ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗು : ರೋಟರಿ ಸಂಸ್ಥೆಯಿಂದ ಮನೆ ನಿರ್ಮಾಣ ಕಾರ್ಯ ಆರಂಭ

|
Google Oneindia Kannada News

ಕೊಡಗು, ಫೆಬ್ರವರಿ 15 : ರೋಟರಿ ಅಂತರ ರಾಷ್ಟ್ರೀಯ ಸಂಸ್ಥೆ ವತಿಯಿಂದ ಒಂದು ಬೆಡ್ ರೂಂ ಒಳಗೊಂಡ 25 ಮನೆಗಳ ನಿರ್ಮಾಣಕ್ಕೆ ಇಗ್ಗೊಡ್ಲು ಗ್ರಾಮದಲ್ಲಿ ಭೂಮಿ ಪೂಜೆ ನಡೆಸಲಾಗಿದೆ. 840 ಕುಟುಂಬಗಳು ಕೊಡಿನ ಪ್ರವಾಹದಲ್ಲಿ ಮನೆ ಕಳೆದುಕೊಂಡಿವೆ.

ರೋಟರಿ ಸಂಸ್ಥೆಯ ಟಿ.ಭಾಸ್ಕರ, ಯೋಜನಾ ನಿರ್ದೇಶಕರಾದ ಡಾ.ರವಿ ಅಪ್ಪಾಜಿ ಮತ್ತು ರೋಟರಿ ಜಿಲ್ಲೆ ರೋಹಿನಾಥ್, ಸೋಮವಾರಪೇಟೆ ತಾ.ಪಂ. ಉಪಾಧ್ಯಕ್ಷರಾದ ಅಭಿಮನ್ಯು ಕುಮಾರ್, ಗ್ರಾ.ಪಂ. ಉಪಾಧ್ಯಕ್ಷರಾದ ಲತಾ ಮತ್ತಿತರ ಉಪಸ್ಥಿತಿಯಲ್ಲಿ ಭೂಮಿ ಪೂಜೆ ನಡೆಯಿತು.

ಚಿತ್ರಗಳು : ಕೊಡಗು ಜಿಲ್ಲೆಯಲ್ಲಿ ಮನೆಗಳ ನಿರ್ಮಾಣ ಕಾರ್ಯಚಿತ್ರಗಳು : ಕೊಡಗು ಜಿಲ್ಲೆಯಲ್ಲಿ ಮನೆಗಳ ನಿರ್ಮಾಣ ಕಾರ್ಯ

ಪ್ರಕೃತಿ ವಿಕೋಪ ಸಂದರ್ಭದಲ್ಲಿ ಮನೆ ಕಳೆದುಕೊಂಡ ನಿರಾಶ್ರಿತರಿಗೆ ಅವರವ ಸ್ವಂತ ಜಾಗದಲ್ಲಿ ಒಂದು ಮನೆಗೆ 5 ಲಕ್ಷ ರೂ. ನಂತೆ 25 ಮನೆಗಳನ್ನು ರೋಟರಿ ಸಂಸ್ಥೆ ವತಿಯಿಂದ ನಿರ್ಮಾಣ ಮಾಡಲಾಗುತ್ತದೆ. 25 ಮನೆಗಳಿಗೆ 1.26 ಕೋಟಿ ರೂ. ವೆಚ್ಚವಾಗಲಿದೆ.

ಕೊಡಗು ಅಭಿವೃದ್ಧಿ ಪ್ರಾಧಿಕಾರ ರಚನೆ, ಕುಮಾರಸ್ವಾಮಿ ಅಧ್ಯಕ್ಷರುಕೊಡಗು ಅಭಿವೃದ್ಧಿ ಪ್ರಾಧಿಕಾರ ರಚನೆ, ಕುಮಾರಸ್ವಾಮಿ ಅಧ್ಯಕ್ಷರು

'ಪ್ರಕೃತಿ ವಿಕೋಪಕ್ಕೆ ತುತ್ತಾದ ಇಗ್ಗೊಡ್ಲು ಗ್ರಾಮದ ನಿರಾಶ್ರಿತರು ಮನೆ-ಮಠ ಕಳೆದುಕೊಂಡಿದ್ದಾರೆ. ಸರ್ಕಾರದ ಜೊತೆ ಸರ್ಕಾರೇತರ ಸಂಸ್ಥೆಗಳು ಕೈಜೋಡಿಸಿದಾಗ ನಿರಾಶ್ರಿತರು ಹಿಂದಿನಂತೆ ಬದುಕು ಕಟ್ಟಿಕೊಳ್ಳಲು ಸಾಧ್ಯ' ಎಂದು ಟಿ.ಭಾಸ್ಕರ ಅವರು ಹೇಳಿದರು.

