ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಆದಿವಾಸಿ ಗುಡಿಸಿಲಿನ ಮೇಲೆ ಗುಂಡಿನ ದಾಳಿ: ಕೊಡಗಿನಲ್ಲಿ ನಕ್ಸಲರ ಅಟ್ಟಹಾಸ?!

ಕೊಡಗು ಜಿಲ್ಲೆ ದಿಡ್ಡಳ್ಳಿ ಗ್ರಾಮದ ಆದಿವಾಸಿ ಗುಡಿಸಿಲ ಮೇಲೆ ಗುಂದಿನ ದಾಳಿ ನಡೆದಿದ್ದು ಅದು, ನಕ್ಸಲ್ ಕೃತ್ಯವಿರಭುದೆಂದು ಶಂಕಿಸಲಾಗಿದೆ.

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಏಪ್ರಿಲ್ 12: ಕೊಡಗು ಜಿಲ್ಲೆಯ ವಿರಾಜಪೇಟೆ ತಾಲೂಕಿನ ಡಿಡ್ಡಳ್ಳಿಯ ಆದಿವಾಸಿಗಳ ಗುಡಿಸಲಿನ ಮೇಲೆ ಸೋಮವಾರ ರಾತ್ರಿ ಗುಂಡಿನ ದಾಳಿ ನಡೆದಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಸೋಮವಾರ ರಾತ್ರಿ ಬೈಕಿನಲ್ಲಿ ಬಂದ ದುಷ್ಕರ್ಮಿಗಳು ಗುಡಿಸಿಲನ ಮೇಲೆ ಮೂರು ಸುತ್ತು ಗುಂಡುಹಾರಿಸಿ ಪರಾರಿಯಾಗಿದ್ದಾರೆ. ಬೈಕ್ ನಿಂತಿದ್ದ ಜಾಗದಲ್ಲಿ ಕೆಲವು ಕರಪತ್ರಗಳು ಸಿಕ್ಕಿದ್ದು, ಇದು ನಕ್ಸಲರ ಕೃತ್ಯವಿರಬಹುದೆಂದು ಶಂಕಿಸಲಾಗಿದೆ.[ಮಂಗಳೂರು: ನ್ಯಾಯಾಲಯ ಆವರಣದಲ್ಲೇ ಬಂಧಿತನಿಂದ ನಕ್ಸಲ್ ಘೋಷಣೆ]

Firing on Tribal hut in Kodagu district

ಇಲ್ಲಿನ ಸಿದ್ದಾಪುರ ಪೊಲೀಸ್ ಠಾಣೆಯಲ್ಲಿ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿದ್ದು, ದುಷ್ಕರ್ಮಿಗಳ ಪತ್ತೆಗೆ ಪೊಲೀಸರು ಬಲೆಬೀಸಿದ್ದಾರೆ. ದುಷ್ಕರ್ಮಿಗಳ ವಿರುದ್ಧ ಭಾರತೀಯ ಶಸ್ತ್ರಾಸ್ತ್ರ ಕಾಯ್ದೆ 3/25 A ಅಡಿಯಲ್ಲಿ ಬಂದೂಕು ದುರ್ಬಳಕೆ ಪ್ರಕರಣ ದಾಖಲಿಸಲಾಗಿದೆ.

English summary
Firing on tribal hut in Diddalli village, Virajapete taluk, Kodagu district creates tension among the tribal people. Police has suspected it as a naxal attack. Police voluntarily registerd complaint.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X