ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೋವಿಡ್-19 ನಿಯಂತ್ರಣಕ್ಕೆ ಕೊಡಗಿನಲ್ಲಿ ಪರಿಣಾಮಕಾರಿ ಕ್ರಮ : ಡಿಸಿ

|
Google Oneindia Kannada News

ಮಡಿಕೇರಿ, ಜುಲೈ 3: ರಾಜ್ಯದಲ್ಲಿ ಕೊರೊನಾ ವೈರಸ್ ಸೋಂಕು ಪ್ರಕರಣಗಳು ಹೆಚ್ಚುತ್ತಿದ್ದರೂ ಅದನ್ನು ಸಮರ್ಥವಾಗಿ ನಿಭಾಯಿಸುವ ಕೊಡಗು ಜಿಲ್ಲಾಡಳಿತ ಕಠಿಣ ಕ್ರಮಕ್ಕೆ ಮುಂದಾಗಿದ್ದು, 30 ಕಂಟೈನ್ಮೆಂಟ್ ವಲಯಗಳನ್ನು ಘೋಷಣೆ ಮಾಡಿದ್ದಲ್ಲದೆ, ಸೋಂಕಿತರ ಚಿಕಿತ್ಸೆಗಾಗಿ ಪರಿಣಾಮಕಾರಿ ಕಾರ್ಯಕ್ರಮ ಜಾರಿಗೊಳಿಸಲಾಗಿದೆ.

ಕೊಡಗು ಜಿಲ್ಲಾಡಳಿತ ಕೈಗೊಂಡಿರುವ ಪರಿಣಾಮಕಾರಿ ಕ್ರಮಗಳ ಕುರಿತಂತೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾಹಿತಿ ನೀಡಿದ್ದು, ಮಡಿಕೇರಿ ತಾಲೂಕಿನಲ್ಲಿ ಒಟ್ಟು 13 ನಿಯಂತ್ರಿತ ಪ್ರದೇಶಗಳನ್ನು ಘೋಷಣೆ ಮಾಡಲಾಗಿದೆ. ನಗರದ ಓಂಕಾರೇಶ್ವರ ದೇವಾಲಯ ರಸ್ತೆ, ಕೋಟೆ ಮಾರಿಯಮ್ಮ ದೇವಾಲಯ ರಸ್ತೆ, ಡೈರಿ ಫಾರಂ, ಪುಟಾಣಿ ನಗರ, ತಾಳತ್ ಮನೆ ಪ್ರದೇಶ, ಕೊಳಗದಾಳು, ಕಗ್ಗೋಡ್ಲು, ಮೂರ್ನಾಡಿನ ಸುಭಾಷ್ ನಗರ, ಚಾಮುಂಡೇಶ್ವರಿ ನಗರ, ಹೆಬ್ಬೆಟ್ಟಗೇರಿ, ಮಡಿಕೇರಿ ಆಸ್ಪತ್ರೆ ವಸತಿ ಗೃಹ, ಮಹದೇವ ಪೇಟೆ, ಭಗವತಿ ನಗರ, ಸೋಮವಾರಪೇಟೆ ತಾಲೂಕಿನಲ್ಲಿ ಒಟ್ಟು 9 ನಿಯಂತ್ರಿತ ಪ್ರದೇಶಗಳಿವೆ.

ಕೊಡಗಿನಲ್ಲಿ ಕೊರೊನಾ ಮಟ್ಟ ಹಾಕಲು ನಿರ್ಬಂಧಗಳನ್ನು ಬಿಗಿ ಮಾಡಿದ ಜಿಲ್ಲಾಡಳಿತಕೊಡಗಿನಲ್ಲಿ ಕೊರೊನಾ ಮಟ್ಟ ಹಾಕಲು ನಿರ್ಬಂಧಗಳನ್ನು ಬಿಗಿ ಮಾಡಿದ ಜಿಲ್ಲಾಡಳಿತ

ಒಟ್ಟು 8 ನಿಯಂತ್ರಿತ ಪ್ರದೇಶಗಳು

ಒಟ್ಟು 8 ನಿಯಂತ್ರಿತ ಪ್ರದೇಶಗಳು

ಶಿರಂಗಾಲ, ದೊಡ್ಡಳ್ಳಿ, ಮುಳ್ಳೂರು, ಬಳಗುಂದ (ಕರ್ಕಳ್ಳಿ), ಹುಲಸೆ, ರಥ ಬೀದಿ ಕುಶಾಲನಗರ, ಬೆಟ್ಟದಕಾಡು (ನೆಲ್ಲಿಹುದಿಕೇರಿ), ಅಣ್ಣೇಗೌಡ ಬಡಾವಣೆ ಕುಶಾಲನಗರ, ಗುಂಡೂರಾವ್ ಬಡಾವಣೆ ಶನಿವಾರಸಂತೆ, ವೀರಾಜಪೇಟೆ ತಾಲೂಕಿನಲ್ಲಿ ಒಟ್ಟು 8 ನಿಯಂತ್ರಿತ ಪ್ರದೇಶಗಳಿವೆ. ಬಿಟ್ಟಂಗಾಲ, ಪಾಲಿಬೆಟ್ಟ, ಹುಂಡಿ, ವಿರಾಜಪೇಟೆಯ ಮೀನುಪೇಟೆ, ಹೊಲಮಾಳ (ಚೆನ್ನಯ್ಯನ ಕೋಟೆ), ಕೆ.ಇ.ಬಿ ರೋಡ್ (ಗೋಣಿಕೊಪ್ಪ), ತಿತಿಮತಿ, ಶಾಂತಿನಗರ (ವಿರಾಜಪೇಟೆ) ದಲ್ಲಿ ಕಂಟೈನ್ಮೆಂಟ್ ವಲಯವನ್ನಾಗಿ ಘೋಷಿಸಲಾಗಿದೆ .

