• search
 • Live TV
ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ವಿದ್ಯಾರ್ಥಿಗಳಿಗಾಗಿ; ಮಂಗಳೂರು ವಿವಿ ಸ್ನಾತಕೋತ್ತರ ಕೇಂದ್ರದಲ್ಲಿ ಕೊಡವ ಎಂಎ ತರಗತಿ ಆರಂಭ

|
Google Oneindia Kannada News

ಮಡಿಕೇರಿ, ಜನವರಿ 8: ಮಂಗಳೂರು ವಿಶ್ವವಿದ್ಯಾಲಯದ ಅಧೀನಕ್ಕೆ ಒಳಪಡುವ ಚಿಕ್ಕಅಳುವಾರ ಸ್ನಾತಕೋತ್ತರ ಕೇಂದ್ರದಲ್ಲಿ ಶೈಕ್ಷಣಿಕ ವರ್ಷ 2021-22ನೇ ಸಾಲಿನಲ್ಲಿ ಕೊಡವ ಎಂಎ ತರಗತಿ ನಡೆಸಲು ಅವಕಾಶ ಲಭಿಸಿದೆ. ಆ ಮೂಲಕ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಯತ್ನಕ್ಕೆ ಯಶಸ್ಸು ದೊರೆತಂತಾಗಿದೆ.

ಕೊಡವ ಭಾಷೆ ಕಲಿಕೆಯ ಬೆಳವಣಿಗೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿ ಈಗಾಗಲೇ ಕೊಡವ ಪಡಿಪು ಪಠ್ಯಪುಸ್ತಕ ರಚನೆ, ಪ್ರಾಥಮಿಕ, ಪದವಿ ಕಾಲೇಜಿನಲ್ಲಿ ಕೊಡವ ಭಾಷೆಯನ್ನು ಕಲಿಸಲು ಕ್ರಮ, ಕೊಡವ, ಕನ್ನಡ, ಹಿಂದಿ, ಇಂಗ್ಲಿಷ್ ಆಧಾರಿತ ಕೊಡವ ಶಬ್ದಕೋಶದ ತಯಾರಿ ಸೇರಿದಂತೆ ವಿವಿಧ ಪ್ರಯತ್ನದಲ್ಲಿ ಯಶಸ್ಸು ಕಂಡಿದೆ.

ಸ್ನಾತಕೋತ್ತರದಲ್ಲಿಯೂ ಕೊಡವ ಭಾಷೆ ಕಲಿಕೆಗೆ ಅವಕಾಶ ಕಲ್ಪಿಸುವ ಪ್ರಯತ್ನದಲ್ಲಿಯೂ ಸಫಲತೆ ಸಾಧಿಸಿರುವುದು ಕೊಡವ ಭಾಷಿಕರಲ್ಲಿ ಖುಷಿ ತಂದಿದೆ. ಸ್ನಾತಕೋತ್ತರ ನಾಲ್ಕು ಸೆಮಿಸ್ಟರ್‌ಗಳನ್ನು ಒಳಗೊಂಡಿದ್ದು, ಪ್ರತಿ ಪತ್ರಿಕೆಯ ವಾರದ 5 ಗಂಟೆಗಳಲ್ಲಿ ನಾಲ್ಕು ಗಂಟೆಗಳ ತರಗತಿ ಬೋಧನೆಯನ್ನು ನಡೆಸಲಾಗುವುದು. ಒಂದು ಗಂಟೆಯ ತರಗತಿಯನ್ನು ವಿದ್ಯಾರ್ಥಿಯ ಪಾಲ್ಗೊಳ್ಳುವಿಕೆಗೆ ಕಾದಿರಿಸಲಾಗಿದೆ.

ವಿದ್ಯಾರ್ಥಿಗಳಿಂದ ಪ್ರಾಯೋಗಿಕ ತರಗತಿಗಳು ಮತ್ತು ಕ್ಷೇತ್ರ ಕಾರ್ಯವನ್ನು ನಡೆಸಲಾಗುವುದು. ಆಯಾ ಪತ್ರಿಕೆಗಳಿಗೆ ಅನುಸಾರವಾಗಿ ಪದ್ಯ ಓದುವ ಕ್ರಮ, ಅರ್ಥೈಸಿಕೊಳ್ಳುವ ಕ್ರಮ, ವಿಶ್ಲೇಷಣೆ ಮತ್ತು ವಿಮರ್ಶೆ, ಭಾವ ಸ್ವಾರಸ್ಯ, ಸಂಭಾಷಣೆ ಕೌಶಲ, ಸನ್ನಿವೇಶಗಳ ಪರಿಚಯ, ವಸ್ತು, ಪಾತ್ರ, ಭಾಷೆ ಬಳಕೆ, ರಚನೆ, ತಂತ್ರಗಾರಿಕೆ, ಹಿನ್ನೆಲೆ, ಕ್ಷೇತ್ರಕಾರ್ಯ, ಭಾಷಾ ಅಧ್ಯಯನಗಳನ್ನು ಭೋಧನೆ ಮಾಡಲಾಗುತ್ತದೆ.

