀಡಿದ್ದರು. ಆದರೆ ಬಹಳ ಸಮಯವಾದರೂ ರಿಜಿಸ್ಟ್ರೇಷನ್ ಆಗಿರಲಿಲ್ಲ. ಒಳ್ಳೆ ನಂಬರ್‌ ಸಿಕ್ಕಲು ತಡವಾಗುತ್ತದೆ ಎಂದು ಚೇತನ್‌ ಕಾಲ ತಳ್ಳುತ್ತಾ ಬಂದಿದ್ದ. ನಂತರ ಅಕ್ಟೋಬರ್‌ ಎರಡನೇ ವಾರದಲ್ಲಿ ನಕಲಿ ನಂಬರಿನ ಆರ್‌ ಸಿ ಕಾರ್ಡನ್ನು ಕುಶಾಲಪ್ಪ ಅವರಿಗೆ ನೀಡಿದ್ದ.

ಆರೋಪಿಗಳ ಮೇಲೆ ಪೊಲೀಸರ ಹಲ್ಲೆ; ಕಾರಣ ಕೇಳಿದ ನ್ಯಾಯಾಲಯಆರೋಪಿಗಳ ಮೇಲೆ ಪೊಲೀಸರ ಹಲ್ಲೆ; ಕಾರಣ ಕೇಳಿದ ನ್ಯಾಯಾಲಯ

ಮಾರನೇ ವಾರ ಕುಶಾಲಪ್ಪ ಅವರು ಮೈಸೂರಿಗೆ ತೆರಳಿ ಅವರ ಸ್ನೇಹಿತರಿಗೆ ತೋರಿಸಿದಾಗ ಅವರು ಈ ರೀತಿ ನಂಬರ್‌ ಬರುವುದಿಲ್ಲ, ಒಮ್ಮೆ ಆರ್‌ ಟಿಒ ಕಚೇರಿಗೆ ಹೋಗಿ ಚೆಕ್‌ ಮಾಡಿಸಿಕೊಳ್ಳಿ ಎಂದು ಸಲಹೆ ನೀಡಿದ್ದರು. ನಂತರ ಕುಶಾಲಪ್ಪ ಮಡಿಕೇರಿಯ ಆರ್‌ ಟಿಒ ಕಚೇರಿಯಲ್ಲಿ ದಾಖಲಾತಿ ಪರಿಶೀಲಿಸಿದಾಗ ಇದೊಂದು ನಕಲಿ ನೋಂದಣಿ ಸಂಖ್ಯೆ ಎಂದು ತಿಳಿದುಬಂತು. ಬೇರೆಯವರಿಗೆ ನೀಡಿದ ಅವಧಿ ಮುಗಿದಿದ್ದ ಆರ್‌ ಸಿ ಕಾರ್ಡನ್ನು ತಿದ್ದಿ ಕುಶಾಲಪ್ಪ ಅವರ ಹೆಸರನ್ನು ನಮೂದಿಸಿರುವುದು ಬೆಳಕಿಗೆ ಬಂದಿದೆ. ಮಾಹಿತಿ ದೊರೆತ ಕೂಡಲೇ ಮಡಿಕೇರಿ ಆರ್‌ ಟಿಒ ಮಂಜುನಾಥ ಶಿರಾಳ ಇಲ್ಲಿನ ಗ್ರಾಮಾಂತರ ಠಾಣೆಯಲ್ಲಿ ಮೊಕದ್ದಮೆ ದಾಖಲಿಸಿದರು.

Fraud In The Name OF Vehicle Registration In Madikeri

ಪತ್ನಿಯನ್ನು ಮನೆಗೆ ಕರೆತರಲು ಐಪಿಎಸ್ ವೇಷ ತೊಟ್ಟ; ಮುಂದೇನಾಯ್ತು?ಪತ್ನಿಯನ್ನು ಮನೆಗೆ ಕರೆತರಲು ಐಪಿಎಸ್ ವೇಷ ತೊಟ್ಟ; ಮುಂದೇನಾಯ್ತು?

ಕಾರ್ಯ ಪ್ರವೃತ್ತರಾದ ಪೊಲೀಸರು ಚೇತನ್‌ ನನ್ನು ಬಂಧಿಸಿ ನ್ಯಾಯಾಂಗ ವಶಕ್ಕೆ ಒಪ್ಪಿಸಿದ್ದಾರೆ. ಈ ಆರ್‌ ಸಿ ಕಾರ್ಡನ್ನು ಮಾಡಿಕೊಟ್ಟ ನಾಪೋಕ್ಲು ನಿವಾಸಿ ಶಾಫಿಕ್ ಎಂಬಾತ ತಲೆ ಮರೆಸಿಕೊಂಡಿದ್ದು, ಆತನಿಗೆ ಬಲೆ ಬೀಸಿದ್ದೇವೆ ಎಂದು ಪೊಲೀಸರು ತಿಳಿಸಿದ್ದಾರೆ.

English summary
A network of frauds have emerged in Kodagu in the name of vehicle registration. The police are also working to curb this fraud
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X