ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಡಿಕೇರಿ-ಸಂಪಾಜೆ ಹೆದ್ದಾರಿಯಲ್ಲಿ ಬಿರುಕು; ತಜ್ಞರಿಂದ ಮಣ್ಣು ಪರೀಕ್ಷೆ

|
Google Oneindia Kannada News

ಮಡಿಕೇರಿ, ಆಗಸ್ಟ್ 01; ಕೊಡಗು ಜಿಲ್ಲೆಯಲ್ಲಿ ಕಳೆದ ವಾರ ಭಾರೀ ಮಳೆಯಾಗಿತ್ತು. ಮಡಿಕೇರಿ-ಸಂಪಾಜೆ ಹೆದ್ದಾರಿ ಮಾರ್ಗದ ಮದೆನಾಡು ಬಳಿ ರಸ್ತೆ ಬಿರುಕು ಬಿಟ್ಟಿದೆ. ಕೆಲವು ಕಡೆ ರಸ್ತೆ ಬಿರುಕು ಬಿಟ್ಟಿದೆ, ಹಾಗೆಯೇ ಚರಂಡಿ ಹಾಳಾಗಿದ್ದು, ಅದನ್ನು ಸರಿಪಡಿಸಬೇಕಿದೆ.

ಮೈಸೂರು-ಕೊಡಗು ಸಂಸದ ಪ್ರತಾಪ್ ಸಿಂಹ ಶಾಸಕರಾದ ಕೆ. ಜಿ. ಬೋಪಯ್ಯ, ಶಾಸಕರಾದ ಕೆ. ಜಿ. ಬೋಪಯ್ಯ, ಪಶ್ಚಿಮ ಘಟ್ಟ ಕಾರ್ಯಪೆಡೆ ಅಧ್ಯಕ್ಷರಾದ ಶಾಂತೆಯಂಡ ರವಿ ಕುಶಾಲಪ್ಪ, ಮಡಿಕೇರಿ ನಗರಾಭಿವೃದ್ಧಿ ಅಧ್ಯಕ್ಷರಾದ ರಮೇಶ್ ಹೊಳ್ಳ, ರಾಷ್ಟ್ರೀಯ ಹೆದ್ದಾರಿ ವಿಭಾಗ ಕಾರ್ಯಪಾಲಕ ಇಂಜಿನಿಯರ್ ಜಿ. ಎನ್. ಹೆಗ್ಡೆ ಮುಂತಾದವರು ಸ್ಥಳ ಪರಿಶೀಲನೆ ನಡೆಸಿದರು.

ಕೊಡಗು; ಮಳೆ, ಗಾಳಿಗೆ ಇದುವರೆಗೆ 52.39 ಕೋಟಿ ರೂ. ನಷ್ಟ ಕೊಡಗು; ಮಳೆ, ಗಾಳಿಗೆ ಇದುವರೆಗೆ 52.39 ಕೋಟಿ ರೂ. ನಷ್ಟ

ಸಂದರು ಕಾಟಗೇರಿ ಬಳಿ ಭೂ ಒತ್ತಡದಿಂದ ಚರಂಡಿ ಹಾಳಾಗಿರುವುದನ್ನು ಪರಿಶೀಲನೆ ನಡೆಸಿದರು. ಬಳಿಕ ಮಾತನಾಡಿ, "ಕಳೆದ ಮೂರು ವರ್ಷಗಳಿಂದ ಕೊಡಗು ಜಿಲ್ಲೆಯಲ್ಲಿ ಧಾರಾಕಾರ ಮಳೆಯಾಗುತ್ತಿದ್ದು, ಒಂದಲ್ಲ ಒಂದು ರೀತಿಯಲ್ಲಿ ಪ್ರಾಕೃತಿಕ ವಿಕೋಪ ಉಂಟಾಗುತ್ತಿದೆ" ಎಂದರು.