ಮೊದಲನೆಯ ಸೆಮಿಸ್ಟರ್ ಪಠ್ಯಕ್ರಮದಲ್ಲಿ ಏನಿರಲಿದೆ?
ಪ್ರಧಾನ ವಿಷಯಗಳಲ್ಲಿ ಕೊಡಗು- ಪ್ರಾದೇಶಿಕ, ಚಾರಿತ್ರಿಕ ಹಿನ್ನೆಲೆ, ಭಾಷಾ ವಿಜ್ಞಾನ ಮತ್ತು ಕೊಡವ ಭಾಷೆ, ಕೊಡವ ಜಾನಪದ ಭಾಗ 1, ಪೂರಕ ವಿಷಯದಡಿಯಲ್ಲಿ ಕೊಡವ ಸಾಂಸ್ಕೃತಿಕ ಮತ್ತು ಧಾರ್ಮಿಕ ಅನನ್ಯತೆ, ಭಾಷಾ ಸಿದ್ಧಾಂತಗಳು, ವರ್ಗೀಕರಣ ಪತ್ರಿಕೆ, ಕೊಡವ ಜಾನಪದ ಪ್ರಕಾರಗಳು ಮತ್ತು ಪ್ರವೃತ್ತಿಗಳು ಇರಲಿವೆ.

ಎರಡನೆ ಸೆಮಿಸ್ಟರ್ ಪಠ್ಯಕ್ರಮ
ಪ್ರಧಾನ ವಿಷಯದಡಿಯಲ್ಲಿ ಕೊಡವ ಆಧುನಿಕ ಸಾಹಿತ್ಯ, ಕೊಡವ ಭಾಷಿಕ ಸಮುದಾಯಗಳ ಆಚರಣೆ, ಪರಂಪರೆ, ಪೂರಕ ವಿಷಯದಡಿಯಲ್ಲಿ ಕೊಡವ ಮಾಧ್ಯಮಗಳು ಮತ್ತು ಸಂಘ- ಸಂಸ್ಥೆಗಳು, ಕೊಡವ ಭಾಷೆಯ ಲಿಪಿ ವ್ಯಾಕರಣ ಹಾಗೂ ಪ್ರಸ್ತುತ ಸ್ಥಿತಿಗತಿ, ಮುಕ್ತ ಐಚ್ಛಿಕ ವಿಷಯಗಳಲ್ಲಿ ಒಂದನ್ನು ಆಯ್ಕೆ ಮಾಡಿ ಕೊಳ್ಳಲು ಅವಕಾಶವಿದ್ದು, ಕೊಡವ ರಂಗಭೂಮಿ ಮತ್ತು ಚಲನಚಿತ್ರ ಕ್ಷೇತ್ರ, ಆಚರಣೆ ಸಂಬಂಧಿತ ಕಲೆಗಳನ್ನು ಅಳವಡಿಸಲಾಗಿದೆ.

Madikeri: Kodava MA Class Will Start at Mangalore University Postgraduate Center

ಮೂರನೇ ಸೆಮಿಸ್ಟರ್ ಪಠ್ಯಕ್ರಮ
ಪ್ರಧಾನ ವಿಷಯಗಳಡಿ ಕೊಡವ ಜಾನಪದ ಸಾಹಿತ್ಯ- ಭಾಗ 2, ಕೊಡವ ಅನುವಾದ ಸಾಹಿತ್ಯ, ಪೂರಕ ವಿಷಯದಲ್ಲಿ ಮೂರು ಆಯ್ಕೆಗಳಿರಲಿದ್ದು, ಎರಡನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದೆ. ಪ್ರಕೃತಿ ಆರಾಧನೆ ಮತ್ತು ಕೃಷಿ ಸಂಸ್ಕೃತಿ, ಕೊಡವ ತೌಲನಿಕ ಸಾಹಿತ್ಯ, ಕೊಡಗಿನಲ್ಲಿ ಪ್ರವಾಸೋದ್ಯಮ, ಮುಕ್ತ ಐಚ್ಛಿಕ ವಿಷಯಗಳಲ್ಲಿ ಒಂದನ್ನು ಆಯ್ಕೆ ಮಾಡಿಕೊಳ್ಳಲು ಅವಕಾಶವಿದ್ದು, ಇದರಲ್ಲಿ ಕೊಡಗಿನ ಐತಿಹ್ಯಗಳು, ಕೊಡಗಿನ ದೇವಾಲಯಗಳು ಎಂಬ ಪಠ್ಯವನ್ನು ಸಿದ್ಧಪಡಿಸಲಾಗಿದೆ.

