ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣ: ಕೆ.ಜೆ ಜಾರ್ಜ್ ಗೆ ಮತ್ತೆ ಸಂಕಷ್ಟ!

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಆಗಸ್ಟ್ 28: ಡಿವೈಎಸ್ಪಿ ಗಣಪತಿ ಸಾವಿನ ಪ್ರಕರಣ ಮತ್ತೆ ಚುರುಕು ಪಡೆದುಕೊಂಡಿದ್ದು, ಸಿಬಿಐ ತನಿಖಾ ತಂಡ ಸಲ್ಲಿಸಿದ ಬಿ ರಿಪೋರ್ಟ್ ನ್ನು ಹೈಕೋರ್ಟ್ ತಿರಸ್ಕರಿಸಿದೆ.

Recommended Video

Bannerghatta Park ಆನೆಗೆ ಪ್ರಸಿದ್ಧ ಹೆಸರು | Oneindia Kannada

ಗಣಪತಿ ಅವರ ಆತ್ಮಹತ್ಯೆಗೆ ಯಾವುದೇ ಪ್ರಚೋದನೆ ಇರಲಿಲ್ಲ ಎಂದು ಸಿಬಿಐ ತಂಡ ಬಿ ರಿಪೋರ್ಟ್ ನಲ್ಲಿ ನೀಡಿದ್ದಕ್ಕೆ ಪುತ್ರ ನಿಹಾಲ್ ಆಕ್ಷೇಪ ವ್ಯಕ್ತಪಡಿಸಿ, ತನ್ನ ತಂದೆ ಆತ್ಮಹತ್ಯೆಗೆ ಕೆಲವರ ಪ್ರಚೋದನೆ ಇದೆ ಎಂದು ಹೈಕೋರ್ಟಿಗೆ ಅರ್ಜಿ ಸಲ್ಲಿಸಿದ್ದರು.

ಮುಕ್ತಿ ಸಿಗದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಸಾವಿನ ಪ್ರಕರಣಮುಕ್ತಿ ಸಿಗದ ಐಎಎಸ್ ಅಧಿಕಾರಿ ಅನುರಾಗ್ ತಿವಾರಿ ಸಾವಿನ ಪ್ರಕರಣ

ಹೀಗಾಗಿ ಸಿಬಿಐ ತನಿಖಾ ತಂಡ ನೀಡಿದ್ದ ಬಿ ರಿಪೋರ್ಟ್ ಅನ್ನು ಹೈಕೋರ್ಟ್ ತಿರಸ್ಕರಿಸಿದೆ. 4 ವರ್ಷದ ಹಿಂದೆ ಮಡಿಕೇರಿಯಲ್ಲಿ ಹೇಳಿಕೆ ನೀಡಿ ಬಸ್ ನಿಲ್ದಾಣ ಬಳಿಯ ಲಾಡ್ಜ್ ನಲ್ಲಿ ಸಂಶಯಾಸ್ಪದವಾಗಿ ಸಾವಿಗೀಡಾಗಿದ್ದ ಮಂಗಳೂರಿನ ಡಿವೈಎಸ್ಪಿ ಗಣಪತಿ ಪ್ರಕರಣಕ್ಕೆ ಇದೀಗ ಹೊಸ ತಿರುವು ಪಡೆದುಕೊಂಡಿದೆ.

DySP MK Ganapathi Death Case: High Court Rejected CBI B Report

ಅಂದಿನ ಗೃಹ ಸಚಿವರಾಗಿದ್ದ ಕೆ.ಜೆ ಜಾರ್ಜ್ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳಾದ ಎ.ಎನ್.ಪ್ರಸಾದ್, ಪ್ರಣಬ್ ಮೊಹಂತಿ ಅವರಿಗೆ ಜನಪ್ರತಿನಿಧಿ ನ್ಯಾಯಾಲಯದಿಂದ ಮತ್ತೆ ನೋಟೀಸ್ ನೀಡಲಾಗಿದೆ.

ಸೆಪ್ಟಂಬರ್ 28 ರಂದು ವಿಚಾರಣೆ ಮುಂದೂಡಲಾಗಿದ್ದು, ಕೋರ್ಟ್ ಗೆ ಹಾಜರಾಗಲೇಬೇಕಾದ ಸಂದಿಗ್ಧತೆಯಲ್ಲಿ ಮಾಜಿ ಸಚಿವ ಕೆ.ಜೆ ಜಾರ್ಜ್ ಸಿಲುಕಿದ್ದಾರೆ.

100 ಕ್ಕೂ ಅಧಿಕ ಸಾಕ್ಷಿ ವಿಚಾರಣೆ ನಡೆಸಿದ್ದ ಸಿಬಿಐ, ಪ್ರಕರಣದಲ್ಲಿ ಕೆ.ಜೆ ಜಾರ್ಜ್ ಸೇರಿದಂತೆ ಇಬ್ಬರು ಅಧಿಕಾರಿಗಳು ಪ್ರಚೋದನೆ ನೀಡಿಲ್ಲ ಎಂದು ಸಿಬಿಐ 260 ಪುಟಗಳ ತನಿಖಾ ವರದಿ ರಿಪೋರ್ಟ್ ಸಲ್ಲಿಸಿತ್ತು. ಆದರೆ ಈಗ ಹೈಕೋರ್ಟ್ ಬಿ ರಿಪೋರ್ಟ್ ತಿರಸ್ಕರಿಸಿದೆ.

English summary
The High Court rejected the B report submitted by the CBI investigation team into the death of DySP Ganapathi
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X