ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗಿನಲ್ಲಿ ಸೆಕ್ಷನ್ 144 ಜಾರಿ ಮಾಡಿದ ಡಿಸಿ

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಕೊಡಗು, ಮಾರ್ಚ್ 19: ಕೊಡಗಿನಲ್ಲಿ 35 ವರ್ಷದ ವ್ಯಕ್ತಿಗೆ ಕೊರೊನಾ ವೈರಸ್ ದೃಢಪಟ್ಟ ಹಿನ್ನೆಲೆಯಲ್ಲಿ ಹೆಲ್ತ್ ಎಮರ್ಜೆನ್ಸಿ ಮತ್ತು ಸೆಕ್ಷನ್ 144 ಜಾರಿ ಮಾಡುವ ಮೂಲಕ ಕೊಡಗು ಡಿಸಿ ಅನೀಸ್ ಕಣ್ಮನಿ ಜಾಯ್ ನಿ‍ಷೇಧಾಜ್ಞೆ ಆದೇಶ ಹೊರಡಿಸಿದ್ದಾರೆ.

ಸುದ್ದಿಗೋಷ್ಠಿ ನಡೆಸಿದ ಕೊಡಗು ಡಿಸಿ ಅನೀಸ್ ಕಣ್ಮನಿ ಜಾಯ್ ಸ್ಪಷ್ಟನೆ ನೀಡಿದ್ದಾರೆ. ದುಬೈನಿಂದ ಬಂದ ವ್ಯಕ್ತಿ ಮಡಿಕೇರಿ ತಾಲ್ಲೂಕಿನ ಕೊಂಡಂಗೇರಿ ಗ್ರಾಮದವರಾಗಿದ್ದಾರೆ.

ಆ ವ್ಯಕ್ತಿಯಲ್ಲಿ ಕೊರೊನಾ ಪಾಸಿಟಿವ್ ಇರುವ ಬಗ್ಗೆ ಮೈಸೂರಿನಿಂದ ವರದಿ ಬಂದಿದೆ. ಕೊರೊನಾ ಎದುರಿಸಲು ಮತ್ತು ಅದರ ತಡೆಗೆ ಜಾಗೃತಿ ಮೂಡಿಸಲು ಜಿಲ್ಲಾಡಳಿತ ಸಿದ್ಧವಾಗಿದೆ ಎಂದು ಡಿಸಿ ಹೇಳಿದರು.

DC Issued By Section 144 In Kodagu

100 ಬೆಡ್ ಐಸೋಲೇಷನ್ ವಾರ್ಡ್ ಮತ್ತು 150 ಬೆಡ್ ನ ಮತ್ತೊಂದು ಕೋರೆಂಟಲ್ ವಾರ್ಡ್ ರೆಡಿಯಾಗಿದೆ ಎಂದು ಮಾಹಿತಿ ನೀಡಿದರು. ಕೊಡಗು ಮೆಡಿಕಲ್ ಕಾಲೇಜಿನಲ್ಲಿ ಎಲ್ಲಾ ಅಗತ್ಯ ಕ್ರಮ ಕೈಗೊಳ್ಳಲಾಗಿದ್ದು, ಪಾಸಿಟಿವ್ ಬಂದ ವ್ಯಕ್ತಿಯ ಆರೋಗ್ಯ ಸದ್ಯಕ್ಕೆ ಸ್ಟೇಬಲ್ ಇದೆ ಎಂದರು.

ಮುಂಜಾಗ್ರತಾ ದೃಷ್ಠಿಯಿಂದ ಜಿಲ್ಲೆಯಲ್ಲಿ 144(3) ಸೆಕ್ಷನ್ ಕೂಡ ಜಾರಿ ಮಾಡಿದ್ದೇವೆ. ರೆಸಾರ್ಟ್, ಹೊಟೆಲ್, ಹೋಮ್ಸ್ ಸ್ಟೇ ಬುಕಿಂಗ್ ಕ್ಯಾನ್ಸಲ್ ಮಾಡಿ. ಹೊಸ ಬುಕಿಂಗ್ ತಗೊಬೇಡಿ ಎಂದು ಆದೇಶಿಸಿದ್ದಾರೆ.

ಕೊರೊನಾ ತಡೆಗೆ ಜಿಲ್ಲಾ ಮಟ್ಟದ ವಿಶೇಷ ತಂಡ ರಚನೆ ಮಾಡಲಾಗಿದ್ದು, ಧಾರ್ಮಿಕ ಕಾರ್ಯಕ್ರಮ ರುಟೀನ್ ಬಿಟ್ಟು ಬೇರೆ ಯಾವ ಕಾರ್ಯಕ್ರಮ ಮಾಡುವ ಹಾಗಿಲ್ಲ ಎಂದಿದ್ದಾರೆ. ಶಾಲೆ, ಕಾಲೇಜು, ಅಂಗನವಾಡಿ, ಜಿಮ್, ಸ್ವಿಮ್ಮಿಂಗ್ ಪೂಲ್, ಮೈದಾನ, ಟ್ಯೂಷನ್ ಸೆಂಟರ್ ಬಂದ್ ಮಾಡಲಾಗಿದೆ.

ಸಂತೆ, ಜಾತ್ರೆ ಸೇರಿದಂತೆ ಅಧಿಕ ಜನ ಸೇರುವ ಸ್ಥಳಗಳನ್ನು ಕಂಪ್ಲೀಟ್ ಬಂದ್ ಮಾಡಲು ಆದೇಶಿಸಿದೆ. ಜಿಲ್ಲೆಯ ಗಡಿಗಳಲ್ಲಿ ಚೆಕ್ ಪೊಸ್ಟ್ ತೆರೆದು ಪರಿಶೀಲನೆ ಮಾಡಲಾಗುತ್ತಿದೆ, ಮೆಡಿಕಲ್, ದಿನಸಿ, ತರಕಾರಿ ಬಿಟ್ಟು ಬೇರೆ ಎಲ್ಲವನ್ನೂ ಕ್ಲೋಸ್ ಮಾಡಿ ಸಹಕರಿಸಿ ಎಂದು ಕೊಡಗು ಜಿಲ್ಲಾಧಿಕಾರಿ ಅನೀಸ್ ಕಣ್ಮನಿ ಜಾಯ್ ಮನವಿ ಮಾಡಿಕೊಂಡಿದ್ದಾರೆ.

English summary
Kodagu DC has issued order by enforcing Section 144 In Kodagu District.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X