ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಸಿದ್ದರಾಮಯ್ಯ ಭೇಟಿ: ಕೊಡ್ಲಿಪೇಟೆಯ ಬಸವೇಶ್ವರ ದೇವಸ್ಥಾನ ಶುದ್ದೀಕರಣ

|
Google Oneindia Kannada News

ಮಡಿಕೇರಿ, ಆಗಸ್ಟ್‌ 29: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಕೊಡಗು ಜಿಲ್ಲೆಯ ಕೊಡ್ಲಿಪೇಟೆಯ ಬಸವೇಶ್ವರ ದೇವಸ್ಥಾನಕ್ಕೆ ಮಾಂಸಾಹಾರ ಸೇವಿಸಿ ಭೇಟಿ ನೀಡಿದ್ದಾರೆ ಎನ್ನಲಾದ ಒಂದು ವಾರದ ನಂತರ ವಾರಾಂತ್ಯದಲ್ಲಿ ದೇವಸ್ಥಾನದಲ್ಲಿ ಶುದ್ಧೀಕರಣ ಮತ್ತು ಸ್ವಚ್ಛತಾ ಕಾರ್ಯಗಳನ್ನು ಕೈಗೊಳ್ಳಲಾಯಿತು.

ಡೆಲಿವರಿ ಕೆಲಸಗಳಲ್ಲಿ ದೈನಂದಿನ ಕನಿಷ್ಠ ಗ್ಯಾರಂಟಿ ಮತ್ತು ವಾರದ ಪ್ರೋತ್ಸಾಹ ಧನನೊಂದಿಗೆ 30,000 ವರೆಗೆ ಗಳಿಸಿ.

ಆಗಸ್ಟ್ 19ರಂದು ಸಿದ್ದರಾಮಯ್ಯ ಕೊಡಗಿಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರ ವಿರುದ್ಧ ಪ್ರತಿಭಟನೆ ನಡೆಸಿ ಅವರ ಕಾರಿಗೆ ಮೊಟ್ಟೆ ಹೊಡೆಯಲಾಗಿತ್ತು. ಈ ವಿಚಾರ ಸರ್ಕಾರವನ್ನು ಮುಜುಗರಕ್ಕೀಡು ಮಾಡಿತ್ತು. ಅಲ್ಲದೆ ಅವರು ಮಡಿಕೇರಿ ಸಮೀಪದ ಕೊಡ್ಲಿಪೇಟೆ ದೇವಸ್ಥಾನಕ್ಕೆ ಭೇಟಿ ನೀಡಿದ್ದು, ತಿಂಡಿಗೆ ಮಾಂಸಾಹಾರ ಸೇವಿಸಿದ್ದಾರೆ ಎಂಬ ಆರೋಪ ಕೇಳಿ ಬಂದಿದ್ದು ಇದು ಕೂಡ ವಿವಾದದ ಕೇಂದ್ರಬಿಂದುವಾಗಿತ್ತು.

ಮಡಿಕೇರಿಯಲ್ಲಿ ಕಾಂಗ್ರೆಸ್ ಪ್ರತಿಭಟನೆಯನ್ನು ಮುಂದೂಡಿದ ಸಿದ್ದರಾಮಯ್ಯ!ಮಡಿಕೇರಿಯಲ್ಲಿ ಕಾಂಗ್ರೆಸ್ ಪ್ರತಿಭಟನೆಯನ್ನು ಮುಂದೂಡಿದ ಸಿದ್ದರಾಮಯ್ಯ!

ಹೀಗಾಗಿ ಧಾರ್ಮಿಕ ಭಾವನೆಗಳಿಗೆ ಧಕ್ಕೆಯುಂಟಾಗಿ ಎಂದು ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯವರು ಶನಿವಾರ ದೇವಸ್ಥಾನದ ಆವರಣವನ್ನು ಸ್ವಚ್ಛಗೊಳಿಸಿ ವಿಶೇಷ ಪೂಜೆ ಸಲ್ಲಿಸಿದರು. ಈ ಬಗ್ಗೆ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ವರಪ್ರಸಾದ್ ಮಾತನಾಡಿ, ಭಕ್ತರು ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಬರುವುದಿಲ್ಲ, ಸಿದ್ದರಾಮಯ್ಯ ಅವರು ಮಾಂಸಾಹಾರ ಸೇವಿಸಿ ದೇವಸ್ಥಾನಕ್ಕೆ ಬರುತ್ತಿದ್ದಾರೆ ಎಂಬ ಆರೋಪ ಕೇಳಿ ಬಂದ ಹಿನ್ನೆಲೆಯಲ್ಲಿ ಭಕ್ತರ ಭಾವನೆ ಕಾಪಾಡಲು ದೇವಸ್ಥಾನವನ್ನು ಸ್ವಚ್ಛಗೊಳಿಸಲು ನಿರ್ಧರಿಸಿದ್ದೇವೆ ಎಂದರು.

