ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗಿನ ಕಾಫಿಗೆ ನಷ್ಟ ಉಂಟಾಗಿದ್ದು ಬರೋಬ್ಬರಿ 386 ಕೋಟಿ

|
Google Oneindia Kannada News

ಕೊಡಗು, ಸೆಪ್ಟೆಂಬರ್ 15: ಪ್ರವಾಹದಿಂದಾಗಿ ಕೊಡಗು ಜಿಲ್ಲೆಯಲ್ಲಿ ಆಗಿರುವ ಹಾನಿಯ ಕುರಿತು ಅಲ್ಲಿನ ಜಿಲ್ಲಾಡಳಿತ ಕೇಂದ್ರಕ್ಕೆ ಮಾಹಿತಿ ರವಾನಿಸಿದೆ. ಸುಮಾರು 41.526 ಹೆಕ್ಟೇರ್ ಪ್ರದೇಶದಲ್ಲಿ ಕಾಫಿಗೆ ಹಾನಿಯಾಗಿದ್ದು 386 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ.

ಜಿಲ್ಲೆಯಲ್ಲಿ 160 ಗ್ರಾಮಗಳಿವೆ ಅಲ್ಲಿರುವ ಬಹುತೇಕ ತೋಟಗಾರಿಕಾ ಬೆಳಗೆ ನಷ್ಟ ಉಂಟಾಗಿದೆ, ಶೇ.33ಕ್ಕೂ ಹೆಚ್ಚಿನ ಪ್ರಮಾಣದ ಕಾಫಿಗೆ ಧಕ್ಕೆಯಾಗಿದೆ. ಮೊಬೈಲ್ ತಂತ್ರಾಂಶದ ಮೂಲಕ 27 ಗ್ರಾಮಗಳಲ್ಲಿ ಒಟ್ಟು 458 ಕಾಫಿ ಬೆಳೆಗಾರರನ್ನು ಸೇರಿಸಿ ಒಟ್ಟು 439.94 ಹೆಕ್ಟೇರ್ ಪ್ರದೇಶದಲ್ಲಿ ಸಮೀಕ್ಷೆ ನಡೆಸಲಾಗಿದೆ.

ಚಿತ್ರಗಳು : ಕೊಡಗಿನಲ್ಲಿ ಕೇಂದ್ರ ಅಧ್ಯಯನ ತಂಡದಿಂದ ನಷ್ಟ ಅಂದಾಜುಚಿತ್ರಗಳು : ಕೊಡಗಿನಲ್ಲಿ ಕೇಂದ್ರ ಅಧ್ಯಯನ ತಂಡದಿಂದ ನಷ್ಟ ಅಂದಾಜು

97.36 ಹೆಕ್ಟೇರ್ ನಲ್ಲಿ ಶೇ.33ಕ್ಕಿಂತ ಕಡಿಮೆ ಹಾನಿಯಗಿದ್ದು 342.58 ಹೆಕ್ಟೇರ್ ಪ್ರದೇಶವು ಶೇ.33ಕ್ಕಿಂತ ಹೆಚ್ಚು ಹಾನಿಯಾಗಿದೆ. 27 ಗ್ರಾಮಗಳಲ್ಲಿ ಅಡಿಕೆ, ಕಾಳುಮೆಣಸು, ಬಾಳೆಗಳ, ಶುಂಠಿ ಸಮೀಕ್ಷೆ ನಡೆಸಲಾಗಿದೆ.

 ಭೇಟಿಕೊಟ್ಟ ಪ್ರದೇಶ

ಭೇಟಿಕೊಟ್ಟ ಪ್ರದೇಶ

ಕೊಡಗು ಜಿಲ್ಲೆಯ ಹೆಬ್ಬೆಟ್ಟ ಗೇರಿ, ದೇವಸ್ತೂರು, ತಂತಿಪಾಲ, ಕುಂದರಕೊಡಿ, ಕಾಲೂರು, ಹಾಸನ ಜಿಲ್ಲೆಯ ಶಿರಾಡಿ ಘಾಟ್, ಬಿಸಿಲೆ ಘಾಟ್, ಮಂಕನಹಳ್ಳಿ, ಅಜ್ಜನಹಳ್ಳಿ, ಮಾಗೇರಿಗೆ ಭೇಟಿ ನೀಡಲಾಗಿದೆ.