ದೀರ್ಘ ರಜೆಯ ಮೇಲೆ ತೆರಳಿದ ಕೊಡಗು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾದೀರ್ಘ ರಜೆಯ ಮೇಲೆ ತೆರಳಿದ ಕೊಡಗು ಜಿಲ್ಲಾಧಿಕಾರಿ ಪಿ.ಐ.ಶ್ರೀವಿದ್ಯಾ

50 ಮನೆ ನಿರ್ಮಾಣದ ಗುರಿ

50 ಮನೆ ನಿರ್ಮಾಣದ ಗುರಿ

'ನಿರಾಶ್ರಿತರಿಗೆ ರೋಟರಿ ಹ್ಯಾಬಿಟೇಟ್ ಸಂಸ್ಥೆ ವತಿಯಿಂದ 50 ಮನೆಗಳನ್ನು ನಿರ್ಮಾಣ ಮಾಡುವ ಗುರಿಯನ್ನು ಹೊಂದಲಾಗಿದೆ. ಮೊದಲ ಹಂತದಲ್ಲಿ 25 ಮನೆ ನಿರ್ಮಿಸಲಾಗುತ್ತಿದೆ' ಎಂದು ಯೋಜನಾ ನಿರ್ದೇಶಕರಾದ ಡಾ.ರವಿ ಅಪ್ಪಾಜಿ ಹೇಳಿದರು.

ಅಗತ್ಯ ಸಹಕಾರ ಬೇಕು

ಅಗತ್ಯ ಸಹಕಾರ ಬೇಕು

ಮಾಹಿತಿ ಮತ್ತು ನಿರ್ವಹಣೆಯ ಹಿರಿಯ ನಿರ್ದೇಶಕರಾದ ಸಂಜಯ್ ದಾಸ್ವಾನಿ ಅವರು ಮಾತನಾಡಿ, 'ಕೊಡಗು ಪ್ರಕೃತಿ ವಿಕೋಪದ ನಿರಾಶ್ರಿತರಿಗೆ ಆದಷ್ಟು ಬೇಗ ಮನೆ ನಿರ್ಮಾಣ ಮಾಡುವ ಉದ್ದೇಶವಿದೆ. ಮತ್ತು ಕುಡಿಯುವ ನೀರು, ರಸ್ತೆ ಮುಂತಾದ ಅಭಿವೃದ್ಧಿಯನ್ನು ಕೈಗೊಂಡು ಕೊಡಗು ಪುನರ್ ನಿರ್ಮಾಣಕ್ಕಾಗಿ ಎಲ್ಲರ ಸಹಕಾರ ಅಗತ್ಯ' ಎಂದರು.

50 ಸಾವಿರ ಮನೆ ನಿರ್ಮಾಣ

50 ಸಾವಿರ ಮನೆ ನಿರ್ಮಾಣ

ರೋಟರಿ ಹ್ಯಾಬಿಟೇಟ್ ಸಂಸ್ಥೆಯು ದೇಶದಲ್ಲಿ ಸುಮಾರು 50 ಸಾವಿರ ಮನೆಗಳನ್ನು ನಿರ್ಮಾಣ ಮಾಡಿದೆ. ಇಗ್ಗೋಡ್ಲು ಗ್ರಾಮದಲ್ಲಿ 25 ಮನೆಗಳನ್ನು ಮೊದಲ ಹಂತದಲ್ಲಿ ನಿರ್ಮಿಸುತ್ತದೆ. ಎನ್‍ಜಿಒಗಳು ಸಹ ಇದಕ್ಕೆ ಸಹಕಾರ ನೀಡಿವೆ.

840 ಮನೆ ನಿರ್ಮಾಣ

840 ಮನೆ ನಿರ್ಮಾಣ

ಕೊಡಗಿನಲ್ಲಿ ಪ್ರವಾಹದಿಂದ ನಿರಾಶ್ರಿತರಾದ ಜನರಿಗೆ ಮನೆ ನಿರ್ಮಿಸಿ ಕೊಡುವ ಬಗ್ಗೆ ವಿಧಾನಸಭೆಯಲ್ಲಿಯೂ ಚರ್ಚೆ ನಡೆದಿತ್ತು. ಕಂದಾಯ ಸಚಿವರು ಸದನದಲ್ಲಿ ಉತ್ತರ ನೀಡಿದ್ದರು. 840 ಕುಟುಂಬಗಳು ಸಂತ್ರಸ್ತರಾಗಿದ್ದು, ಎಲ್ಲಾ ಕುಟುಂಬಗಳಿಗೂ ಮನೆ ನಿರ್ಮಿಸಲು ತೀರ್ಮಾನಿಸಲಾಗಿದೆ ಎಂದು ಮಾಹಿತಿ ನೀಡಿದ್ದರು.

770 ಮನೆ ತುರ್ತಾಗಿ ನಿರ್ಮಾಣ

770 ಮನೆ ತುರ್ತಾಗಿ ನಿರ್ಮಾಣ

ಕೊಡಗು ಪ್ರವಾಹದಲ್ಲಿ 840 ಕುಟುಂಬಗಳು ಮನೆ ಕಳೆದುಕೊಂಡಿವೆ. ಇವುಗಳ ಪೈಕಿ 770 ಮನೆಗಳನ್ನು ತುರ್ತಾಗಿ ನಿರ್ಮಿಸಲಾಗುತ್ತಿದೆ. ಕರ್ಣಂಗೇರಿಯಲ್ಲಿ 40, ಬಿಳಿಗೇರಿಯಲ್ಲಿ 30, ಗಾಳಿಬೀಡುವಿನಲ್ಲಿ 125, ಮದೆಯಲ್ಲಿ 175, ಜಂಬೂರಿನಲ್ಲಿ 400 ಮನೆ ನಿರ್ಮಿಸಲಾಗುತ್ತಿದೆ.

English summary
Foundation stone laid in Kodagu district to constructing 25 house for the flood victims. Rotary club will construct 25 one bed room house.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X