• search
 • Live TV
ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ದಲೈ ಲಾಮಾ ನಂತರ ಚೀನಾ ವ್ಯಕ್ತಿಯನ್ನು ಆಧ್ಯಾತ್ಮಿಕ ಗುರುವಾಗಿಸುವ ಸಂಚು ಬಹಿರಂಗ

By Coovercolly Indresh
|

ಮಡಿಕೇರಿ, ಸೆಪ್ಟೆಂಬರ್ 24: ತನ್ನ ಸುತ್ತಮುತ್ತಲಿನ ಇತರ ದೇಶಗಳಿಗೆ ಸೇರಿದ ಭೂ ಭಾಗವನ್ನು ಕಬಳಿಸಲು ಸದಾ ಹಾತೊರೆಯುವ ಚೀನಾ ತಾನು ಈಗಾಗಲೇ ಕಬಳಿಸಿರುವ ಟಿಬೆಟ್‌ ಅನ್ನು ಟಿಬೇಟನ್ನರು ಮರು ಪಡೆಯಲು ಪ್ರಯತ್ನಿಸದಂತೆ ಮಾಡಲು ಭಾರೀ ಷಡ್ಯಂತ್ರ ರೂಪಿಸಿದ್ದು, ಇದನ್ನು ಜಾರಿಗೊಳಿಸಲು ಕೋಟ್ಯಂತರ ರೂಪಾಯಿ ಹಣವನ್ನು ವೆಚ್ಚ ಮಾಡುತ್ತಿರುವ ಕುರಿತು ಸ್ಫೋಟಕ ಮಾಹಿತಿ ಬಹಿರಂಗಗೊಂಡಿದೆ.

ಇಲ್ಲಿಗೆ ಸಮೀಪದ ಬೈಲಕುಪ್ಪೆಯಲ್ಲಿರುವ ಸೆರಾ ಮೊನಾಸ್ಟ್ರಿಯ (ಮಠ) ಕೆಲವು ಸನ್ಯಾಸಿಗಳಿಗೆ (ಲಾಮ) ಲಂಚ ನೀಡಿದ್ದಾರೆ ಎಂಬ ಆರೋಪದಡಿಯಲ್ಲಿ ಕಳೆದ ವಾರ ದೆಹಲಿಯಲ್ಲಿ ಚೀನಾದ ಪ್ರಜೆ ಚಾರ್ಲಿ ಪೆಂಗ್ ಅವರನ್ನು ಜಾರಿ ನಿರ್ದೇಶನಾಲಯ (ಇಡಿ) ಬಂಧಿಸಿದೆ. ಆರೋಪಿಯ ವಿರುದ್ಧ ಮನಿ ಲಾಂಡರಿಂಗ್ ಮೊಕದ್ದಮೆ ದಾಖಲಿಸಲಾಗಿದೆ.

1,000 ಕೋಟಿ ಅಕ್ರಮ ಹಣ ವರ್ಗಾವಣೆ ಕಿಂಗ್‌ಪಿನ್: ಯಾರು ಈ ಚೀನಾದ ಪ್ರಜೆ?