ಕೋವಿಡ್ ತಪಾಸಣೆ, ಪರೀಕ್ಷೆಯಲ್ಲಿ ಕೊಡಗು ಜಿಲ್ಲೆ ಮುಂಚೂಣಿ

ಕೋವಿಡ್ ತಪಾಸಣೆ, ಪರೀಕ್ಷೆಯಲ್ಲಿ ಕೊಡಗು ಜಿಲ್ಲೆ ಮುಂಚೂಣಿ

ಕೊಡಗು ಜಿಲ್ಲೆಯಲ್ಲಿ ಪರಿಣಾಮಕಾರಿಯಾಗಿ ಕೋವಿಡ್-19 ನಿಯಂತ್ರಿಸುವ ನಿಟ್ಟಿನಲ್ಲಿ ಅತೀ ಹೆಚ್ಚು ಕೊರೊನಾ ವೈರಸ್ ಪರೀಕ್ಷೆಗಳನ್ನು ನಡೆಸಲಾಗಿದೆ. ಈ ಸಂಬಂಧ ಕಳೆದ 10 ದಿನಗಳಲ್ಲಿ ಕೋವಿಡ್ ತಪಾಸಣೆ, ಪರೀಕ್ಷೆಯಲ್ಲಿ ಕೊಡಗು ಜಿಲ್ಲೆ ಮುಂಚೂಣಿಯಲ್ಲಿದೆ. ಜಿಲ್ಲೆಯ ಜನಸಂಖ್ಯೆಯ ಆಧಾರದನ್ವಯ ಗುರುವಾರದ ವೇಳೆಗೆ ಕೊರೊನಾ ವೈರಸ್ ಪರೀಕ್ಷೆಯಲ್ಲಿ ಜಿಲ್ಲೆಯಲ್ಲಿ ಗರಿಷ್ಠ 4,539 ಮಾದರಿಗಳನ್ನು ಪರೀಕ್ಷಿಸಲಾಗಿದೆ.

ಹೊರಗಿನಿಂದ ಜಿಲ್ಲೆಗೆ ಬರುವವರಿಗೆ ಎಚ್ಚರಿಕೆ ಕೊಟ್ಟಿರುವ ಕೊಡಗು ಡಿಸಿಹೊರಗಿನಿಂದ ಜಿಲ್ಲೆಗೆ ಬರುವವರಿಗೆ ಎಚ್ಚರಿಕೆ ಕೊಟ್ಟಿರುವ ಕೊಡಗು ಡಿಸಿ

ಕೊರೊನಾ ಸೋಂಕಿತರನ್ನು ದಾಖಲಿಸಿ ಆರೈಕೆ

ಕೊರೊನಾ ಸೋಂಕಿತರನ್ನು ದಾಖಲಿಸಿ ಆರೈಕೆ

ಕೋವಿಡ್-19 ರ ಸಂಬಂಧ ಜಿಲ್ಲೆಯಲ್ಲಿ ದಿನೇ ದಿನೇ ಸೋಂಕು ಪ್ರಕರಣಗಳು ಹೆಚ್ಚಾಗುತ್ತಿರುವುದರಿಂದ ಜಿಲ್ಲೆಯ ಮೂರು ತಾಲ್ಲೂಕಿನಲ್ಲಿ ಸರ್ಕಾರಿ ಸಂಸ್ಥೆಗಳನ್ನು ಕೋವಿಡ್ ಪ್ರಕರಣಗಳ ಆರೈಕೆ ಕೇಂದ್ರಗಳಿಗಾಗಿ ಗುರುತಿಸಲಾಗಿದೆ. ಜುಲೈ 2 ರಿಂದ ಈ ಕೇಂದ್ರಗಳಲ್ಲಿ ಲಕ್ಷಣ ರಹಿತ ಉತ್ತಮ ಆರೋಗ್ಯ ಸ್ಥಿತಿ ಹೊಂದಿರುವ ಕೊರೊನಾ ಸೋಂಕಿತ ಪ್ರಕರಣಗಳನ್ನು ದಾಖಲಿಸಿ ಆರೈಕೆ ನೀಡಲಾಗುತ್ತದೆ.

28 ದಿನಗಳ ಕಾಲ ಅವಶ್ಯಕ ಆಹಾರ ಪದಾರ್ಥ

28 ದಿನಗಳ ಕಾಲ ಅವಶ್ಯಕ ಆಹಾರ ಪದಾರ್ಥ

ಈ ಆರೈಕೆ ಕೇಂದ್ರಗಳಲ್ಲಿ 24*7 ವೈದ್ಯಕೀಯ ಸಿಬ್ಬಂದಿ ಹಾಜರಿದ್ದು, ಸೋಂಕಿತರ ಆರೈಕೆ ಮಾಡಲಿದ್ದಾರೆ. ಇದಲ್ಲದೆ, ಕಂಟೈನ್ಮೆಂಟ್ ವಲಯದ ನಿವಾಸಿಗಳಿಗೆ ಜಿಲ್ಲಾಡಳಿತದ ವತಿಯಿಂದ 28 ದಿನಗಳ ಕಾಲ ಅವಶ್ಯಕ ಆಹಾರ ಪದಾರ್ಥಗಳು ಮತ್ತು ಅಗತ್ಯ ಪರಿಕರಗಳನ್ನು ಪೂರೈಸಲಾಗುತ್ತಿದೆ.

English summary
The Kodagu District Administration has taken stringent measures to control coronavirus infection and has announced 30 Containment zones and has implemented an effective program to treat the infected.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X