ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗು-ಹಾಸನ ನಡುವೆ ಸಂಚರಿಸುವವರಿಗೆ ಸೂಚನೆಗಳು

|
Google Oneindia Kannada News

ಕೊಡಗು, ಮೇ 05 : ಕೊಡಗು ಜಿಲ್ಲೆಯಿಂದ ಒಂದು ಬಾರಿಯ ಅನುಮತಿ ಪಾಸು ಪಡೆದು ಹಾಸನ ಜಿಲ್ಲೆಗೆ ಪ್ರಯಾಣಿಸುವ ಪ್ರಯಾಣಿಕರಿಗೆ ಹಲವು ಸೂಚನೆ ನೀಡಲಾಗದೆ. ಹಾಸನ ಮತ್ತು ಕೊಡಗು ಎರಡೂ ಜಿಲ್ಲೆಗಳು ಹಸಿರು ವಲಯದಲ್ಲಿವೆ.

ಕೊಡಗು ಜಿಲ್ಲೆಯಿಂದ ಹಾಸನ ಜಿಲ್ಲೆಗೆ ಪ್ರಯಾಣಿಸುವವರು ಸಿದ್ಧಾಪುರ (ಶಿರಂಗಾಲ) ಚೆಕ್ ಪೋಸ್ಟ್ ಮೂಲಕ ಮಾತ್ರ ಸಂಚಾರ ನಡೆಸಬೇಕು ಎಂದು ಹಾಸನ ಜಿಲ್ಲಾಡಳಿತ ಹೇಳಿದೆ. ಉಳಿದ ಚೆಕ್‌ ಪೋಸ್ಟ್‌ಗಳಲ್ಲಿ ಪ್ರವೇಶಕ್ಕೆ ಅನುಮತಿ ನೀಡಿಲ್ಲ.

ಕೊಡಗು-ಮೈಸೂರು ನಡುವೆ ಸಂಚರಿಸುವವರಿಗೆ ಸೂಚನೆ ಕೊಡಗು-ಮೈಸೂರು ನಡುವೆ ಸಂಚರಿಸುವವರಿಗೆ ಸೂಚನೆ

ಕೊಡಗು ಜಿಲ್ಲೆಯಿಂದ ಹಾಸನ ಜಿಲ್ಲೆಗೆ ಸ್ವಂತ ವಾಹನದ ಮೂಲಕ ಪ್ರಯಾಣಿಸುವವರಿಗೆ ಸಿದ್ಧಾಪುರ (ಶಿರಂಗಾಲ) ಚೆಕ್ ಪೋಸ್ಟ್ ನ್ನು ಹೊರತುಪಡಿಸಿ ಜಿಲ್ಲೆಗೆ ಪ್ರವೇಶಿಸುವ ಉಳಿದ ಎಲ್ಲಾ ಚೆಕ್ ಪೋಸ್ಟ್ ಗಳನ್ನು ಹಾಸನ ಜಿಲ್ಲಾಡಳಿತ ಬಂದ್ ಮಾಡಿದೆ.

ಪುಟ್ಟ ಜಿಲ್ಲೆ ಕೊಡಗು ಸೋಂಕುರಹಿತ ಜಿಲ್ಲೆಯಾದ ಹಿಂದಿನ ರಹಸ್ಯವೇನು? ಪುಟ್ಟ ಜಿಲ್ಲೆ ಕೊಡಗು ಸೋಂಕುರಹಿತ ಜಿಲ್ಲೆಯಾದ ಹಿಂದಿನ ರಹಸ್ಯವೇನು?

Directions For People To Travel Kodagu And Hassan

ಪ್ರಯಾಣಿಕರು ಸಂಚಾರ ನಡೆಸುವಾಗ ಯೋಜನೆ ರೂಪಿಸಿಕೊಂಡು ಬರಬೇಕು ಎಂದು ಮನವಿ ಮಾಡಲಾಗಿದೆ. ಉಳಿದಂತೆ ಎಲ್ಲಾ ರೀತಿಯ ಸರಕು ಸಾಗಾಟ ವಾಹನಗಳಿಗೆ, ಕೃಷಿ ಚಟುವಟಿಕೆಗಳಿಗೆ ಮತ್ತು ತುರ್ತು ಸೇವೆಗಳಿಗೆ ಕೊಡಗು ಜಿಲ್ಲೆಯಿಂದ ಹಾಸನ ಜಿಲ್ಲೆಗೆ ಸಂಪರ್ಕ ಕಲ್ಪಿಸುವ ಎಲ್ಲಾ ಚೆಕ್ ಪೋಸ್ಟ್ ತೆರೆದಿರುತ್ತದೆ.

ಹಾಸನ; ಹಸಿದವರಿಗೆ ಊಟ ಹಾಕಲು ಅಮೆರಿಕದಿಂದ ನೆರವು ಹಾಸನ; ಹಸಿದವರಿಗೆ ಊಟ ಹಾಕಲು ಅಮೆರಿಕದಿಂದ ನೆರವು

ಹಾಸನ ಜಿಲ್ಲಾಧಿಕಾರಿಗಳು ಮಡಿಕೇರಿ ತಾಲೂಕಿನ ಸಂಪಾಜೆ ಚೆಕ್ ಪೋಸ್ಟ್‌ಗೆ ಭೇಟಿ ನೀಡಿ ಹೊರ ಜಿಲ್ಲೆ/ರಾಜ್ಯದಿಂದ ಬರುವ ಜನರ ಆರೋಗ್ಯ ತಪಾಸಣೆ, ದಾಖಲಾತಿ ಪರಿಶೀಲನೆ ಮತ್ತು ಅವರ ಅಂಕಿ-ಅಂಶಗಳನ್ನು ಸಮರ್ಪಕವಾಗಿ ಸಂಗ್ರಹಿಸುವ ಬಗ್ಗೆ ಪರಿಶೀಲನೆ ನಡೆಸಿದರು.

ಕೊಡಗು ಜಿಲ್ಲೆಯಲ್ಲಿ 5-5-2020 ರಿಂದ 18-5-2020 ರವರೆಗೆ ಅನ್ವಯಿಸುವಂತೆ ಲಾಕ್ ಡೌನ್‌ನಿಂದ ಷರತ್ತುಬದ್ಧ ವಿನಾಯಿತಿ ನೀಡಲಾಗಿದೆ.

English summary
Passengers traveling to Hassan district with one time pass from Kodagu should enter to Hassan through Siddapura (Shirangala) check post. The Hassan district had closed other all entries for private vehicles.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X