ಸೆರಾ ಮೇ ಮೊನಾಸ್ಟ್ರಿಯ ಜಮಾಯಂಗ್ ಜಿನ್ಪಾ ಅವರಿಗೆ 'ಎಸ್‌ಕೆ ಟ್ರೇಡಿಂಗ್' ಕಂಪೆನಿಯ ಖಾತೆಯಿಂದ 30 ಲಕ್ಷ ರೂಪಾಯಿಗಳನ್ನು ನೀಡಲಾಗಿದೆ ಎಂದು ಮೊನಾಸ್ಟ್ರಿಯ ಮುಖ್ಯಸ್ಥರು ತನಿಖಾಧಿಕಾರಿಗಳಿಗೆ ತಿಳಿಸಿದ್ದಾರೆ. ಟಿಬೇಟನ್ ಸನ್ಯಾಸಿಗಳಿಗೆ ಹಣವನ್ನು ವರ್ಗಾಯಿಸಲು ಪೆಂಗ್ ಬಳಸುವ ಹಲವಾರು ಶೆಲ್ ಕಂಪನಿಗಳಲ್ಲಿ ಈ ಖಾತೆಯೂ ಒಂದು ಎಂದು ತನಿಖಾಧಿಕಾರಿ ಹೇಳಿದ್ದಾರೆ. ದೆಹಲಿಯಲ್ಲಿ ವಾಸಿಸುತ್ತಿರುವ ಕೆಲವು ಟಿಬೆಟನ್ನರಿಗೆ ಪೆಂಗ್ ಲಂಚ ನೀಡುತಿದ್ದಾರೆ ಎಂಬ ಆರೋಪದ ಬಗ್ಗೆ ತನಿಖೆ ನಡೆಯುತ್ತಿದೆ

 ಚೀನಾದ ವ್ಯಕ್ತಿಯನ್ನು ದಲೈ ಉತ್ತರಾಧಿಕಾರಿಯಾಗಿಸುವ ಹುನ್ನಾರ

ಚೀನಾದ ವ್ಯಕ್ತಿಯನ್ನು ದಲೈ ಉತ್ತರಾಧಿಕಾರಿಯಾಗಿಸುವ ಹುನ್ನಾರ

ದಲೈ ಲಾಮಾ ಮತ್ತು ಅವರ ಸಹಚರರ ಬಗ್ಗೆ ಮಾಹಿತಿ ಸಂಗ್ರಹಿಸಲು ದೆಹಲಿಯ ಮಜ್ನು ಕಾ ತಿಲಾ, 42 ವರ್ಷದ ಚೀನಾದ ಪ್ರಜೆ ಸೇರಿದಂತೆ ದೇಶಾದ್ಯಂತ ಕೆಲವು ‘ಲಾಮಾಗಳು' ಲಂಚ ನೀಡುತ್ತಿದ್ದಾರೆ ಎಂದು ಪ್ರಮುಖ ಮಾಧ್ಯಮವೊಂದು ಈ ಹಿಂದೆ ವರದಿ ಮಾಡಿತ್ತು. ದಲೈ ಲಾಮಾ ಅವರ ನಂತರ ಚೀನಾದ ವ್ಯಕ್ತಿಯೊಬ್ಬರನ್ನು ದಲೈ ಅವರ ಉತ್ತರಾಧಿಕಾರಿಯನ್ನಾಗಿಸಲು ಈ ರೀತಿ ಲಂಚದ ಹಣವನ್ನು ನೀಡಿ ಖರೀದಿಸಲಾಗುತ್ತಿದೆ ಎಂದು ಎಂದು ತನಿಖಾಧಿಕಾರಿಗಳು ತಿಳಿಸಿದ್ದಾರೆ.

ಸೆರಾ ಜೆ ಮೊನಾಸ್ಟ್ರಿಯ ಮತ್ತೊಬ್ಬ ಲಾಮಾ ಥುಪ್ಟನ್ ಚೋಡಕ್ ‌ಗೆ 15 ಲಕ್ಷ ರೂ., ಫುಂಟ್ ಸೊಕ್ ಧಾರ್ಗ್ಯಾಲ್, ನ್ಗಾವಾಂಗ್ ಲೊಸೆಲ್ ಮತ್ತು ತಾಶಿ ಚೊಯೆಪಲ್ ‌ಗೆ ತಲಾ 10 ಲಕ್ಷ ರೂ., ಥುಪ್ಟನ್ ವಾಂಗ್ ‌ಚುಕ್‌ಗೆ 8 ಲಕ್ಷ ರೂ ನೀಡಲಾಗಿದೆ ಎಂದೂ ಜಾರಿ ನಿರ್ದೇಶನಾಲಯದ ಅಧಿಕಾರಿಗಳು ತಿಳಿಸಿದ್ದಾರೆ.

