ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕಟ್ಟಡ ಕುಸಿತದ ಭೀತಿ: ಕೊಡಗು ಜಿಲ್ಲಾಧಿಕಾರಿ ಕಚೇರಿ ಸ್ಥಳಾಂತರ

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಆಗಸ್ಟ್ 07: ಮಡಿಕೇರಿ-ಮಂಗಳೂರು ಹೆದ್ದಾರಿಯಲ್ಲಿ ಭೂಕುಸಿತವಾದ ಬೆನ್ನಲ್ಲೇ ಕೊಡಗು ಜಿಲ್ಲಾಧಿಕಾರಿ ಕಚೇರಿಯನ್ನು ಇಲ್ಲಿನ ನಗರ ಸಭಾ ಕಾರ್ಯಾಲಯಕ್ಕೆ ಸ್ಥಳಾಂತರಿಸಲು ನಿರ್ಧರಿಸಲಾಗಿದೆ.

Recommended Video

Karnataka Rain : ನದಿ ಮದ್ಯೆ ಸಿಲುಕಿದ್ದ ಕೋತಿಗಳನ್ನು ರಕ್ಷಿಸಿದ ರೋಚಕ ದೃಶ್ಯ | Oneindia Kannada

ಹೆದ್ದಾರಿ ಪಕ್ಕದ ಗುಡ್ಡದ ಮೇಲಿರುವ ಜಿಲ್ಲಾಡಳಿತ ಭವನವನ್ನು 2014 ರಲ್ಲಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಿದ್ದರು. ಈ ಜಿಲ್ಲಾಡಳಿತ ಭವನದಲ್ಲಿ ಜಿಲ್ಲಾಧಿಕಾರಿ, ಸಹಾಯಕ ಕಮೀಷನರ್, ಗಣಿ ಮತ್ತು ಭೂವಿಜ್ಞಾನ, ಕಾರ್ಮಿಕ, ಶಿಕ್ಷಣ, ಸರ್ವೇ ಇಲಾಖೆ ಸೇರಿದಂತೆ ಅನೇಕ ಇಲಾಖೆಗಳ ಜಿಲ್ಲಾ ಕಚೇರಿಗಳು ಕಾರ್ಯ ನಿರ್ವಹಿಸುತ್ತಿದ್ದವು.

ಭೂಕುಸಿತ ಉಂಟಾಗಿದ್ದ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟಕ್ಕೆ ಸಚಿವ ವಿ.ಸೋಮಣ್ಣ ಭೇಟಿಭೂಕುಸಿತ ಉಂಟಾಗಿದ್ದ ತಲಕಾವೇರಿಯ ಬ್ರಹ್ಮಗಿರಿ ಬೆಟ್ಟಕ್ಕೆ ಸಚಿವ ವಿ.ಸೋಮಣ್ಣ ಭೇಟಿ

14.43 ಕೋಟಿ ರುಪಾಯಿ ವೆಚ್ಚದಲ್ಲಿ ನಿರ್ಮಿಸಲಾದ ಈ ಜಿಲ್ಲಾಡಳಿತ ಭವನದಲ್ಲಿರುವ ಉಳಿದ ಇಲಾಖೆಗಳ ಕಚೇರಿಗಳನ್ನು ಸದ್ಯಕ್ಕೆ ಬಂದ್‌ ಮಾಡಲು ನಿರ್ಧರಿಸಲಾಗಿದೆ.

Fear Of Collapse: Kodagu District Collector Office Relocates

ಮಣ್ಣು ಕುಸಿಯುವ ಸಾಧ್ಯತೆ ಇರುವುದರಿಂದ ತಜ್ಞರ ಸಲಹೆಯ ಮೇರೆಗೆ ಈ ಭವನವನ್ನು ಮುಚ್ಚಲಾಗುವುದು ಎನ್ನಲಾಗಿದೆ. ಮಳೆ ಇಳಿಮುಖವಾಗುವವರೆಗೂ ಜಿಲ್ಲಾಧಿಕಾರಿ ನಗರಸಭೆಯ ಕಚೇರಿಯಿಂದಲೇ ಕಾರ್ಯನಿರ್ವಹಿಸಲಿದ್ದಾರೆ.

English summary
The Kodagu District Collector's Office has been shifted to the city council office after a landslide on the Madikeri-Mangaluru highway.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X