ಕೊಡಗು ಅವಘಡ ತನಿಖೆಗೆ ಆಯೋಗ: ಪಿಐಎಲ್ ತಿರಸ್ಕರಿಸಿದ ಹೈಕೋರ್ಟ್ಕೊಡಗು ಅವಘಡ ತನಿಖೆಗೆ ಆಯೋಗ: ಪಿಐಎಲ್ ತಿರಸ್ಕರಿಸಿದ ಹೈಕೋರ್ಟ್

 ಕೇಂದ್ರ ತಂಡದ ಮೆಚ್ಚುಗೆ

ಕೇಂದ್ರ ತಂಡದ ಮೆಚ್ಚುಗೆ

ಕೇಂದ್ರ ತಂಡದ ಮುಖ್ಯಸ್ಥ ಅನಿಲ್ ಮಲ್ಲಿಕ್ ಪರಿಶೀಲೆ ವೇಳೆ ಯಾರೂ ಪ್ರತಿಭಟಿಸಿಲ್ಲ ಅಸಮಾಧಾನ ತೋಡಿಕೊಳ್ಳಲಿಲ್ಲ,ರಾಜ್ಯ ಸರ್ಕಾರ ಪರಿಸ್ಥಿತಿಯನ್ನು ಉತ್ತಮವಾಗಿ ನಿರ್ವಹಿಸಿದೆ. ಜಿಪಿಎಸ್ ಆಧಾರಿತ ಬೆಳೆ ಸಮೀಕ್ಷೆ ಹಾಗೂ ಮಾಹಿತಿ ಸಂಗ್ರಹಣೆ ದೇಶದಲ್ಲಿಯೇ ಉತ್ತಮವಾಗಿದೆ ಎಂದು ಮೆಚ್ಚುಗೆ ಸೂಚಿಸಿದ್ದಾರೆ.

ಕೊಡಗು : ನಿರಾಶ್ರಿತರ ತಾತ್ಕಾಲಿಕ ಶೆಡ್ ಹೀಗಿದೆ ನೋಡಿಕೊಡಗು : ನಿರಾಶ್ರಿತರ ತಾತ್ಕಾಲಿಕ ಶೆಡ್ ಹೀಗಿದೆ ನೋಡಿ

 ಸೂಕ್ತ ಪರಿಹಾರಕ್ಕೆ ಸಿಎಂ ಶಿಫಾರಸ್ಸು

ಸೂಕ್ತ ಪರಿಹಾರಕ್ಕೆ ಸಿಎಂ ಶಿಫಾರಸ್ಸು

ಕೊಡಗು, ದಕ್ಷಿಣ ಕನ್ನಡ, ಹಾಸನ ಮತ್ತು ಉಡುಪಿ ಜಿಲ್ಲೆಗಳಲ್ಲಿ ಮಳೆಯಿಂದ ಅಪಾರ ಆಸ್ತಿ ಹಾನಿಯಾಗಿದ್ದು ಸೂಕ್ತ ಪರಿಹಾರ ನೀಡಬೇಕೆಂದು ಶಿಫಾರಸ್ಸು ಮಾಡುವಂತೆ ಕೇಂದ್ರ ತಂಡಕ್ಕೆ ಸಿಎಂ ಕುಮಾರಸ್ವಾಮಿ ಮನವಿ ಮಾಡಿದ್ದಾರೆ. ಹಾನಿಗೊಳಗಾದ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ ನಂತರ ಕೇಂದ್ರ ಗೃಹ ಇಲಾಖೆ ಜಂಟಿ ಕಾರ್ಯದರ್ಶಿ ಅನಿಲ್ ಮಲ್ಲಿಕ್ ನೇತೃತ್ವದ ಕೇಂದ್ರ ಅಧ್ಯಯನ ತಂಡ ಶುಕ್ರವಾರ ದೆಹಲಿಗೆ ತೆರಳುವ ಮುನ್ನ ಸಭೆ ನಡೆಸಲಾಯಿತು.