 ಬೈಲಕುಪ್ಪೆ ಅತಿ ದೊಡ್ಡ ಟಿಬೆಟನ್ ವಸಾಹತು

ಬೈಲಕುಪ್ಪೆ ಅತಿ ದೊಡ್ಡ ಟಿಬೆಟನ್ ವಸಾಹತು

ಅದೇ ಕಂಪನಿಯು ಕರ್ನಾಟಕದ ಮುಂಡಗೋಡದಲ್ಲಿ ಡ್ರೆಪುಂಗ್ ಲೋಸೆಲಿಂಗ್ ‌ಗೆ 10 ಲಕ್ಷ ರೂ. ಮತ್ತು ಸೋನಮ್ ಡೋರ್ಜಿಗೆ 7 ಲಕ್ಷ ರೂ. ಮುಂಡಗೋಡದ ಲೋಬ್ ‌ಸಾಂಗ್ ಡೋರ್ಜಿ ಡ್ರೆಪುಂಗ್ ಲೊಸೆಲಿಂಗ್ ‌ಗೆ ಎಂಬ ಲಾಮಾಗೆ ಪಾವತಿಸಲಾಗಿದೆ. ಮುಂಬಯಿಯಲ್ಲಿ ಪ್ಯಾನ್ ಮಿಂಗ್ಮಿಂಗ್ ಎಂಬ ಸನ್ಯಾಸಿಗೆ ಎಸ್‌ ಕೆ ಟ್ರೇಡಿಂಗ್ ಖಾತೆಯಿಂದ 10 ಲಕ್ಷ ರೂಪಾಯಿಗಳನ್ನು ನೀಡಲಾಗಿದೆ ಎಂದು ತಿಳಿದುಬಂದಿದೆ.

ಅಕ್ರಮ ಹಣ ವರ್ಗಾವಣೆ: ಚೀನಾದ ಪ್ರಜೆ ಮೇಲೆ ಇಡಿ ತನಿಖೆ

ಬೆಂಗಳೂರಿನಿಂದ ಸುಮಾರು 200 ಕಿ.ಮೀ. ದೂರದಲ್ಲಿರುವ ಬೈಲಕುಪ್ಪೆಯು ಧರ್ಮಶಾಲಾ ನಂತರ ಟಿಬೆಟ್‌ನ ಹೊರಗೆ ಅತಿದೊಡ್ಡ ಟಿಬೆಟನ್ ವಸಾಹತು ಆಗಿದೆ. ಚಾರ್ಲಿ ಪೆಂಗ್ ‌ನಿಂದ ಲಂಚ ಪಡೆದ ಆರೋಪ ಹೊತ್ತಿರುವ ಹತ್ತು ಲಾಮಾಗಳಲ್ಲಿ ಆರು ಮಂದಿ ಸೆರಾ ಮೊನಾಸ್ಟ್ರಿಯಲ್ಲಿ ವಾಸಿಸುತ್ತಿದ್ದಾರೆ. ಈಗ ಕೊರೊನಾ ವೈರಸ್ ಸಾಂಕ್ರಾಮಿಕ ರೋಗದಿಂದಾಗಿ ಮೊನಾಸ್ಟ್ರಿಗೆ ಹೊರಗಿನವರಿಗೆ ಪ್ರವೇಶವನ್ನು ನಿರ್ಬಂಧಿಸಲಾಗಿದೆ. ಈ ಕುರಿತು ಪ್ರತಿಕ್ರಿಯೆಗಾಗಿ ಸೆರಾ ಮೊನಾಸ್ಟ್ರಿಗೆ ದೂರವಾಣಿ ಕರೆ ಮಾಡಿದಾಗ ಯಾರೂ ಕರೆ ಸ್ವೀಕರಿಸಲಿಲ್ಲ .

 ಚೀನಾದ ವ್ಯಕ್ತಿಯಿಂದ ಹಣ ಪಡೆದಿದ್ದಾರಾ ಲಾಮಾಗಳು?

