ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎ.ಕೆ.ಸುಬ್ಬಯ್ಯ ವಿರುದ್ಧ ಪ್ರತಿಭಟನೆಗೆ ಸಿಎನ್‍ಸಿ ನಿರ್ಧಾರ

By ಒನ್ ಇಂಡಿಯಾ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಜುಲೈ 23 : ಡಿವೈಎಸ್‌ಪಿ ಎಂ.ಕೆ.ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ಸರ್ಕಾರದ ಪರ ಹೇಳಿಕೆ ನೀಡುವ ಭರದಲ್ಲಿ ಕುಟುಂಬಕ್ಕೆ ಮುಜುಗರ ತಂದಿರುವ ಹಿರಿಯ ವಕೀಲ ಎ.ಕೆ.ಸುಬ್ಬಯ್ಯ ಅವರ ವಿರುದ್ಧ ಕೊಡಗಿನಲ್ಲಿ ಆಕ್ರೋಶ ವ್ಯಕ್ತವಾಗಿದೆ.

ಎ.ಕೆ.ಸುಬ್ಬಯ್ಯ ಹಾಗೂ ಅವರ ಪುತ್ರರ ಮೇಲೆ ಹರಿಹಾಯ್ದಿರುವ ಕೊಡವ ನ್ಯಾಷನಲ್ ಕೌನ್ಸಿಲ್ ಸಂಘಟನೆಯ ಅಧ್ಯಕ್ಷ ಎನ್.ಯು.ನಾಚಪ್ಪ ಅವರು, 'ಅಪ್ಪ ಮಗ ಟಿಂಬರ್ ಲಾಬಿಯಲ್ಲಿ ತೊಡಗಿದ್ದಾರೆ ಎಂದು ಆರೋಪಿಸಿದ್ದಾರೆ. ಅಲ್ಲದೆ, ಅವರ ವಿರುದ್ಧ ಸದ್ಯದಲ್ಲೇ ಪ್ರತಿಭಟನೆ ನಡೆಸುವುದಾಗಿ' ತಿಳಿಸಿದ್ದಾರೆ. [ಗಣಪತಿ ಆತ್ಮಹತ್ಯೆ ಪ್ರಕರಣಕ್ಕೆ ತುಪ್ಪ ಸುರಿದ ಎಕೆ ಸುಬ್ಬಯ್ಯ]

Codava

ಈಗಾಗಲೇ ಈ ಬಗ್ಗೆ ತನಿಖೆ ನಡೆಸುವಂತೆ ಒತ್ತಾಯಿಸಿ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಟಿ.ಎಸ್ ಠಾಕೂರ್, ಕರ್ನಾಟಕ ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿ ಜಸ್ಟಿಸ್ ಎಸ್.ಕೆ.ಮುಖರ್ಜಿ ಅವರಿಗೂ ಮತ್ತು ಅದರ ಪ್ರತಿಗಳನ್ನು ಭಾರತದ ರಾಷ್ಟ್ರಪತಿ, ಪ್ರಧಾನ ಮಂತ್ರಿ, ವಿರೋಧ ಪಕ್ಷದ ನಾಯಕರುಗಳಿಗೆ ಸಲ್ಲಿಸಲಾಗಿದೆ.[ಗಣಪತಿ ಆತ್ಮಹತ್ಯೆ : Timeline]

ಎ.ಕೆ.ಸುಬ್ಬಯ್ಯ ಅವರ ವಿರುದ್ಧ ಸಂಘಟನೆ ಮೂಲಕ ಪ್ರತಿಭಟನೆ ನಡೆಸಲಾಗುವುದೆಂದು ತಿಳಿಸಿದ ನಾಚಪ್ಪ, 'ಟಿಂಬರ್ ಲಾಭಿಯಲ್ಲಿ ಕೈವಾಡವಿದ್ದು, ಅವ್ಯಾಹತವಾಗಿ ಮರಗಳನ್ನು ನಾಶ ಮಾಡುತ್ತಿರುವದರಿಂದ ಕೊಡಗಿನಲ್ಲಿ ಪರಿಸರ ಅಸಮತೋಲನದಿಂದ ಮಳೆಯ ಕೊರತೆ ಎದುರಾಗಿದೆ' ಎಂದು ಆತಂಕ ವ್ಯಕ್ತಪಡಿಸಿದರು.[ವಿಡಿಯೋ - ಡಿವೈಎಸ್ ಪಿ ಗಣಪತಿ ಕಡೇ ಸಂದರ್ಶನ]

ಸುಬ್ಬಯ್ಯ ಏನು ಹೇಳಿದ್ದರು? : ಇಡೀ ಕೊಡಗಿನ ಜನ ಡಿವೈಎಸ್‌ಪಿ ಎಂ.ಕೆ.ಗಣಪತಿ ಅವರ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯ ಸಿಗಬೇಕು, ತಪ್ಪಿತಸ್ಥರ ವಿರುದ್ಧ ಕ್ರಮವಾಗಬೇಕು ಎಂದು ಹೋರಾಟ ನಡೆಸುತ್ತಿದ್ದರೆ ಹಿರಿಯ ವಕೀಲ, ವಿಧಾನಪರಿಷತ್ ಮಾಜಿ ಸದಸ್ಯ ಎ.ಕೆ.ಸುಬ್ಬಯ್ಯ ಅವರು ಕೆಜೆ ಜಾರ್ಜ್ ಅವರಿಗೆ ಬೆಂಬಲ ನೀಡಿದ್ದರು.

'ಜಾರ್ಜ್ ಅವರಿಂದ ಕಿರುಕುಳ ಆಗಿದ್ದರೆ ಜಾರ್ಜ್ ಅವರು ಗೃಹ ಸಚಿವರಾಗಿದ್ದಾಗಲೇ ಆತ್ಮಹತ್ಯೆ ಮಾಡಿಕೊಳ್ಳುವ ಬದಲು ಈಗ ಏಕೆ ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ?' ಎಂದು ಪ್ರಶ್ನಿಸಿ ವಿವಾದ ಹುಟ್ಟುಹಾಕಿದ್ದರು.

English summary
The Codava National Council (CNC) planning to protest against Former legislative council member AK Subbaiah, who support KJ George in DySP MK Ganapati suicide case.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X