ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಡಿಕೇರಿ-ಮಂಗಳೂರು ರಸ್ತೆಯಲ್ಲಿ ಬಿರುಕು, ಡಿಸಿ ಪರಿಶೀಲನೆ

|
Google Oneindia Kannada News

ಮಡಿಕೇರಿ, ಜುಲೈ 05 : ಮೈಸೂರು-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಬಿರುಕು ಕಾಣಿಸಿಕೊಂಡಿದ್ದು ಕುಸಿಯುವ ಭೀತಿ ಎದುರಾಗಿದೆ. ಜಿಲ್ಲಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.

ಕೊಡಗು ಜಿಲ್ಲಾಧಿಕಾರಿ ಅನ್ನೀಸ್ ಕೆ ಜಾಯ್ ಅವರು ಶುಕ್ರವಾರ ರಸ್ತೆ ಬಿರುಕು ಬಿಟ್ಟಿರುವ ಪ್ರದೇಶವನ್ನು ಪರಿಶೀಲಿಸಿದರು. ಮೈಸೂರು-ಬಂಟ್ವಾಳ ರಾಷ್ಟ್ರೀಯ ಹೆದ್ದಾರಿ 275ರ ಮಡಿಕೇರಿ-ಮಂಗಳೂರು ನಡುವಿನ ರಸ್ತೆ ಮಡಿಕೇರಿಯ ಕಾಟಿಕೇರಿ ಗ್ರಾಮದ ಬಳಿ ಬಿರುಕು ಬಿಟ್ಟಿದೆ.

ಪ್ರಯಾಣಿಕರೇ ಹುಷಾರ್! ಮಡಿಕೇರಿ - ಮಂಗಳೂರು ಹೆದ್ದಾರಿಯಲ್ಲಿ ಬಿರುಕುಪ್ರಯಾಣಿಕರೇ ಹುಷಾರ್! ಮಡಿಕೇರಿ - ಮಂಗಳೂರು ಹೆದ್ದಾರಿಯಲ್ಲಿ ಬಿರುಕು

ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಬಿರುಕು ಬಿಟ್ಟ ಸ್ಥಳದಲ್ಲಿ ಸರಿಪಡಿಸುವ ಕಾರ್ಯವನ್ನು ಮಾಡುತ್ತಿದ್ದಾರೆ. ಈ ಸಂದರ್ಭದಲ್ಲಿ ಖುದ್ದಾಗಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ ಜಿಲ್ಲಾಧಿಕಾರಿಗಳು ಮುಂದೆ ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ಮಾಹಿತಿ ನೀಡಿದರು.

ಕೊಡಗಿನ ಶಾಸಕರು ಸರ್ಕಾರಕ್ಕೆ ಬರೆದ ಪತ್ರದಲ್ಲಿ ಏನಿದೆ?ಕೊಡಗಿನ ಶಾಸಕರು ಸರ್ಕಾರಕ್ಕೆ ಬರೆದ ಪತ್ರದಲ್ಲಿ ಏನಿದೆ?

Madikeri-Mangalu road

ಮಳೆ ಹೆಚ್ಚಾಗಿ ಬಿರುಕು ಜಾಸ್ತಿಯಾದರೆ ರಸ್ತೆ ಕುಸಿಯುವ ಅಪಾಯವಿದೆ. ಜೂನ್ ತಿಂಗಳ ಆರಂಭದಲ್ಲಿಯೇ ಈ ರಸ್ತೆಯಲ್ಲಿ ದೊಡ್ಡ ವಾಹನಗಳ ಸಂಚಾರ ನಿಷೇಧಿಸಲಾಗಿದೆ. ಕಾರು, ಬಸ್ ಸೇರಿದಂತೆ ಲಘು ವಾಹನಗಳು ಮಾತ್ರ ಸಂಚಾರ ನಡೆಸುತ್ತಿವೆ.

ಕೊಡಗಿನಲ್ಲಿ ಮುಂಗಾರು ಚೇತರಿಕೆ: ಬರೆ, ಗುಡ್ಡ ಕುಸಿತದ ಭೀತಿಕೊಡಗಿನಲ್ಲಿ ಮುಂಗಾರು ಚೇತರಿಕೆ: ಬರೆ, ಗುಡ್ಡ ಕುಸಿತದ ಭೀತಿ

ಮಡಿಕೇರಿಯಿಂದ 6 ಕಿ.ಮೀ. ದೂರದ ಕಾಟಿಕೇರಿ ಜಂಕ್ಷನ್‌ನಿಂದ ಕೂಗಳತೆ ದೂರದಲ್ಲಿ ರಸ್ತೆಯಲ್ಲಿ ಬಿರುಕು ಕಾಣಿಸಿದೆ. ರಸ್ತೆ ಕುಸಿದರೆ ಪರ್ಯಾಯ ಮಾರ್ಗದಲ್ಲಿ ಸಂಚಾರ ನಡೆಸುವುದು ಅನಿವಾರ್ಯವಾಗಿದೆ.

ಪರ್ಯಾಯ ಮಾರ್ಗ : ಒಂದು ವೇಳೆ ರಸ್ತೆ ಸಂಪೂರ್ಣವಾಗಿ ಕುಸಿದು ಹೋದರೆ ಮೂರು ಮಾರ್ಗಗಳ ಮೂಲಕ ಮಂಗಳೂರನ್ನು ತಲುಪಬಹುದಾಗಿದೆ.

* ಮೈಸೂರು-ಕುಶಾಲನಗರ-ಸೋಮವಾರಪೇಟೆ-ಸಕಲೇಶಪುರ-ಮಂಗಳೂರು
* ಮೈಸೂರು-ಹುಣಸೂರು-ಗೋಣಿಕೊಪ್ಪ-ವಿರಾಜಪೇಟೆ-ಸುಳ್ಯ-ಮಂಗಳೂರು
* ಬೆಂಗಳೂರು-ಹಾಸನ-ಶಿರಾಡಿ-ಮಂಗಳೂರು

English summary
Kodagu Deputy Commissioner Annies Kanmani Joy inspected the spot where Madikeri-Mangalu road cracked. Road cracked near Katekeri village of Madikeri.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X