ಚೀನಾದ ವ್ಯಕ್ತಿಯಿಂದ ಹಣ ಪಡೆದಿದ್ದಾರಾ ಲಾಮಾಗಳು?

"ಕೆಲವು ಲಾಮಾಗಳು ದೆಹಲಿಯಲ್ಲಿ ಬಂಧಿಸಲ್ಪಟ್ಟ ಚೀನಾದ ವ್ಯಕ್ತಿಯಿಂದ ಹಣವನ್ನು ಪಡೆದರು. ಆದರೆ ಈ ಲಾಮಾಗಳು ಈ ಹಣವನ್ನು ಕುಟುಂಬ ಮತ್ತು ಸ್ನೇಹಿತರು ನೀಡಿದ್ದು ಎಂದು ಹೇಳುತ್ತಾರೆ, ಅವರು ಅಧ್ಯಯನಕ್ಕಾಗಿ ಇಲ್ಲಿಗೆ ಬರುತ್ತಾರೆ. ಆದ್ದರಿಂದ ಹಣವನ್ನು ಕುಟುಂಬದಿಂದ ಕಳುಹಿಸಲಾಗಿದೆ. ಚೀನಾ ಸರ್ಕಾರ ಅನುಮತಿಸದ ಕಾರಣ ಟಿಬೆಟ್‌ನಿಂದ ಭಾರತದಲ್ಲಿ ವಾಸಿಸುವ ಜನರಿಗೆ ಹಣವನ್ನು ಕಳುಹಿಸುವುದು ಅಷ್ಟು ಸುಲಭವಾಗಿಲ್ಲ. ವೆಸ್ಟ್ರನ್ ಯೂನಿಯನ್ ಹಣ ವರ್ಗಾವಣೆಯನ್ನು ಏಕೆ ಬಳಸಲಿಲ್ಲ ಎಂದು ಅವರನ್ನು ಕೇಳಿದೆ. ಆದರೆ ಅವರು ಇಲ್ಲ ಅದನ್ನು ಬಳಸಲು ಅನುಮತಿಸಲಾಗುವುದಿಲ್ಲ.

ಕೆಲವು ಮೊತ್ತವು ದೊಡ್ಡದಾಗಿದೆ ಲಾಮಾಗಳು ಪದವೀಧರರಾದ ಸಂದರ್ಭದಲ್ಲಿ 5,000 ಜನರಿಗೆ ಆತಿಥ್ಯ ನೀಡಬೇಕಾಗುತ್ತದೆ. ಇದಕ್ಕಾಗಿ ದೊಡ್ಡ ಮೊತ್ತದ ಹಣವನ್ನು ಕುಟುಂಬದಿಂದ ಪಡೆಯುತ್ತಾರೆ. ಇದನ್ನು ತನಿಖಾ ಸಂಸ್ಥೆಗಳೇ ತನಿಖೆ ಮಾಡಬೇಕಿದೆ ಎಂದು ಸೆರಾ ಮೊನಾಸ್ಟ್ರಿಯ ಮುಖ್ಯ ಸನ್ಯಾಸಿ ತಾಶಿ ಟಿ.ವಿ. ಚಾನಲ್‌ ಒಂದಕ್ಕೆ ತಿಳಿಸಿದ್ದಾರೆ.

  ಕಾಶ್ಮೀರದಲ್ಲಿ ಭಾರತೀಯರು ಅಂತ ಹೇಳೋರು ಯಾರು ಇಲ್ಲಾ?? | Oneindia Kannada

  "ಸನ್ಯಾಸಿಗಳು ತಪ್ಪು ಮಾಡಿದ್ದರೆ ಅವರ ಪರ ಇರುವುದಿಲ್ಲ"

