ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗು ಪುನಶ್ಚೇತನ: 9 ಯುವ ಐಎಎಸ್ ಅಧಿಕಾರಿಗಳ ತಂಡ ರಚನೆ

By Nayana
|
Google Oneindia Kannada News

ಕೊಡಗು, ಆಗಸ್ಟ್ 24: ಪ್ರವಾಹದಿಂದ ತ್ತರಿಸಿ ಹೋಗಿರುವ ಕೊಡಗು ಜಿಲ್ಲೆಯಲ್ಲಿ ನಡೆಯುತ್ತಿರುವ ಪರಿಹಾರ ಕಾರ್ಯಾಚರಣೆ ಮೇಲ್ವಿಚಾರಣೆಗಾಗಿ ಐಎಎಸ್‌ ಅಧಿಕಾರಿಗಳ ತಂಡವನ್ನು ರಾಜ್ಯ ಸರ್ಕಾರ ನೇಮಕ ಮಾಡಿದೆ.

ಕೊಡಗು ಜಿಲ್ಲೆ ಪರಿಹಾರ ಕಾರ್ಯಕ್ಕೆ ಮೇಲ್ವಿಚಾರಣೆ ನಡೆಸಲು 2017 ನೇ ಬ್ಯಾಚ್ ನ 9 ಪ್ರೊಬೇಷನರಿ ಐಎಎಸ್ ಅಧಿಕಾರಿಗಳ ತಂಡವನ್ನು ರಾಜ್ಯ ಸರ್ಕಾರ ನೇಮಕ ಮಾಡಿದ್ದು, 9 ಅಧಿಕಾರಿಗಳು ಇಂದಿನಿಂದಲೇ ಜಾರಿಗೆ ಬರುವಂತೆ 15 ದಿನಗಳ ಕಾಲ ಕೊಡಗು ಜಿಲ್ಲೆಯಲ್ಲಿ ಕೈಗೊಳ್ಳುವ ಪರಿಹಾರ ಕಾರ್ಯಾಚರಣೆ ಉಸ್ತುವಾರಿ ನೋಡಿಕೊಳ್ಳುವಂತೆ ನಿಯೋಜನೆ ಮಾಡಿ ರಾಜ್ಯ ಸರ್ಕಾರದ ಅಧೀನ ಕಾರ್ಯದರ್ಶಿ ಆದೇಶ ಹೊರಡಿಸಿದ್ದಾರೆ.

Flood relief in Kodagu: Govt forms special IAS team

ಪ್ರವಾಹ ಪೀಡಿತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿದೆ ಖಾಸಗಿ ವಿದ್ಯಾ ಸಂಸ್ಥೆಪ್ರವಾಹ ಪೀಡಿತ ವಿದ್ಯಾರ್ಥಿಗಳಿಗೆ ಉಚಿತ ಶಿಕ್ಷಣ ನೀಡುತ್ತಿದೆ ಖಾಸಗಿ ವಿದ್ಯಾ ಸಂಸ್ಥೆ

2017 ರ ಬ್ಯಾಚ್ ನ ಐಎಎಸ್ ಅಧಿಕಾರಿಗಳಾದ ಕೆ.ಆರ್.ನಂದಿನಿ, ಶೇಖ್ ತನ್ವೀರ್ ಆಸಿಫ್,ಡಾ.ವೈ ನವೀನ್ ಭಟ್,ಅಕ್ಷಯ್ ಶ್ರೀಧರ್,ಡಾ.ದಿಲೀಶ್ ಸಸಿ, ಡಾ.ಕೆ.ನಂದಿನಿದೇವಿ, ಎಂ.ಪ್ರಿಯಾಂಗ, ಎಲ್.ಎಸ್.ಸುಧಾಕರ್, ಭನ್ವರ್ ಸಿಂಗ್ ಮೀನಾ ಅವರನ್ನು ಉಸ್ತುವಾರಿ ಕಾರ್ಯಕ್ಕೆ ನಿಯೋಜಿಸಲಾಗಿದ್ದು ಮೈಸೂರಿನ ಆಡಳಿತ ತರಬೇತಿ ಕೇಂದ್ರದ ಜಂಟಿ ನಿರ್ದೇಶಕಿ ವಿ.ಭಾಗ್ಯಲಕ್ಷ್ಮಿ ಅವರನ್ನು ಉಸ್ತುವಾರಿ ತಂಡದ ಸಮನ್ವಯಕಾರರನ್ನಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ.

English summary
State government has fomed nine probationer IAS officers team led by senior IAS officer V. Bhagyalaxni to look after Kodagu flood relief operations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X