ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗಿನಲ್ಲಿ ಅಬ್ಬರಿಸುತ್ತಿದೆ ಆಶ್ಲೇಷ ಮಳೆ: ಎದುರಾಗಿದೆ ಪ್ರವಾಹದ ಭೀತಿ

|
Google Oneindia Kannada News

ಮಡಿಕೇರಿ, ಆಗಸ್ಟ್‌ 03: ಜುಲೈ ಮೊದಲ ವಾರದಲ್ಲಿ ಆರಂಭವಾದ ಪುನರ್ವಸು ಮಳೆ ಅಬ್ಬರಿಸಿತ್ತು. ಇದರ ಪರಿಣಾಮ, ಕಾವೇರಿ ಸೇರಿದಂತೆ ನದಿ, ಹೊಳೆ, ತೊರೆಗಳಲ್ಲಿ ನೀರಿನ ಹರಿವು ಹೆಚ್ಚಾಗಿತ್ತು. ಅಷ್ಟೇ ಅಲ್ಲದೆ ಹಾರಂಗಿ ಜಲಾಶಯವೂ ಭರ್ತಿಯಾಗಿತ್ತು.

Recommended Video

SpaceX and NASA completes space mission successfully | Oneindia Kannada

ಆದರೆ ನಂತರ ಆರಂಭವಾದ ಪುಷ್ಯ ಮಳೆ ಸುರಿಯದೆ ಬಿಡುವು ನೀಡಿತ್ತು. ಇದೀಗ ಆಶ್ಲೇಷ ಮಳೆ ಆಗಸ್ಟ್ 2ರಿಂದ ಶುರುವಾಗಿದ್ದು, ಆರಂಭದ ದಿನದಿಂದಲೇ ಅಬ್ಬರಿಸತೊಡಗಿದೆ. ಕೊಡಗಿನಲ್ಲಿ ಕಕ್ಕಡ ಮಾಸ (ಆಟಿ ತಿಂಗಳು) ಎಂದರೆ ನಡು ಮಳೆಗಾಲದ ಕಾಲ. ಈ ವೇಳೆಯಲ್ಲಿ ಮಳೆ ಅಧಿಕವಾಗಿ ಸುರಿದು ತೊರೆ, ಹೊಳೆ, ನದಿ ಧುಮ್ಮಿಕ್ಕಿ ಹರಿಯುತ್ತದೆ. ಕೆಲವು ಗ್ರಾಮಗಳು ಹೊರ ಜಗತ್ತಿನ ಸಂಪರ್ಕ ಕಳೆದುಕೊಂಡು ದ್ವೀಪಗಳಾಗಿ ಬಿಡುತ್ತವೆ. ಈ ಬಾರಿ ಇದುವರೆಗೆ ಪ್ರವಾಹ ಬರುವ ರೀತಿಯಲ್ಲಿ ಮಳೆ ಸುರಿದಿಲ್ಲ.

 ಚೇತರಿಸಿದ ಮುಂಗಾರು ಮಳೆ

ಚೇತರಿಸಿದ ಮುಂಗಾರು ಮಳೆ

ಕಳೆದ ತಿಂಗಳು ಭಾಗಮಂಡಲ ತ್ರಿವೇಣಿ ಸಂಗಮದಲ್ಲಿ ಸ್ವಲ್ಪ ಮಟ್ಟಿಗೆ ನೀರು ಕಾಣಿಸಿಕೊಂಡು ಸಂಪರ್ಕ ಕಡಿತಗೊಂಡಿತ್ತಾದರೂ ನಂತರ ಸರಿಹೋಗಿತ್ತು. ಇದೀಗ ಮತ್ತೆ ಎರಡು ದಿನಗಳಿಂದ ಮಳೆ ಸುರಿಯುತ್ತಿರುವುದನ್ನು ನೋಡಿದರೆ ಮುಂಗಾರು ಚೇತರಿಸಿಕೊಳ್ಳುವ ಎಲ್ಲ ಲಕ್ಷಣಗಳು ಕಾಣುತ್ತಿವೆ. ಜಿಲ್ಲೆಯಲ್ಲಿ ಕಳೆದ 10 ದಿನಗಳಿಂದ 10 ಮಿ.ಮೀ ಗಿಂತಲೂ (1 ಸೆಂ.ಮೀ.) ಕಡಿಮೆ ಮಳೆಯಾಗಿದೆ. ಆದರೆ ಆಗಸ್ಟ್, 02 ರಿಂದ ಭಾರಿ ಮಳೆಯಾಗುತ್ತಿದೆ.

ಮತ್ತೆ ಚುರುಕಾದ ಮುಂಗಾರು: ಕೊಡಗಿನಲ್ಲಿ ಆರೆಂಜ್‌ ಅಲರ್ಟ್ ಘೋಷಣೆಮತ್ತೆ ಚುರುಕಾದ ಮುಂಗಾರು: ಕೊಡಗಿನಲ್ಲಿ ಆರೆಂಜ್‌ ಅಲರ್ಟ್ ಘೋಷಣೆ