  "ನಾನು ಇಬ್ಬರು ಸನ್ಯಾಸಿಗಳೊಂದಿಗೆ ಮಾತನಾಡಿದ್ದೇನೆ, ಅವರು ಈ ವ್ಯಕ್ತಿಯನ್ನು (ಚಾರ್ಲಿ ಪೆಂಗ್) ಎಂದಿಗೂ ಭೇಟಿ ಮಾಡಿಲ್ಲ. ಅವರು ಹಣವನ್ನು ವರ್ಗಾವಣೆ ಮಾಡಲು ಯಾರನ್ನಾದರೂ ಬಳಸಿದ್ದಾರೆ. ಅವರಲ್ಲದೆ, ಈ ವ್ಯಕ್ತಿ ಯಾರೆಂದು ಅವರಿಗೆ ತಿಳಿದಿಲ್ಲ" ಎಂದು ತಾಶಿ ತಿಳಿಸಿದ್ದಾರೆ. ಈ ಆರೋಪಗಳ ಬಗ್ಗೆ ಮೊನಾಸ್ಟ್ರಿಯು ಯಾವುದೇ ಆಂತರಿಕ ತನಿಖೆಯನ್ನು ಪ್ರಾರಂಭಿಸದಿದ್ದರೂ, ತಾಶಿ ಅವರು ತಾರ್ಕಿಕ ತೀರ್ಮಾನಕ್ಕೆ ಬರಲು ಭಾರತ ಸರ್ಕಾರದ ತನಿಖೆಗಾಗಿ ಕಾಯುತ್ತಿದ್ದೇವೆ ಮತ್ತು ಸನ್ಯಾಸಿಗಳು ತಪ್ಪು ಮಾಡಿದ್ದಾರೆಂದು ಕಂಡುಬಂದಲ್ಲಿ ಮೊನಾಸ್ಟ್ರಿಯು ಅವರ ಪರ ಇರುವುದಿಲ್ಲ ಎಂದು ತಾಶಿ ಹೇಳಿದರು.

  ದೆಹಲಿ ಮತ್ತು ಕರ್ನಾಟಕದ ಪೊಲೀಸರು ಈ ತಿಂಗಳಿನಲ್ಲೇ ಕನಿಷ್ಠ 30 ಲಾಮಾಗಳನ್ನು ಅಕ್ರಮ ಹಣ ವರ್ಗಾವಣೆ ಕುರಿತು ಪ್ರಶ್ನಿಸಿದ್ದಾರೆ ಎಂದು ಅಧಿಕಾರಿ ಮೂಲಗಳು ತಿಳಿಸಿವೆ. ಚೀನಾ ಭಾರತದಲ್ಲಿ ಹಲವಾರು ಹವಾಲಾ ಏಜೆಂಟರನ್ನು ಹೊಂದಿದ್ದು, ಇವರ ಮೂಲಕ ಟಿಬೇಟನ್ ಲಾಮಾಗಳನ್ನು ಹಣ ಕೊಟ್ಟು ಖರೀದಿಸುತ್ತಿದೆ. ಈಗ ಬಂಧಿತನಾಗಿರುವ ಪೆಂಗ್ ಈ ಏಜೆಂಟರುಗಳಲ್ಲಿ ಒಬ್ಬನಾಗಿದ್ದು, ಟಿಬೇಟನ್ನರು ಮುಂದೆ ತಮ್ಮ ತಾಯ್ನಾಡನ್ನು ಮರಳಿ ಪಡೆಯುವ ಹೋರಾಟಕ್ಕೆ ಯತ್ನಿಸುವುದನ್ನು ಈ ಮೂಲಕ ತಡೆಯೊಡ್ಡಲಾಗುತ್ತಿದೆ.

  English summary
  China has made hefty plan to prevent the Tibetans from reclaiming the Tibet. It is said that, china is spending crores of rupees to this plan. There is Conspiracy to make chinese person as tibet's next Dalai Lama
  ತಾಜಾ ಸುದ್ದಿ ತಕ್ಷಣ ಪಡೆಯಿರಿ
  Enable
  x
  Notification Settings X
  Time Settings
  Done
  Clear Notification X
  Do you want to clear all the notifications from your inbox?
  Settings X