ದೇವಸ್ಥಾನದ ಅರ್ಚಕ ಮೃತ್ಯುಂಜಯ ಮಾತನಾಡಿ, ''ದೇವಸ್ಥಾನಕ್ಕೆ ಶ್ರದ್ಧಾಭಕ್ತಿಯಿಂದ ಬರುವವರಿಗೆ ಅರ್ಚಕನಾಗಿ ತೀರ್ಥ ಮತ್ತು ಪ್ರಸಾದ ನೀಡುತ್ತೇನೆ. ಜೊತೆಗೆ ಅವರ ಹೆಸರಿನಲ್ಲಿ ಪೂಜೆ ಸಲ್ಲಿಸುತ್ತೇನೆ, ಅದೇ ರೀತಿ ಸಿದ್ದರಾಮಯ್ಯ ದೇವಸ್ಥಾನಕ್ಕೆ ಬಂದಾಗ ತೀರ್ಥ ಮತ್ತು ಪೂಜೆಯ ನಂತರ ಅವರಿಗೆ ಪ್ರಸಾದವನ್ನು ಭಕ್ತಿಯಿಂದ ಸ್ವೀಕರಿಸಿದರು'' ಎಂದರು.

ಮಾಂಸಾಹಾರ ಸೇವಿಸಿ ದೇಗುಲ ಪ್ರವೇಶ ಮಾಡಲ್ಲ

ಮಾಂಸಾಹಾರ ಸೇವಿಸಿ ದೇಗುಲ ಪ್ರವೇಶ ಮಾಡಲ್ಲ

ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಮಾತನಾಡಿ, ''ಮಾಂಸಾಹಾರ ಸೇವನೆ ಆಹಾರ ಪದ್ಧತಿ. ಆದರೆ ಯಾರೂ ಮಾಂಸಾಹಾರ ಸೇವಿಸಿ ದೇಗುಲ ಪ್ರವೇಶ ಮಾಡುವುದಿಲ್ಲ. ಹಿಂದೂ ಸಂಪ್ರದಾಯದಂತೆ ದೇಗುಲಗಳ ಪಾವಿತ್ರ್ಯತೆ ಕಾಪಾಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ. ಸಿದ್ದರಾಮಯ್ಯನವರು ದೇವಾಲಯಕ್ಕೆ ಭೇಟಿ ನೀಡುವ ಮೊದಲು ಮಾಂಸಹಾರ ಸೇವಿಸಿರಲಿಲ್ಲ. ಸಸ್ಯಾಹಾರಿ ಉಪಹಾರ ಸೇವಿಸಿದ್ದಾರೆ ಎಂದು ನಾನು ಕೇಳಿದ್ದೇನೆ'' ಎಂದರು.

Breaking: ಕೊಡಗು ನಿಷೇಧಾಜ್ಞೆ: ಕಾಂಗ್ರೆಸ್ ಪ್ರತಿಭಟನೆ ಮುಂದೂಡಿಕೆBreaking: ಕೊಡಗು ನಿಷೇಧಾಜ್ಞೆ: ಕಾಂಗ್ರೆಸ್ ಪ್ರತಿಭಟನೆ ಮುಂದೂಡಿಕೆ

ವೀಣಾ ಅಚ್ಚಯ್ಯ ಮನೆಯಿಂದ ಊಟ

ವೀಣಾ ಅಚ್ಚಯ್ಯ ಮನೆಯಿಂದ ಊಟ

ಕೊಡಗಿಗೆ ಭೇಟಿ ನೀಡಿದ್ದ ವೇಳೆ ಸಿದ್ದರಾಮಯ್ಯ ಅವರು ಅಂದು ಮಾಂಸಹಾರವನ್ನು ಸೇವಿಸಲೇ ಇಲ್ಲ ಎಂದು ಕಾಂಗ್ರೆಸ್‍ನ ಮಾಜಿ ಎಂಎಲ್​ಸಿ ವೀಣಾ ಅಚ್ಚಯ್ಯ ಸ್ಪಷ್ಟನೆ ನೀಡಿದ್ದಾರೆ. ವೀಣಾ ಅಚ್ಚಯ್ಯನವರ ಮನೆಯಿಂದ ಸಿದ್ದರಾಮಯ್ಯ ಅವರಿಗೆ ಕೊಡಗಿನ ಮಾಜಿ ಎಂಎಲ್​ಸಿ ವೀಣಾ ಅಚ್ಚಯ್ಯ ಅವರ ಮನೆಯಿಂದ ನಾಟಿಕೋಳಿ ಸಾರು, ಮಟನ್ ಫ್ರೈ, ಅಕ್ಕಿ ರೊಟ್ಟಿ, ಬಿದಿರು ಕಣಿಲೆ ಗೊಜ್ಜು ಸೇರಿದಂತೆ ವಿವಿಧ ಆಹಾರಗಳು ಮಾಡಿ ಮಡಿಕೇರಿಯ ಸುದರ್ಶನ್ ಗೆಸ್ಟ್ ಹೌಸ್​ಗೆ ಪೂರೈಸಲಾಗಿತ್ತು ಎನ್ನಲಾಗಿತ್ತು.

