• search
  • Live TV
ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದಸರಾ 2022: ಕೊಡಗು ಜಿಲ್ಲೆಗೆ 14 ದಿನಗಳ ರಜೆ ಘೋ‍ಷಣೆ

|
Google Oneindia Kannada News

ಮಡಿಕೇರಿ, ಸೆಪ್ಟೆಂಬರ್ 20: ದಸರಾ ಹಬ್ಬದ ಹಿನ್ನಲೆ ಹಲವು ಜಿಲ್ಲೆಗಳಲ್ಲಿ ಭರ್ಜರಿ ತಯಾರಿ ನಡೆಸಲಾಗುತ್ತಿದೆ. ಮೈಸೂರಿನ ಪಕ್ಕದ ಜಿಲ್ಲೆಯಾದ ಕೊಡಗಿನಲ್ಲೂ ಅದ್ದೂರಿಯಾಗಿ ದಸರಾ ಆಚರಿಸಲು ನಿರ್ಧರಿಸಲಾಗಿದೆ.

ದಸರಾ ಹಬ್ಬದ ಹಿನ್ನಲೆ ಪ್ರತಿ ಜಿಲ್ಲೆಗಳಿಗೂ ಅಲ್ಲಿನ ಹಬ್ಬದ ಆಚರಣೆಯನ್ನು ಗಮನಿಸಿ ರಜೆ ನೀಡುವಂತೆ ಶಿಕ್ಷಣ ಇಲಾಖೆ ಸೂಚನೆ ನೀಡಿತ್ತು. ಹಾಗಾಗಿ ಮಂಗಳವಾರ ಜಿಲ್ಲಾಧಿಕಾರಿ ಬಿಸಿ ಸತೀಶ್ ಕೊಡಗು ಜಿಲ್ಲೆಗೆ ಸೆಪ್ಟೆಂಬರ್ 26ರಿಂದ ಅಕ್ಟೋಬರ್ 9ರವರೆಗೆ ಸಾರ್ವತ್ತಿಕ ರಜೆ ಘೋಷಣೆ ಮಾಡಿ ಆದೇಶ ಹೊರಡಿಸಿದ್ದಾರೆ.

ಇಂಜಿನಿಯರಿಂಗ್ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ: ಪ್ರಧಾನಿ ನರೇಂದ್ರ ಮೋದಿ ಇಂಜಿನಿಯರಿಂಗ್ ಶಿಕ್ಷಣ ವ್ಯವಸ್ಥೆಯಲ್ಲಿ ಬದಲಾವಣೆ: ಪ್ರಧಾನಿ ನರೇಂದ್ರ ಮೋದಿ

ಕೊಡಗು ಉಸ್ತುವಾರು ಸಚಿವ ಬಿಸಿ ನಾಗೇಶ್‌ ನಿರ್ದೇಶನದಂತೆ ಜಿಲ್ಲಾಧಿಕಾರಿ ಜಿಲ್ಲೆಯ ಶಾಲಾ-ಕಾಲೇಜುಗಳಿಗೆ ಒಟ್ಟು 14 ದಿನಗಳ ಕಾಲ ರಜೆ ಘೋಷಿಸಿದ್ದಾರೆ. ವಿಶ್ವವಿಖ್ಯಾತ ಜಂಬೂಸವಾರಿ ನಡೆಯುವ ಮೈಸೂರು ಜಿಲ್ಲೆಗೂ ಸೆಪ್ಟೆಂಬರ್ 26 ಅಕ್ಟೋಬರ್ 9ರವರೆಗೆ ದಸರಾ ರಜೆ ಘೋಷಣೆ ಮಾಡಲಾಗಿದೆ.

2022-23 ನೇ ಸಾಲಿನ ಶೈಕ್ಷಣಿಕ ಚಟುವಟಿಕೆಗಳ ವಾರ್ಷಿಕ ಕಾರ್ಯಸೂಚಿ ಹಾಗೂ ಸುತ್ತೋಲೆಯಲ್ಲಿ ದಸರಾ ರಜೆ ಅಧಿಯನ್ನು 2022-23ನೇ ಸಾಲಿನ ಶೈಕ್ಷಣಿಕ ವರ್ಷದಲ್ಲಿ ದಿನಾಂಕ 03-10-2022 ರಿಂದ 16-10-2022 ರವರೆಗೆ ಸಾರ್ವಜನಿಕ ಶಿಕ್ಷಣ ಇಲಾಖೆ ನಿಗಧಿ ಮಾಡಿತ್ತು. ಆದರೆ ಮೈಸೂರು ದಸರಾ ನವರಾತ್ರಿ ಕಾರ್ಯಕ್ರಮಗಳು ದಿನಾಂಕ 26-09-2022 ರಿಂದ ಪ್ರಾರಂಭವಾಗುತ್ತಿದ್ದು, ಬದಲಾವಣೆ ಮಾಡಿಕೊಳ್ಳಲು ಅನುಮತಿ ನೀಡಿರುವ ಹಿನ್ನಲೆಯಲ್ಲಿ ಮೈಸೂರು ಜಿಲ್ಲೆಗೆ ದಿನಾಂಕ 26-09-2022 ರಿಂದ 09-10-2022 ರವೆರೆಗೆ ದಸರಾ ರಜೆಯನ್ನು ನಿಗದಿಪಡಿಸಿ ಮಂಜೂರು ಮಾಡಲಾಗಿದೆ.

ಸಾರ್ವಜನಿಕ ಶಿಕ್ಷಣ ಇಲಾಖೆಯ 2022-23ನೇ ಶೈಕ್ಷಣಿಕ ಕ್ಯಾಲೆಂಡರ್ ಪ್ರಕಾರ ಅಕ್ಟೋಬರ್ 03, 2022 ರಿಂದ 16, 2022 ರವರೆಗೆ, ಒಟ್ಟು 14 ದಿನಗಳ ಕಾಲ ದಸರಾ ರಜೆ ಇರಲಿದೆ. ವಿದ್ಯಾರ್ಥಿಗಳು ಅರ್ಧವಾರ್ಷಿಕ ಪರೀಕ್ಷೆಗೆ ಅಧ್ಯಯನ ಮಾಡಿಕೊಳ್ಳುವ ದೃಷ್ಟಿಯಿಂದ ಈ ರಜೆಯನ್ನು ಪ್ರತಿವರ್ಷ ನೀಡಲಾಗುತ್ತಿತ್ತು. ಆದರೆ ಈ ಬಾರಿ ಬದಲಾವಣೆ ಮಾಡಿಕೊಳ್ಳಲಾಗಿದೆ.

ಗಾಂಧಿ ಜಯಂತಿ ಕಡ್ಡಾಯ

ದಸರಾ ರಜೆಗಳಿದ್ದರೂ ರಜೆಯ ಮಧ್ಯೆ ನಡೆಯಲಿರುವ ಗಾಂಧಿ ಜಯಂತಿ, ವಾಲ್ಮಿಕಿ ಜಯಂತಿಗಳನ್ನು ಎಲ್ಲಾ ಶಾಲೆಗಳಲ್ಲೂ ಕಡ್ಡಾಯವಾಗಿ ಆಚರಿಸಲು ಶಿಕ್ಷಣ ಇಲಾಖೆ ಸೂಚನೆ ನೀಡಿದೆ.

English summary
Karnataka Government has announced Dasara holidays for schools in Kodagu district from September 26 to October 9.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X