ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರೈತರ ಕುರಿತ ಬಿ.ಸಿ.ಪಾಟೀಲ್ ಹೇಳಿಕೆ ಸಮರ್ಥಿಸಿಕೊಂಡ ಪುತ್ರಿ

By Lekhaka
|
Google Oneindia Kannada News

ಮಡಿಕೇರಿ, ಡಿಸೆಂಬರ್ ೦3: ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು ಎಂದು ಕೃಷಿ ಸಚಿವ ಬಿ.ಸಿ.ಪಾಟೀಲ್ ವಿವಾದಾತ್ಮಕ ಹೇಳಿಕೆ ನೀಡಿದ್ದು, ಈ ಕುರಿತು ತಂದೆಯ ಹೇಳಿಕೆಯನ್ನು ಬಿ.ಸಿ.ಪಾಟೀಲ್ ಪುತ್ರಿ ಸೃಷ್ಟಿ ಪಾಟೀಲ್ ಸಮರ್ಥಿಸಿಕೊಂಡಿದ್ದಾರೆ.

"ಸೋತು ಆತ್ಮಹತ್ಯೆ ಮಾಡಿಕೊಳ್ಳುವ ರೈತರು ಹೇಡಿಗಳು"

ಕೊಡುಗು ಜಿಲ್ಲೆ ಪೊನ್ನಂಪೇಟೆ ಸಮೀಪದ ಕೃಷಿ ಕಾಲೇಜಿನಲ್ಲಿ ಗುರುವಾರ "ಬಿದಿರು ಸಂಸ್ಕರಣೆ ಹಾಗೂ ಬಿದಿರು ಮೌಲ್ಯವರ್ಧನಾ ಘಟಕ"ವನ್ನು ಉದ್ಘಾಟಿಸಿ ಮಾತನಾಡಿದ್ದ ಕೃಷಿ ಸಚಿವ ಬಿ.ಸಿ.ಪಾಟೀಲ್, "ಏನೇ ಸಮಸ್ಯೆಗಳಿದ್ದರೂ ಅದನ್ನು ಧೈರ್ಯವಾಗಿ ಎದುರಿಸಬೇಕು. ಸಾಲ, ಬೆಳೆ ನಷ್ಟದಂಥ ಸಮಸ್ಯೆಗಳಿಂದ, ಹೆಂಡತಿ ಮಕ್ಕಳನ್ನು ನೋಡದೇ ಆತ್ಮಹತ್ಯೆಗೆ ಶರಣಾಗುವ ರೈತರು ಹೇಡಿಗಳು" ಎಂದು ಹೇಳಿಕೆ ನೀಡಿದ್ದರು.

Kodagu: Daughter Srusti Defends BC Patil Statement On Farmers

Recommended Video

ಶಿವಮೊಗ್ಗದಲ್ಲಿ IGP Ravi ಎದುರು ಚಾಕು ಪ್ರದರ್ಶಿಸಿದ ಯುವಕ | Oneindia Kannada

ಇದಕ್ಕೆ ರಾಜ್ಯಾದ್ಯಂತ ಟೀಕೆ, ವಿರೋಧಗಳು ವ್ಯಕ್ತಗೊಂಡಿದ್ದು, ಕೃಷಿ ಸಚಿವರ ಈ ಹೇಳಿಕೆ ರೈತ ಸಮುದಾಯಕ್ಕೆ ಮಾಡಿದ ಅವಮಾನ ಎಂದು ವಿರೋಧ ಪಕ್ಷಗಳು ಆಕ್ರೋಶ ವ್ಯಕ್ತಪಡಿಸಿವೆ. ಇದೀಗ ತಂದೆಯ ಹೇಳಿಕೆಯನ್ನು ಸೃಷ್ಟಿ ಪಾಟೀಲ್ ಸಮರ್ಥಿಸಿಕೊಂಡಿದ್ದಾರೆ. "ತಾವು ಆತ್ಮಹತ್ಯೆ ಮಾಡಿಕೊಂಡರೆ ಹೆಂಡತಿ ಮಕ್ಕಳ ಗತಿ ಏನು ಎಂಬುದನ್ನು ರೈತರು ಯೋಚಿಸಬೇಕು. ಹೀಗೆ ಕಷ್ಟ ಎದುರಿಸಲಾಗದೆ ಆತ್ಮಹತ್ಯೆಗೆ ಶರಣಾಗುವವರು ಹೇಡಿಗಳು" ಎಂದು ಸೃಷ್ಟಿ ಕೂಡ ತಂದೆಯ ಧಾಟಿಯಲ್ಲಿ ಹೇಳಿದ್ದಾರೆ.

English summary
BC Patil daughter srusti defends his father statement on farmers. Agriculture minister BC Patil gave controversial statement on farmers saying "farmers who committ suicide are cowards",
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X