ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

40 ವರ್ಷಗಳಿಂದಲೂ ಕತ್ತಲೆಯಲ್ಲೇ ಜೀವನ; ಮಡಿಕೇರಿಯಲ್ಲಿ ವಿದ್ಯುತ್ ವಂಚಿತ ಮನೆ

By Coovercolly Indresh
|
Google Oneindia Kannada News

ಮಡಿಕೇರಿ, ಸೆಪ್ಟೆಂಬರ್ 29; ತಂತ್ರಜ್ಞಾನ, ಜಗತ್ತು ಎಷ್ಟೇ ಮುಂದುವರೆದರೂ ಇನ್ನೂ ಕನಿಷ್ಠ ಮೂಲ ಸೌಕರ್ಯಗಳೇ ಇಲ್ಲದೆ ಜನರು ಬದುಕು ದೂಡುತ್ತಿರುವ ಹಲವು ಉದಾಹರಣೆಗಳು ಇಂದಿಗೂ ನಮಗೆ ಕಾಣಸಿಗುತ್ತವೆ. ಜೀವನಕ್ಕೆ ಅಗತ್ಯ ಸೌಲಭ್ಯಗಳು ದೊರಕದೇ ಪ್ರತಿನಿತ್ಯ ಕಷ್ಟಪಡುವ ಹಲವಾರು ಜನ ಇದ್ದಾರೆ. ಇದಕ್ಕೆ ಉತ್ತಮ ಉದಾಹರಣೆ ಎಂದರೆ, ಮಡಿಕೇರಿಯಲ್ಲಿನ ಈ ಮನೆಯವರ ಬದುಕು.

ಗ್ರಾಮೀಣ ಭಾಗದ ಪ್ರತೀ ಮನೆಗೂ ವಿದ್ಯುತ್‌ ಸಂಪರ್ಕವನ್ನು ಕಲ್ಪಿಸಿಕೊಡಬೇಕೆಂದು ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ವಿವಿಧ ಯೋಜನೆಗಳನ್ನು ಜಾರಿಗೆ ತಂದಿವೆ. ಕತ್ತಲೆಯಲ್ಲಿದ್ದ ಎಷ್ಟೋ ಗ್ರಾಮಗಳು ಯೋಜನೆಯಡಿಯಲ್ಲಿ ವಿದ್ಯುತ್ ಸಂಪರ್ಕವನ್ನು ಪಡೆದುಕೊಂಡು ಬೆಳಗುತ್ತಿವೆ. ಆದರೆ ಮಡಿಕೇರಿಯಲ್ಲಿನ ಈ ಮನೆಗೆ ಮಾತ್ರ ನಾಲ್ಕು ದಶಕ ಕಳೆದರೂ ವಿದ್ಯುತ್ ಭಾಗ್ಯ ದೊರೆತಿಲ್ಲ. ಮುಂದೆ ಓದಿ...

 ನಾಲ್ಕು ದಶಕದಿಂದಲೂ ವಿದ್ಯುತ್ ಇಲ್ಲ

ನಾಲ್ಕು ದಶಕದಿಂದಲೂ ವಿದ್ಯುತ್ ಇಲ್ಲ

ಮಡಿಕೇರಿ ತಾಲ್ಲೂಕಿನ ಬಲಮುರಿ ಗ್ರಾಮದಲ್ಲಿನ ಈ ಮನೆಯೊಂದಕ್ಕೆ ಮಾತ್ರ ಇಂದಿಗೂ ವಿದ್ಯುತ್ ಸಂಪರ್ಕ ಕಲ್ಪಿಸಲು ಸಾಧ್ಯವಾಗಿಲ್ಲ. ಕಳೆದ ನಾಲ್ಕು ದಶಕಗಳಿಂದಲೂ ವಿದ್ಯುತ್‌ ಸಂಪರ್ಕ ಇಲ್ಲದೆ ಈ ಕುಟುಂಬ ಕತ್ತಲೆಯಲ್ಲೇ ಜೀವನ ಸಾಗಿಸುತ್ತಿದೆ. ಒಬ್ಬ ಮಹಿಳೆ, ಆಕೆಯ ತಂದೆ, ಇಬ್ಬರು ಮಕ್ಕಳು ಈ ಕತ್ತಲೆ ನಡುವಿನಲ್ಲಿಯೇ ದಿನ ದೂಡುತ್ತಿದ್ದಾರೆ. ಮಕ್ಕಳಿಗೆ ಪಾಠವೂ ದೀಪದ ಬೆಳಕಿನಲ್ಲೇ ಸಾಗುತ್ತದೆ.

