ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ವಿರಾಜಪೇಟೆಯಲ್ಲಿ ಮಾಂಸಕ್ಕಾಗಿ ಮಂಗಗಳ ಬೇಟೆ

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಜುಲೈ 6: ಮಾಂಸಕ್ಕಾಗಿ ಅರಣ್ಯದಲ್ಲಿದ್ದ ಮಂಗಗಳನ್ನುಬೇಟೆಯಾಡುತ್ತಿದ್ದ ಮೂವರನ್ನು ವಿರಾಜಪೇಟೆ ತೋಮರ ಕೆದಮಳ್ಳೂರು ಗ್ರಾಮದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಬಂಧಿಸಿದ್ದಾರೆ.

ವಿರಾಜಪೇಟೆ ತಾಲ್ಲೂಕಿನ ಕೆದಮಳ್ಳೂರು ಗ್ರಾಮದ ನಿವಾಸಿಗಳಾದ ಜೀವನ್, ಕರುಂಭಯ್ಯ ಮತ್ತು ಉಮೇಶ್ ಮಂಗಗಳನ್ನು ಬೇಟೆಯಾಡಿದ ಆರೋಪಿಗಳು. ಖಚಿತ ಮಾಹಿತಿ ಮೇರೆಗೆ ಕೆದಮಳ್ಳೂರು ಗ್ರಾಮದ ಉಮೇಶ್ ಅವರ ಲೈನ್ ಮನೆಯಲ್ಲಿ ಶೋಧನೆ ನಡೆಸಿದ ಅರಣ್ಯ ಇಲಾಖೆ ಸಿಬ್ಬಂದಿ, ಮನೆಯಲ್ಲಿ 3 ಕೆ.ಜಿ ಮಂಗನ ಮಾಂಸ ಮತ್ತು ಕೃತ್ಯಕ್ಕೆ ಬಳಸಿದ ಒಂಟಿ ನಳಿಕೆಯ ಕೋವಿಗಳನ್ನು ವಶಪಡಿಸಿಕೊಂಡಿದ್ದಾರೆ.

Forest Department Arrested 3 For Hunting Monkeys In Madikeri

 ಮೇಕೆ ಮೇಯಿಸುವ ನೆಪದಲ್ಲಿ ಉಡ ಬೇಟೆ: ಇಬ್ಬರ ಬಂಧನ ಮೇಕೆ ಮೇಯಿಸುವ ನೆಪದಲ್ಲಿ ಉಡ ಬೇಟೆ: ಇಬ್ಬರ ಬಂಧನ

ಕೃತ್ಯದಲ್ಲಿ ನಾಲ್ವರು ಆರೋಪಿಗಳು ತೊಡಗಿಕೊಂಡಿದ್ದು, ಒಬ್ಬ ಆರೋಪಿ ತಲೆಮರೆಸಿಕೊಂಡಿದ್ದಾನೆ. ಆರೋಪಿಗಳ ಮೇಲೆ ವನ್ಯಜೀವಿ ಸಂರಕ್ಷಣಾ ಕಾಯ್ದೆ 1976ರ ಅನ್ವಯ ಪ್ರಕರಣ ದಾಖಲಿಸಿಕೊಂಡು ನ್ಯಾಯಾಂಗ ಬಂಧನಕ್ಕೆ ಹಾಜರುಪಡಿಸಲಾಗಿದೆ.

English summary
Three men were arrested for hunting monkey's for meat at tomara kedamullur village of virajapete, madikeri
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X