ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದುಬೈ: ಕೇಶವಿನ್ಯಾಸ ಸ್ಪರ್ಧೆಯಲ್ಲಿ ಕೊಡಗಿನ ಹುಡ್ಗ ಫಸ್ಟ್

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ನವೆಂಬರ್ 4: ತಿಂಗಳಿಗೊಮ್ಮೆ ಕ್ಷೌರಿಕನ ಹತ್ರ ಹೋಗೊ ನಾವು, ಯಾವುದೋ ಒಂದು ವಿನ್ಯಾಸ ಮಾಡಿಸಿಕೊಂಡು ಬಂದು ಬರ್ತೀವಿ. ಆದರೆ ಇಲ್ಲೊಬ್ಬ ಕೊಡಗಿನ ಹುಡುಗ ದುಬೈ ಕೇಶವಿನ್ಯಾಸ ಸ್ಪರ್ಧೆಯಲ್ಲಿ ಮೊದಲ ಸ್ಥಾನ ಗಳಿಸಿದ್ದಾರೆ.

ಅಂತಾರಾಷ್ಟ್ರೀಯ ಮಟ್ಟದ ದುಬೈನಲ್ಲಿ ನಡೆದ ಕೇಶ ವಿನ್ಯಾಸ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆಯುವುದರೊಂದಿಗೆ ಎಲ್ಲರ ಗಮನಸೆಳೆದಿದ್ದಾರೆ.

ಅವರ ಹೇಸರೇನಂತಿರಾ? ಅವರೇ ಕೊಡಗಿನ ಸುಂಟಿಕೊಪ್ಪದ ನಿವಾಸಿ ಸುನಿಲ್ ಭಾಸ್ಕರ. ಕೇಶ ವಿನ್ಯಾಸದಲ್ಲಿ ಅಂತಾರಾಷ್ಟ್ರೀಯ ಮಟ್ಟದಲ್ಲಿ ಪ್ರಥಮ ಸ್ಥಾನ ಪಡೆದವರು.

sunil bhaskar

ಇವರು ಬ್ರಿಟೀಷ್ ಬಾರ್‍ಬಾರ್ಸ್ ಅಸೋಸಿಯೇಷನ್ ವತಿಯಿಂದ ಯುಎಇ(ದುಬೈ)ನಲ್ಲಿ ಇತ್ತೀಚೆಗೆ ನಡೆದ ಕೇಶ ವಿನ್ಯಾಸ ಸ್ಪರ್ಧೆಯಲ್ಲಿ ಭಾಗವಹಿಸಿ ದುಬೈನ ಕೇಶವಿನ್ಯಾಸಕರನ್ನು ಹಿಂದಿಕ್ಕಿ ಬಹುಮಾನಕ್ಕೆ ಪಾತ್ರರಾಗಿದ್ದಾರೆ.[ವಿಡಿಯೋ: ಕತ್ತರಿ ಅಲ್ಲ, ಮೊಂಬತ್ತಿ ಜ್ವಾಲೆಯಿಂದ ಹೇರ್ ಕಟಿಂಗ್]

ತನ್ನ 18ನೇ ವಯಸ್ಸಿನಲ್ಲಿ ಸುಂಟಿಕೊಪ್ಪದಲ್ಲಿ ಪುಟ್ಟದಾದ ಕಟ್ಟಿಂಗ್ ಸೆಲೂನ್ ಆರಂಭಿಸಿದ ಸುನಿಲ್ ಭಾಸ್ಕರ ಕೆಲಕಾಲ ಸುಂಟಿಕೊಪ್ಪದಲ್ಲಿ ಕೆಲಸ ಮಾಡಿ ಬಳಿಕ ಹೊಟ್ಟೆಪಾಡಿಗಾಗಿ ದುಬೈ ಕಡೆಗೆ ಮುಖ ಮಾಡಿದರು.

ಇದೀಗ ಕಳೆದ 13 ವರ್ಷಗಳಿಂದ ಯುನೈಟೆಡ್ ಅರಬ್ ಎಮರೇಟ್ಸ್(ದುಬೈ)ನಲ್ಲಿ ಕೇಶ ವಿನ್ಯಾಸಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ತನ್ನ ಕೈಚಳಕದ ಮೂಲಕ ನೈಪುಣ್ಯತೆ ಪಡೆದಿರುವ ಅವರು ಸೆಲಬ್ರೆಟಿಗಳ ಗಮನಸೆಳೆದಿದ್ದಾರೆ.

ಬ್ರಿಟೀಷ್ ಬಾರ್ಬರ್ಸ್ ಅಸೋಸಿಯೇಷನ್ ದುಬೈನಲ್ಲಿ ಆಯೋಜಿಸಿದ ದುಬೈನ ಉತ್ತಮ ಕೇಶ ವಿನ್ಯಾಸಕ ಸ್ಪರ್ಧೆಯಲ್ಲಿ ಹಲವರು ಭಾಗವಹಿಸಿದ್ದು ಅವರ ಪೈಕಿ ಅಂತಿಮ ಹಂತಕ್ಕೆ ನಾಲ್ಕು ಮಂದಿ ಸ್ಪರ್ಧಿಗಳು ಪ್ರವೇಶಿಸಿದರು.

ಬಾಕ್ಸಿಂಗ್ ರಿಂಗ್‍ನಲ್ಲಿ ಸ್ಪರ್ಧೆಯನ್ನು ನಡೆಸಲಾಗಿದ್ದು, 45 ನಿಮಿಷದಲ್ಲಿ ಸ್ಪೀಡ್, ಟೆಕ್ನಿಕ್, ಫಿನಿಶಿಂಗ್, ಟ್ರಂಡ್ ಆಧಾರದ ಮೇಲೆ ಭಾಸ್ಕರ್ ಅವರು ಪ್ರಶಸ್ತಿ ತನ್ನದಾಗಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ. ಆ ಮೂಲಕ ಹುಟ್ಟೂರು ಕೊಡಗಿಗೂ ಹೆಸರು ತಂದಿದ್ದಾರೆ.

English summary
Dubai International Hairstyle competition earn the first place in Coorg Sunil Bhaskar. He is working united arab emarest on Hairstyle composar in 13 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X