• search
 • Live TV
ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಶುಕ್ರವಾರದಿಂದ ಸೋಮವಾರದವರೆಗೆ ಕೊಡಗು ಜಿಲ್ಲೆ ಸಂಪೂರ್ಣ ಲಾಕ್ ಡೌನ್

|

ಮಡಿಕೇರಿ, ಜುಲೈ 17: ಶುಕ್ರವಾರ ಸಂಜೆಯಿಂದ ಸೋಮವಾರದ ಬೆಳಿಗ್ಗೆವರೆಗೆ ಕೊಡಗು ಜಿಲ್ಲೆಯಲ್ಲಿ ಸಂಪೂರ್ಣವಾಗಿ ಲಾಕ್‍ಡೌನ್ ಮಾಡುವುದಾಗಿ ಜಿಲ್ಲಾಧಿಕಾರಿ ಅನೀಸ್ ಕೆ.ಜಾಯ್ ತಿಳಿಸಿದ್ದಾರೆ.

   Yeddyurappa Government Fail Again!! | Oneindia Kannada

   ಜಾಗತಿಕ ವ್ಯಾಕ್ಸಿನ್ ವಾರ್: ಭಾರತವೇ ಯುದ್ಧ ಕೇಂದ್ರ..!

   ಕೊಡಗು ಜಿಲ್ಲೆಗೆ ವಾರಾಂತ್ಯದಲ್ಲಿ ಹೊರಗಿನಿಂದ ಹೆಚ್ಚಿನ ಸಂಖ್ಯೆಯಲ್ಲಿ ಪ್ರವಾಸಿಗರು ಸೇರಿದಂತೆ ವಿವಿಧ ಕಡೆಗಳಿಂದ ಜನರು ಬರುತ್ತಿದ್ದಾರೆ. ಅಲ್ಲದೆ ಜಿಲ್ಲೆಯಲ್ಲಿ ಕೊರೊನಾ ವೈರಸ್ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಇಂದು ಸಂಜೆಯಿಂದ ಸೋಮವಾರದವರೆಗೆ ಜಿಲ್ಲಾ ಮಟ್ಟದಲ್ಲಿ ಲಾಕ್ ಡೌನ್ ಮಾಡಲು ನಿರ್ಧರಿಸಲಾಗಿದೆ ಎಂದರು.

   ಕೊಡಗಿನಲ್ಲಿ ಸದ್ಯ ಕೊರೊನಾ ಪ್ರಕರಣಗಳು ಎಷ್ಟಿವೆ? ಕಂಟೈನ್ಮೆಂಟ್ ವಲಯಗಳೆಷ್ಟು?

   ಈ ಹಿನ್ನೆಲೆಯಲ್ಲಿ ತರಕಾರಿ, ಮೆಡಿಕಲ್ ಶಾಪ್ ಗಳು, ಪೆಟ್ರೋಲ್ ಬಂಕ್ ಗಳು ಸೇರಿದಂತೆ ಕಾರ್ಮಿಕರ ಅನುಕೂಲ ನೋಡಿಕೊಂಡು ಸರ್ಕಾರಿ ಆಹಾರ ಮಳಿಗೆಗಳಿಗೆ ಮಾತ್ರ ವಿನಾಯಿತಿ ಕೊಡಲಾಗಿದೆ. ಜಿಲ್ಲೆಯಲ್ಲಿ ಸರ್ಕಾರಿ ಸಾರಿಗೆ ಸ್ತಬ್ಧವಾಗಲಿದ್ದು, ಮೆಡಿಕಲ್, ಆಸ್ಪತ್ರೆ ಒಳಗೊಂಡಂತೆ ತುರ್ತು ಸೇವೆಗಳಿಗೆ ಮಾತ್ರ ಆಟೋಗಳನ್ನು ಬಳಸಬಹುದು ಎಂದು ಜಿಲ್ಲಾಧಿಕಾರಿ ಅನೀಸ್ ಕೆ.ಜಾಯ್ ಅವರು ತಿಳಿಸಿದ್ದಾರೆ.

   ಈಗಾಗಲೇ ಎಸ್‌ಎಸ್‌ಎಲ್‌ಸಿ ಪರೀಕ್ಷೆಯ ಮೌಲ್ಯಮಾಪನ ನಡೆಯುತ್ತಿದ್ದು, ಇಲ್ಲಿಗೆ ಹಾಜರಾಗುವ ಶಿಕ್ಷಕರಿಗೆ ಸ್ವಂತ ವಾಹನ ಅಥವಾ ನಿಗದಿಪಡಿಸಿರುವ ಬಸ್ ಗಳಲ್ಲಿ ಬರುವಂತೆ ಸೂಚಿನೆ ನೀಡಿದ್ದೇವೆ. ಕರ್ತವ್ಯಕ್ಕೆ ಹಾಜರಾಗುವಾಗ ತಮ್ಮ ಗುರುತಿನ ಚೀಟಿಯನ್ನು ಕಡ್ಡಾಯವಾಗಿ ತರಬೇಕು. ಇದೇ ನಿಯಮಗಳನ್ನು ಜುಲೈ 31ರವರೆಗೆ ಮುಂದುವರೆಸಲು ತೀರ್ಮಾನಿಸಲಾಗಿದೆ ಎಂದು ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಮಾಹಿತಿ ನೀಡಿದರು.

   English summary
   District Collector Anees K. Joy said that the lockdown would be completely shut down in Kodagu district from Friday evening till Monday morning.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X