• search
 • Live TV
ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ತಲಕಾವೇರಿ ಬ್ರಹ್ಮಗಿರಿಯಲ್ಲಿ ಭೂಕುಸಿತ; ಒಬ್ಬರ ಮೃತದೇಹ ಪತ್ತೆ

By ಮಡಿಕೇರಿ ಪ್ರತಿನಿಧಿ
|

ಮಡಿಕೇರಿ, ಆಗಸ್ಟ್‌ 08: ಭಾರಿ ಮಳೆಯಿಂದಾಗಿ ತಲಕಾವೇರಿ ಬಳಿಯ ಬ್ರಹ್ಮಗಿರಿಯಲ್ಲಿ ಭೂ ಕುಸಿತದಿಂದಾಗಿ ನಾಪತ್ತೆಯಾಗಿದ್ದ ಐವರಲ್ಲಿ ಒಬ್ಬರ ಮೃತದೇಹ ಇಂದು ಪತ್ತೆಯಾಗಿದೆ. ಮಣ್ಣಿನಡಿ ಸಿಲುಕಿದ್ದ ಮೃತದೇಹವನ್ನು ಎನ್‌ಡಿಆರ್ ‌ಎಫ್‌ ಸಿಬ್ಬಂದಿ ಇಂದು ಮಧ್ಯಾಹ್ನ ಪತ್ತೆ ಮಾಡಿ ಹೊರತೆಗೆದಿದ್ದಾರೆ.

   Kerala Rains : ವರುಣನ ಅಬ್ಬರಕೆ ಬೆಚ್ಚಿಬಿದ್ದ ದೇವರ ನಾಡು | Oneindia Kannada

   ಸ್ಥಳದಲ್ಲಿ ದೊರಕಿರುವುದು ಆನಂದತೀರ್ಥ ಅವರ ಮೃತದೇಹ ಎಂದು ಗುರುತಿಸಲಾಗಿದೆ. ಇವರು ತಲಕಾವೇರಿಯ ಪ್ರಧಾನ ಅರ್ಚಕ ನಾರಾಯಣಾಚಾರ್ ಅವರ ಸಹೋದರ ಆಗಿದ್ದಾರೆ. ಅರ್ಚಕರ ಪತ್ನಿ ಶಾಂತ, ಅರ್ಚಕ ನಾರಾಯಣಾಚಾರ್ ಮತ್ತು ಮಂಗಳೂರು ಮೂಲದ ಇಬ್ಬರು ಸಹಾಯಕ ಅರ್ಚಕರ ಪತ್ತೆಗೆ ತಂಡ ಶ್ರಮಿಸುತ್ತಿದೆ.

   ಕುಂಭದ್ರೋಣ ಮಳೆ: ಕೊಡಗಿನಾದ್ಯಂತ ಪ್ರವಾಹ ಭೀತಿ, ತಲಕಾವೇರಿಯ ಬ್ರಹ್ಮಗಿರಿ ಬೆಟ್ಟ ಕುಸಿತ

   ಕಳೆದ ಮೂರು ದಿನಗಳಿಂದಲೂ ಬ್ರಹ್ಮಗಿರಿಯಲ್ಲಿ ನಾಪತ್ತೆಯಾದವರಿಗಾಗಿ ಶೋಧ ಕಾರ್ಯ ನಡೆಯುತ್ತಿತ್ತು. ಆದರೆ ಎಡೆಬಿಡದೇ ಸುರಿಯುತ್ತಿದ್ದ ಮಳೆ ಹಾಗೂ ಕೆಸರಿನಿಂದ ಕಾರ್ಯಾಚರಣೆಗೆ ಅಡ್ಡಿಯಾಗಿತ್ತು. ಇಂದು ಎನ್‌ಡಿಆರ್ ‌ಎಫ್‌ ನ ನಿರಂತರ ಕಾರ್ಯಾಚರಣೆಯಲ್ಲಿ ಒಬ್ಬರ ಮೃತದೇಹ ಮಾತ್ರ ಪತ್ತೆಯಾಗಿದೆ.

   English summary
   The dead body of one person who lost in a landslide in Brahmagiri near Talacauvery has been found today, five were missing in an incident,
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X