ವಿದ್ಯುತ್ ಬಿಲ್ ಕಂಡು ಹೈದ್ರಾಬಾದ್‌ನ ವ್ಯಕ್ತಿಗೆ ಶಾಕ್: 6.67 ಲಕ್ಷ ರೂಪಾಯಿವಿದ್ಯುತ್ ಬಿಲ್ ಕಂಡು ಹೈದ್ರಾಬಾದ್‌ನ ವ್ಯಕ್ತಿಗೆ ಶಾಕ್: 6.67 ಲಕ್ಷ ರೂಪಾಯಿ

 ಮನೆ ಮುಂದೆಯೇ ಹಾದು ಹೋಗಿದೆ ವಿದ್ಯುತ್ ತಂತಿ

ಮನೆ ಮುಂದೆಯೇ ಹಾದು ಹೋಗಿದೆ ವಿದ್ಯುತ್ ತಂತಿ

ಹಾಗೆಂದು ಈ ಗ್ರಾಮಕ್ಕೇ ವಿದ್ಯುತ್ ಸಂಪರ್ಕ ಇಲ್ಲ ಎಂದಿಲ್ಲ. ಈ ಮನೆಯ ಮುಂದೆಯೇ ವಿದ್ಯುತ್‌ ತಂತಿ ಹಾದು ಹೋಗಿದೆ. ಆದರೂ ಮನೆಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ಆಗಿಲ್ಲ. ತಮಗಿರುವ ಮುಕ್ಕಾಲು ಎಕರೆ ಕಾಫಿ ತೋಟದಲ್ಲಿ ಪುಟ್ಟ ಮನೆ ಕಟ್ಟಿಕೊಂಡಿರುವ ಚಿತ್ರಾ ಅವರು ಮನೆಗೆ ವಿದ್ಯುತ್ ಸಂಪರ್ಕ ಕಲ್ಪಿಸಿಕೊಳ್ಳಲು ಸಾಧ್ಯವಾಗದೇ ಹಲವು ವರ್ಷಗಳನ್ನೇ ಕಳೆದಿದ್ದಾರೆ.

 ವಿದ್ಯುತ್‌ ಸಂಪರ್ಕ ಏಕೆ ಸಾಧ್ಯವಾಗಿಲ್ಲ?

ವಿದ್ಯುತ್‌ ಸಂಪರ್ಕ ಏಕೆ ಸಾಧ್ಯವಾಗಿಲ್ಲ?

ಚಿತ್ರಾ ಅವರ ಮನೆಗೆ ವಿದ್ಯುತ್‌ ಸಂಪರ್ಕ ಕಲ್ಪಿಸಲು ಕನಿಷ್ಠ ಹತ್ತು ವಿದ್ಯುತ್ ಕಂಬಗಳು ಬೇಕು ಎಂದು ಸೆಸ್ಕ್ ಅಧಿಕಾರಿಗಳು ತಿಳಿಸಿದ್ದಾರೆ. ಒಂದು ಕಂಬಕ್ಕೆ ಅಂದಾಜು 5,000 ರೂ ಬೇಕಾಗುತ್ತದೆ. ಆದರೆ ಇದಕ್ಕಾಗಿ ಹಣ ಕಟ್ಟಲು ಆಗದ್ದರಿಂದ ಇನ್ನೂ ವಿದ್ಯುತ್‌ ಸಂಪರ್ಕ ದೊರಕಿಸಿಕೊಳ್ಳಲು ಸಾಧ್ಯವಾಗಿಲ್ಲ ಎಂದು ಹೇಳಿಕೊಂಡಿದ್ದಾರೆ ಚಿತ್ರಾ.

ಲಂಬಾಣಿ ಸಮುದಾಯದವರಿಗೆ ಪಡಿತರ ಅಂಗಡಿ ಪರವಾನಗಿಲಂಬಾಣಿ ಸಮುದಾಯದವರಿಗೆ ಪಡಿತರ ಅಂಗಡಿ ಪರವಾನಗಿ

Recommended Video

High Command ಹತ್ರ ಮಾತು ಕಥೆ in Process | Oneindia Kannada
 ಸೌಭಾಗ್ಯ ಯೋಜನೆಯಡಿ ವಿದ್ಯುತ್‌ ಸಂಪರ್ಕದ ಭರವಸೆ

ಸೌಭಾಗ್ಯ ಯೋಜನೆಯಡಿ ವಿದ್ಯುತ್‌ ಸಂಪರ್ಕದ ಭರವಸೆ

ಚಿತ್ರಾ ಅವರು ಸದ್ಯ ಮಡಿಕೇರಿಯಲ್ಲಿ ಹೋಂ ಗಾರ್ಡ್‌ ಕೆಲಸ ಮಾಡುತ್ತಿದ್ದಾರೆ. ಬಡತನದಲ್ಲಿರುವ ಈ ಕುಟುಂಬವು ವಿದ್ಯುತ್‌ ಇಲ್ಲದ ಕಾರಣಕ್ಕೆ ಹಲವಾರು ತೊಂದರೆಗಳನ್ನು ಅನುಭವಿಸುತ್ತಿದೆ. ಈ ಕುರಿತು ಸೆಸ್ಕ್ ಸಹಾಯಕ ಕಾರ್ಯನಿರ್ವಾಹಕ ಎಂಜಿನಿಯರ್‌ ಪ್ರವೀಣ್ ಕುಮಾರ್‌, ಸದ್ಯಕ್ಕೆ ಸೌಭಾಗ್ಯ ಯೋಜನೆಯಡಿಯಲ್ಲಿ ಕುಟುಂಬಕ್ಕೆ ವಿದ್ಯುತ್‌ ಸಂಪರ್ಕ ಒದಗಿಸಿಕೊಡುವುದಾಗಿ ಭರವಸೆ ನೀಡಿದ್ದಾರೆ.

English summary
This house in the village of Balamuri in Madikeri taluk deprived of electricity till now. The family has been living in darkness for the past four decades without electricity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X