ನಾಲ್ಕನೇ ಸೆಮಿಸ್ಟರ್ ಪಠ್ಯಕ್ರಮ
ಪ್ರಧಾನ ವಿಷಯದಲ್ಲಿ ಪಟ್ಟೋಲೆ- ಪಳಮೆ ವಿಶೇಷ ಓದು, ಆಧುನಿಕ ಕೊಡಗು ಅಸ್ಮಿತೆಯ ನೆಲೆಗಳು, ಸಂಶೋಧನೆ ಮತ್ತು ಸಂಶೋಧನಾ ಪ್ರಬಂಧ, ಪೂರಕ ವಿಷಯದಲ್ಲಿ ಕೊಡವ ಭಾಷೆ ಮತ್ತು ಕಂಪ್ಯೂಟರ್‌, ಕೊಡಗಿನ ವಾಣಿಜ್ಯ ಬೆಳೆಗಳನ್ನು ಪಠ್ಯವನ್ನಾಗಿ ನಿಗದಿಪಡಿಸಲಾಗಿದೆ. ಇದರೊಂದಿಗೆ ನಿಯೋಜಿತ ಕಾರ್ಯಯೋಜನೆ ಇರಲಿದೆ. ಪರಾಮರ್ಶಕ ಗ್ರಂಥಗಳ ಮಾಹಿತಿಯನ್ನು ಕೂಡ ಕ್ರೂಢೀಕರಿಸಲಾಗಿದ್ದು, ವಿದ್ಯಾರ್ಥಿಗಳಿಗೆ ನೆರವಾಗಲಿದೆ.

ಅಕಾಡೆಮಿ ಸತತ ಪ್ರಯತ್ನದಿಂದ ಪಠ್ಯವನ್ನು ತಯಾರಿ ಮಾಡಿದೆ ಎಂದು ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ, ತಿಳಿಸಿರುವ ಜಿಲ್ಲೆಯ ಮೂರು ಕಾಲೇಜಿನಲ್ಲಿ ಕೋರ್ಸ್ ಆರಂಭಿಸಲು ಮನವಿ ಮಾಡಲಾಗಿತ್ತು. ಇದೀಗ ಚಿಕ್ಕಅಳುವಾರದಲ್ಲಿ ಮಾತ್ರ ಅನುಮತಿ ದೊರೆತಿದೆ. ಶೀಘ್ರದಲ್ಲಿಯೇ ಮಡಿಕೇರಿಯ ಎಫ್‌ಎಂಸಿ ಕಾಲೇಜಿನಲ್ಲಿಯೂ ಅನುಮತಿ ದೊರೆಯುವ ವಿಶ್ವಾಸವಿದೆ ಎಂದಿದ್ದಾರೆ.

   ಪಾಸಿಟಿವಿಟಿ ರೇಟ್ ಹೆಚ್ಚಳ - ಲಾಕ್ ಡೌನ್ ಆತಂಕ ಶುರು! | Oneindia Kannada

   ಕರ್ನಾಟಕ ಕೊಡವ ಸಾಹಿತ್ಯ ಅಕಾಡೆಮಿಯ ಅಧ್ಯಕ್ಷೆ ಡಾ.ಅಮ್ಮಾಟಂಡ ಪಾರ್ವತಿ ಅಪ್ಪಯ್ಯ ಹಾಗೂ ಸದಸ್ಯರಾದ ಬಾಚರಣಿಯಂಡ ಪಿ.ಅಪ್ಪಣ್ಣ, ಬಾಚರಣಿಯಂಡ ರಾಣು ಅಪ್ಪಣ್ಣ, ಡಾ.ಮುಲ್ಲೇಂಗಡ ರೇವತಿ ಪೂವಯ್ಯ, ಡಾ.ರೇಖಾ ವಸಂತ್, ಡಾ.ನಡಿಕೇರಿಯಂಡ ಪೂವಯ್ಯ, ಡಾ.ಸೋಮಣ್ಣ ಇವರ ಸಹಕಾರದಲ್ಲಿ ಪಠ್ಯಕ್ರಮ ತಯಾರಿಸಲಾಗಿದೆ.

   English summary
   The Kodava MA Class will be Started in the academic year 2021-22 at Chikka Aluvara Postgraduate Center of the Mangalore University.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X