ಅಂದು ಮಾಂಸ ಆಹಾರವನ್ನು ತಿನ್ನಲಿಲ್ಲ

ಅಂದು ಮಾಂಸ ಆಹಾರವನ್ನು ತಿನ್ನಲಿಲ್ಲ

ಮಧ್ಯಾಹ್ನ ಅಲ್ಲೇ ಊಟ ಮಾಡಿದ್ದ ಮಾಜಿ ಸಿಎಂ ಸಿದ್ದರಾಮಯ್ಯ ಅವರು ಕೊಡ್ಲಿಪೇಟೆಯ ಬಶವೇಶ್ವರ ದೇವಾಲಯಕ್ಕೆ ಭೇಟಿ ನೀಡಿ ಪೂಜೆ ಸಲ್ಲಿಸಿದ್ದರು. ಆದರೆ ಸಿದ್ದರಾಮಯ್ಯ ಅವರು ಅಂದು ಮಾಂಸ ಆಹಾರವನ್ನು ತಿನ್ನಲಿಲ್ಲ. ಕೊಡಗಿನ ಮಳೆಗಾಲದ ವಿಶೇಷ ಕಣಿಲೆ ಅಕ್ಕಿರೊಟ್ಟಿ ತುಪ್ಪ ತಿಂದರು. ಬಿಟ್ಟರೆ ತರಕಾರಿ ಸಾಂಬರಿನಲ್ಲಿ ಸ್ವಲ್ಪ ಅನ್ನ ಊಟ ಮಾಡಿದ್ದರು. ಅವರು ಮಾಂಸಹಾರ ಸೇವಿಸಲೇ ಇಲ್ಲ. ಅವರಿಗೆ ಸ್ವತಃ ನಾನೇ ಊಟ ಬಡಿಸಿದ್ದೇನೆ ಎಂದು ವೀಣಾ ಅಚ್ಚಯ್ಯ ಹೇಳಿಕೆ ನೀಡಿದ್ದಾರೆ.

ಯಾವ ಆಹಾರ ತಿಂದು ದೇವಸ್ಥಾನಕ್ಕೆ ಬರಬಹುದು

ಯಾವ ಆಹಾರ ತಿಂದು ದೇವಸ್ಥಾನಕ್ಕೆ ಬರಬಹುದು

ವಿವಾದ ಹೆಚ್ಚಾದ ಬೆನ್ನಲ್ಲೇ ವಿಪಕ್ಷ ನಾಯಕ ಸಿದ್ದರಾಮಯ್ಯ ಚಿಕ್ಕಬಳ್ಳಾಪುರದಲ್ಲಿ ಪ್ರತಿಕ್ರಿಯಿಸಿ, ಇಂದು ಮಾಂಸ ತಿಂದು ನಾಳೆ ದೇವಸ್ಥಾನಕ್ಕೆ ಹೋಗಬಹುದು. ಮಧ್ಯಾಹ್ನ ತಿಂದು ಸಂಜೆ ದೇವಸ್ಥಾನಕ್ಕೆ ಹೋಗುವಂತೆ ಇಲ್ಲವೇ ಎಂದು ಪ್ರಶ್ನಿಸಿದ್ದರು. ಅಲ್ಲದೇ ಯಾವ ಆಹಾರ ತಿಂದು ದೇವಸ್ಥಾನಕ್ಕೆ ಬರಬಹುದು, ಯಾವ ಆಹಾರ ತಿಂದು ಬರಬಾರದು ಎಂದು ದೇವರು ಎಲ್ಲೂ ಹೇಳಿಲ್ಲ ಎಂದು ತಿರುಗೇಟು ನೀಡಿದ್ದರು. ನಂತರ ಅಂದು ನಾನು ಮಾಂಸಾಹಾರ ಸೇವನೆ ಮಾಡಿರಲಿಲ್ಲ ಎಂದು ಹೇಳಿಕೆ ನೀಡಿದ್ದರು.

English summary
A week after former chief minister Siddaramaiah allegedly visited the Basaveshwara temple in Kodagu district's Kodlipet after consuming non-vegetarian food, cleansing and sanitizing work was carried out at the temple over the weekend.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X