 ಆಗಸ್ಟ್‌ 1ರವರೆಗೂ ಈ ರಾಜ್ಯಗಳಲ್ಲಿ ಭಾರೀ ಮಳೆ ಮುನ್ಸೂಚನೆ ಆಗಸ್ಟ್‌ 1ರವರೆಗೂ ಈ ರಾಜ್ಯಗಳಲ್ಲಿ ಭಾರೀ ಮಳೆ ಮುನ್ಸೂಚನೆ

Cracks In Madikeri-Sampaje Highway MP Pratap Simha Inspected

"ಅವಘಡಗಳು ಸಂಭವಿಸದಂತೆ ಮುನ್ನೆಚ್ಚರಿಕೆ ವಹಿಸುವ ನಿಟ್ಟಿನಲ್ಲಿ ಮಡಿಕೇರಿ-ಸಂಪಾಜೆ ಮಾರ್ಗದ 18 ಕಡೆ ತಡೆಗೋಡೆ ನಿರ್ಮಿಸಲು ಉದ್ದೇಶಿಸಿಲಾಗಿತ್ತು. ಆದರೆ ಕಳೆದ ಜೂನ್ ತಿಂಗಳಲ್ಲಿ ವ್ಯಾಪಕ ಮಳೆಯಾದ ಹಿನ್ನಲೆ ಇನ್ನೂ ಹಲವು ಕಡೆ ತಡೆಗೋಡೆ ನಿರ್ಮಿಸಬೇಕಿದೆ. ಕೆಲವು ಕಡೆ ರಸ್ತೆ ಬಿರುಕು ಬಿಟ್ಟಿದೆ. ಹಾಗೆಯೆ ಚರಂಡಿ ಹಾಳಾಗಿದ್ದು, ಇದನ್ನು ಸರಿಪಡಿಸಬೇಕಿದೆ" ಎಂದು ಹೇಳಿದರು.

 ಕೊಡಗು ಜಿಲ್ಲೆಯ 5ನೇ ತಾಲ್ಲೂಕಾಗಿ ಕುಶಾಲನಗರ ಅಸ್ತಿತ್ವಕ್ಕೆ ಕೊಡಗು ಜಿಲ್ಲೆಯ 5ನೇ ತಾಲ್ಲೂಕಾಗಿ ಕುಶಾಲನಗರ ಅಸ್ತಿತ್ವಕ್ಕೆ

"ಮದೆನಾಡು ಮುಂಭಾಗ ಭೂಮಿ ಒಳಭಾಗದಲ್ಲಿ ನೀರು ಸ್ಪೋಟವಾಗುತ್ತಿರುವ ಹಿನ್ನೆಲೆ ತಜ್ಞರಿಂದ ಮಣ್ಣು ಪರೀಕ್ಷೆ ಮಾಡಿಸಿ ರಸ್ತೆ ಹಾನಿಯಾಗದಂತೆ ಅಗತ್ಯ ಕ್ರಮ ಕೈಗೊಳ್ಳಲಾಗುವುದು. ಇನ್ನೂ ಹಲವು ಕಡೆ ತಡೆಗೊಡೆ ನಿರ್ಮಿಸಲು ಶಾಸಕರಾದ ಕೆ. ಜಿ. ಬೋಪಯ್ಯ ಸಲಹೆ ಮಾಡಿದ್ದು, ಡಿಪಿಆರ್ ನಡೆಯುತ್ತಿದೆ" ಎಂದು ಸಂಸದರು ವಿವರಣೆ ನೀಡಿದರು.

Cracks In Madikeri-Sampaje Highway MP Pratap Simha Inspected

ಕೊಡಗು ಜಿಲ್ಲೆಯ ಮಳೆ ವಿವರ; ಶನಿವಾರ ಬೆಳಗ್ಗೆ 8.30ರ ವರದಿಯಂತೆ ಹಾರಂಗಿ ಜಲಾಶಯದ ನೀರಿನ ಮಟ್ಟ 2855.49 ಅಡಿಗಳು. ಜಲಾಶಯದ ಗರಿಷ್ಠ ಮಟ್ಟ 2,859 ಅಡಿಗಳು. ಕಳೆದ ವರ್ಷ ಇದೇ ದಿನ ಜಲಾಶಯದಲ್ಲಿ 2857.14 ಅಡಿ ನೀರಿನ ಸಂಗ್ರಹವಿತ್ತು.