 ಹೆದ್ದಾರಿ ಹಾನಿಗೆ 531 ಕೋಟಿ ರೂ.ನಷ್ಟ

ಹೆದ್ದಾರಿ ಹಾನಿಗೆ 531 ಕೋಟಿ ರೂ.ನಷ್ಟ

ಜಿಲ್ಲೆಯಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿ 275ರಲ್ಲಿ ಒಟ್ಟು 60.71 ಕಿ.ಮೀ ರಸ್ತೆಯಲ್ಲಿ 25.314 ಕಿ.ಮೀ ರಸ್ತೆಗೆ ಹಾನಿಯಾಗಿದ್ದು, 531 ಕೋಟಿ ರೂ. ನಷ್ಟ ಉಂಟಾಗಿದೆ. ನಗರ ವ್ಯಾಪ್ತೊಯ 74 ಕಿ.ಮೀ ರಸ್ತೆ ಹಾನಿಯಾಗಿದ್ದು 7.50 ಕೋಟಿ ರೂ. ನಷ್ಟ ಉಂಟಾಗಿದೆ.

 ಕೊಡಗು ಮಳೆಗೆ ಬಹುತೇಕ ಕಾಫಿ ಬೆಳೆ ನಾಶ

ಕೊಡಗು ಮಳೆಗೆ ಬಹುತೇಕ ಕಾಫಿ ಬೆಳೆ ನಾಶ

ಪ್ರವಾಹದಿಂದಾಗಿ ಕೊಡಗು ಜಿಲ್ಲೆಯಲ್ಲಿ ಆಗಿರುವ ಹಾನಿಯ ಕುರಿತು ಅಲ್ಲಿನ ಜಿಲ್ಲಾಡಳಿತ ಕೇಂದ್ರಕ್ಕೆ ಮಾಹಿತಿ ರವಾನಿಸಿದೆ. ಸುಮಾರು 41.526 ಹೆಕ್ಟೇರ್ ಪ್ರದೇಶದಲ್ಲಿ ಕಾಫಿಗೆ ಹಾನಿಯಾಗಿದ್ದು 386 ಕೋಟಿ ರೂ. ನಷ್ಟವಾಗಿದೆ ಎಂದು ಅಂದಾಜು ಮಾಡಲಾಗಿದೆ.

ಜಿಲ್ಲೆಯಲ್ಲಿ 160 ಗ್ರಾಮಗಳಿವೆ ಅಲ್ಲಿರುವ ಬಹುತೇಕ ತೋಟಗಾರಿಕಾ ಬೆಳಗೆ ನಷ್ಟ ಉಂಟಾಗಿದೆ, ಶೇ.33ಕ್ಕೂ ಹೆಚ್ಚಿನ ಪ್ರಮಾಣದ ಕಾಫಿಗೆ ಧಕ್ಕೆಯಾಗಿದೆ. ಮೊಬೈಲ್ ತಂತ್ರಾಂಶದ ಮೂಲಕ 27 ಗ್ರಾಮಗಳಲ್ಲಿ ಒಟ್ಟು 458 ಕಾಫಿ ಬೆಳೆಗಾರರನ್ನು ಸೇರಿಸಿ ಒಟ್ಟು 439.94 ಹೆಕ್ಟೇರ್ ಪ್ರದೇಶದಲ್ಲಿ ಸಮೀಕ್ಷೆ ನಡೆಸಲಾಗಿದೆ.

97.36 ಹೆಕ್ಟೇರ್ ನಲ್ಲಿ ಶೇ.33ಕ್ಕಿಂತ ಕಡಿಮೆ ಹಾನಿಯಗಿದ್ದು 342.58 ಹೆಕ್ಟೇರ್ ಪ್ರದೇಶವು ಶೇ.33ಕ್ಕಿಂತ ಹೆಚ್ಚು ಹಾನಿಯಾಗಿದೆ. 27 ಗ್ರಾಮಗಳಲ್ಲಿ ಅಡಿಕೆ, ಕಾಳುಮೆಣಸು, ಬಾಳೆಗಳ, ಶುಂಠಿ ಸಮೀಕ್ಷೆ ನಡೆಸಲಾಗಿದೆ.

English summary
Recent deadly rain and flood in Kodagu district was resulted in loss of coffee crop about more than Rs386 crores and infrastructure like roads and bridges washed away valued around Rs531 crores.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X