 ಎರಡು ದಿನಗಳಿಂದ ಭಾರೀ ಮಳೆ

ಎರಡು ದಿನಗಳಿಂದ ಭಾರೀ ಮಳೆ

ಜುಲೈ ತಿಂಗಳ ಕೊನೆ ವಾರದಲ್ಲಿ ವ್ಯಾಪಕ ಮಳೆಯಾಗಬೇಕಿದ್ದ ಅವಧಿಯಲ್ಲಿ ಮಳೆ ಕಡಿಮೆಯಾಗಿದ್ದನ್ನು ಗಮನಿಸಿದಾಗ, ಈ ಬಾರಿ ಅಷ್ಟಾಗಿ ಮಳೆಯಾಗುವುದಿಲ್ಲ ಎಂದು ಭಾವಿಸಲಾಗಿತ್ತು. ಆದರೆ ಭಾನುವಾರದಿಂದ ಸುರಿಯುತ್ತಿರುವ ಧಾರಾಕಾರ ಮಳೆ ನೋಡಿದಾಗ ಈ ಬಾರಿಯೂ ಹೆಚ್ಚು ಮಳೆಯಾಗುವ ಸಾಧ್ಯತೆಯಿರುವುದರಿಂದಾಗಿ ಜಿಲ್ಲಾಡಳಿತ ಎಚ್ಚೆತ್ತುಕೊಂಡು ಅಗತ್ಯ ಕ್ರಮಕ್ಕೆ ಮುಂದಾಗಿದೆ.

 ಮತ್ತೆ ಹಾರಂಗಿ ಒಳ ಹರಿವಿನ ಪ್ರಮಾಣ ಹೆಚ್ಚಳ

ಮತ್ತೆ ಹಾರಂಗಿ ಒಳ ಹರಿವಿನ ಪ್ರಮಾಣ ಹೆಚ್ಚಳ

ಎರಡು ದಿನದಲ್ಲಿ ಸುರಿದ ಮಳೆಯಿಂದಾಗಿ ಹಾರಂಗಿ ಜಲಾಶಯದ ನೀರಿನ ಒಳ ಹರಿವಿನ ಪ್ರಮಾಣ ಹೆಚ್ಚಾಗಿದೆ. ಸದ್ಯ 2423 ಕ್ಯುಸೆಕ್ ನೀರು ಹರಿದು ಬರುತ್ತಿದೆ. ಕೆಲ ದಿನಗಳ ಹಿಂದೆಯಷ್ಟೆ ಜಲಾಶಯದ ಒಳ ಹರಿವು ಕಡಿಮೆಯಾದ ಹಿನ್ನೆಲೆಯಲ್ಲಿ ನದಿಗೆ ಬಿಡಲಾಗುತ್ತಿದ್ದ ನೀರನ್ನು ತಡೆಹಿಡಿಯಲಾಗಿತ್ತು. ಇದೀಗ ಒಳ ಹರಿವು ಹೆಚ್ಚಾಗಿರುವುದರಿಂದ ಹೊರಕ್ಕೆ 2750 ಕ್ಯುಸೆಕ್ ನೀರನ್ನು ಬಿಡಲಾಗುತ್ತಿದೆ.

ಕೊಡಗಿನಲ್ಲಿ ಬಿಡುವು ಪಡೆದುಕೊಂಡ ಮುಂಗಾರು ಮಳೆಕೊಡಗಿನಲ್ಲಿ ಬಿಡುವು ಪಡೆದುಕೊಂಡ ಮುಂಗಾರು ಮಳೆ

 ಇನ್ನಷ್ಟು ಮಳೆ ಹೆಚ್ಚುವ ಸಾಧ್ಯತೆ

ಇನ್ನಷ್ಟು ಮಳೆ ಹೆಚ್ಚುವ ಸಾಧ್ಯತೆ

ಜಿಲ್ಲೆಯಲ್ಲಿ ಒಂದು ದಿನದ ಅವಧಿಯಲ್ಲಿ ಸರಾಸರಿ 50.92 ಮಿ.ಮೀ. ಸುರಿದಿದ್ದು ಮುಂದಿನ ದಿನಗಳಲ್ಲಿ ಮಳೆ ಅಬ್ಬರ ಇನ್ನಷ್ಟು ಹೆಚ್ಚಾಗುವ ಮುನ್ಸೂಚನೆ ನೀಡಿದೆ. ಮಡಿಕೇರಿ ತಾಲೂಕಿನಲ್ಲಿ 52.30 ಮಿ.ಮೀ., ವಿರಾಜಪೇಟೆ ತಾಲೂಕಿನಲ್ಲಿ 46.20ಮಿ.ಮೀ, ಸೋಮವಾರಪೇಟೆ ತಾಲೂಕಿನಲ್ಲಿ 54.25 ಮಿ.ಮೀ. ಮಳೆ ದಾಖಲಾಗಿದೆ. ಇನ್ನು ಮಳೆಯ ಪ್ರಮಾಣ ಕೂಡ ಕಳೆದ ವರ್ಷಕ್ಕಿಂತ ಹೆಚ್ಚಾಗಿಯೇ ಇದ್ದು, ಜನವರಿಯಿಂದ ಇಲ್ಲಿಯವರೆಗಿನ 873 ಮಿ.ಮೀ ಮಳೆ ದಾಖಲಾಗಿದೆ. ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗುತ್ತಿದ್ದು, ಅತಿ ಹೆಚ್ಚು 108 ಮಿ.ಮೀ ಮಳೆ ಸೋಮವಾರಪೇಟೆಯ ಶಾಂತಳ್ಳಿಯಲ್ಲಿ ಸುರಿದಿದೆ.

English summary
Ashlesh rain started all over kodagu district since two days. The fear of flood arises in people
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X