ಜಲಾಶಯಕ್ಕೆ ಒಳಹರಿವು 4061 ಕ್ಯುಸೆಕ್, ಕಳೆದ ವರ್ಷ ಇದೇ ದಿನ ನೀರಿನ ಒಳಹರಿವು 775 ಕ್ಯುಸೆಕ್. ಹೊರ ಹರಿವು 4220 ಕ್ಯುಸೆಕ್, ನಾಲೆಗೆ 40 ಕ್ಯುಸೆಕ್. ಕಳೆದ ವರ್ಷ ಇದೇ ದಿನ ನೀರಿನ ಹೊರ ಹರಿವು ನದಿಗೆ 1575 ಕ್ಯುಸೆಕ್ ಆಗಿತ್ತು.

ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸುರಿದ ಸರಾಸರಿ ಮಳೆ 8.84 ಮಿ.ಮೀ. ಆಗಿದೆ. ಜಿಲ್ಲೆಯಲ್ಲಿ ಜನವರಿಯಿಂದ ಇಲ್ಲಿಯವರೆಗೆ 1708.42 ಮಿ.ಮೀ ಮಳೆಯಾಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 920 ಮಿ.ಮೀ ಮಳೆಯಾಗಿತ್ತು.

ಎಲ್ಲಿ, ಎಷ್ಟು ಮಳೆ; ಮಡಿಕೇರಿ ತಾಲೂಕಿನಲ್ಲಿ 10.50ಮಿ.ಮೀ ಮಳೆಯಾಗಿದೆ. ವಿರಾಜಪೇಟೆ ತಾಲೂಕಿನಲ್ಲಿ ಸರಾಸರಿ ಮಳೆ 2.93 ಮಿ.ಮೀ. ಆಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ ಸರಾಸರಿ ಮಳೆ 13.11 ಮಿ.ಮೀ. ಆಗಿದೆ.

ಮಡಿಕೇರಿ ಕಸಬಾ 21, ನಾಪೋಕ್ಲು 4.2, ಸಂಪಾಜೆ 8, ಭಾಗಮಂಡಲ 8.8, ಹುದಿಕೇರಿ 13, ಶ್ರೀಮಂಗಲ 3.6, ಅಮ್ಮತ್ತಿ 1, ಸೋಮವಾರಪೇಟೆ ಕಸಬಾ 26.2, ಶನಿವಾರಸಂತೆ 12.4, ಶಾಂತಳ್ಳಿ 17.2, ಕೊಡ್ಲಿಪೇಟೆ 8.4, ಕುಶಾಲನಗರ 4.4, ಸುಂಟಿಕೊಪ್ಪ10 ಮಿ. ಮೀ. ಮಳೆಯಾಗಿದೆ.

Recommended Video

ಗಡ್ಡ ಹಾಗೂ ತಿಲಕಾನೆ ನನ್ನ IDENTITY !! C T RAVI | Oneindia Kannada

ಕಳೆದ ವರ್ಷ ಇದೇ ದಿನ ವಿರಾಜಪೇಟೆ ತಾಲೂಕಿನಲ್ಲಿ 5.95 ಮಿ.ಮೀ. ಸೋಮವಾರ ಪೇಟೆ ತಾಲೂಕಿನಲ್ಲಿ 0.57 ಮಿ.ಮೀ ಮಳೆಯಾಗಿತ್ತು. ವಿರಾಜಪೇಟೆಯಲ್ಲಿ ಜನವರಿಯಿಂದ ಇಲ್ಲಿಯವರೆಗಿನ 1406.86 ಮಿ.ಮೀ. ಮಳೆಯಾಗಿದೆ. ಸೋಮವಾರಪೇಟೆ ತಾಲೂಕಿನಲ್ಲಿ ಜನವರಿಯಿಂದ ಇಲ್ಲಿಯವರೆಗಿನ ಮಳೆ 1366.5 ಮಿ.ಮೀ. ಮಳೆ ಸುರಿದಿದೆ.

English summary
Mysuru-Kodagu MP Pratap Simha inspected the spot where the Madikeri-Sampaje highway had developed cracks near Madenadu. Experts will be asked to conduct soil tests and steps to repair the road he said.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X