ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಡಿಕೇರಿಗೆ ಬೆಂಗಳೂರು, ಮೈಸೂರಿನಿಂದ ಸರ್ಕಾರಿ ಬಸ್ ಸೇವೆ ಆರಂಭ

By Gururaj
|
Google Oneindia Kannada News

ಕೊಡಗು, ಆಗಸ್ಟ್ 19 : ಭಾರಿ ಮಳೆ ಮತ್ತು ಪ್ರವಾಹದಿಂದ ಕಂಗೆಟ್ಟಿರುವ ಕೊಡಗಿಗೆ ಕೆಎಸ್ಆರ್‌ಟಿಸಿ ಬಸ್ ಸೇವೆ ಪುನಃ ಆರಂಭವಾಗಿದೆ. ಶನಿವಾರ ರಾತ್ರಿಯಿಂದಲೇ ಮಡಿಕೇರಿಗೆ ಬಸ್ ಸಂಚಾರವನ್ನು ಪ್ರಾರಂಭಿಸಲಾಗಿದೆ.

ಬೆಂಗಳೂರು ಮತ್ತು ಮೈಸೂರಿನಿಂದ ಕೆಎಸ್ಆರ್‌ಟಿಸಿ ಬಸ್ಸುಗಳು ಸಂಚಾರವನ್ನು ಆರಂಭಿಸಿವೆ. ಆದರೆ, ಮಂಗಳೂರಿನಿಂದ ಮಡಿಕೇರಿ ತಲುಪುವುದು ಇನ್ನೂ ಸಾಧ್ಯವಾಗಿಲ್ಲ. ಈ ಮಾರ್ಗದಲ್ಲಿ ಹಲವು ಕಡೆ ಗುಡ್ಡ ಕುಸಿದು ಬಿದ್ದಿದೆ.

3 ದಿನದಲ್ಲಿ 89ಲಕ್ಷ ನಷ್ಟ ಅನುಭವಿಸಿದ ಕೆಎಸ್‌ಆರ್‌ಟಿಸಿ3 ದಿನದಲ್ಲಿ 89ಲಕ್ಷ ನಷ್ಟ ಅನುಭವಿಸಿದ ಕೆಎಸ್‌ಆರ್‌ಟಿಸಿ

ಮೈಸೂರು ಮತ್ತು ಬೆಂಗಳೂರಿನಿಂದ ಕುಶಾಲನಗರ ಮಾರ್ಗವಾಗಿ ಮಡಿಕೇರಿಗೆ, ಗೋಣಿಕೊಪ್ಪ ಮಾರ್ಗವಾಗಿ ವಿರಾಜಪೇಟೆಗೆ ಬಸ್ಸುಗಳು ಸಂಚಾರ ನಡೆಸುತ್ತಿವೆ. ಮಡಿಕೇರಿ-ಮಂಗಳೂರು ರಸ್ತೆಯಲ್ಲಿ 15 ಕಡೆ ಗುಡ್ಡ ಕುಸಿದಿದೆ ಎಂದು ಅಂದಾಜಿಸಲಾಗಿದೆ.

ಕೊಡಗಿನ ಜನರ ಜೊತೆ ಸರ್ಕಾರವಿದೆ : ಕುಮಾರಸ್ವಾಮಿಕೊಡಗಿನ ಜನರ ಜೊತೆ ಸರ್ಕಾರವಿದೆ : ಕುಮಾರಸ್ವಾಮಿ

ksrtc

ಹಾರಂಗಿ ಒಳ ಹರಿವು ಕಡಿಮೆ : ಸತತ ಹತ್ತು ದಿನಗಳ ಬಳಿಕ ಹಾರಂಗಿ ಜಲಾಶಯದ ಒಳ ಹರಿವು ಕಡಿಮೆಯಾಗಿದೆ. ಶನಿವಾರ ಹಾರಂಗಿ ಜಲಾಶಯದ ಒಳ ಹರಿವು 42603 ಕ್ಯೂಸೆಕ್ ಇತ್ತು. ಹೊರ ಹರಿವು 47110 ಇತ್ತು ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕಳೆದ 22 ಗಂಟೆಗಳಲ್ಲಿ ಮಡಿಕೇರಿಯಲ್ಲಿ 76 ಮಿ.ಮೀ ಮತ್ತು ವಿರಾಜಪೇಟೆಯಲ್ಲಿ 70 ಮಿ.ಮೀ.ಮಳೆಯಾಗಿದೆ ಎಂದು ಹವಾಮಾನ ಇಲಾಖೆ ಹೇಳಿದೆ.

English summary
Karnataka State Road Transport Corporation (KSRTC) began the bus service to Kodagu from Mysuru and Bengaluru after heavy rain and landslide.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X