ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಡಿಕೇರಿಯಲ್ಲಿ ಹೆಲ್ಮೆಟ್ ಧರಿಸಿ ಬಸ್ ಚಾಲನೆ ಮಾಡಿದ ಚಾಲಕ

By ಮೈಸೂರು ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಮಾರ್ಚ್ 15: ಕೊರೊನಾ ವೈರಸ್ ಒಂದಿಲ್ಲೊಂದು ರೀತಿಯಲ್ಲಿ ಅಡ್ಡ ಪರಿಣಾಮ ಬೀರುತ್ತಿರುವುದು ವರದಿಯಾಗುತ್ತಲೇ ಇದೆ. ಆದರೆ ಇಲ್ಲೊಬ್ಬ ಚಾಲಕ ಕೊರೊನಾ ವೈರಸ್ ಭೀತಿಯಿಂದ ತಲೆಗೆ ಹೆಲ್ಮೆಟ್ ಧರಿಸಿ ಬಸ್ ಚಾಲನೆ ಮಾಡಿರುವ ಘಟನೆ ಮಡಿಕೇರಿಯಲ್ಲಿ ನಡೆದಿದೆ.

ಪ್ರತಿನಿತ್ಯ ಮಡಿಕೇರಿಯಿಂದ ಕುಶಾಲನಗರಕ್ಕೆ ತೆರಳುವ ಸಿಟಿ ಬಸ್ ನ ಚಾಲಕ ಕುಶ ಎಂಬುವವರು ಇಂದು ಮಡಿಕೇರಿ ಕೆಎಸ್ಆರ್ಟಿಸಿ ನಿಲ್ದಾಣದಲ್ಲಿ ತಲೆಗೆ ಹೆಲ್ಮೆಟ್ ಧರಿಸಿ ಬಸ್ ನ್ನು ಚಲಾಯಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.

ಮೈಸೂರಿನಲ್ಲಿ ಕೊರೊನಾ ಸೋಂಕು ಪರೀಕ್ಷಾ ಪ್ರಯೋಗಾಲಯಮೈಸೂರಿನಲ್ಲಿ ಕೊರೊನಾ ಸೋಂಕು ಪರೀಕ್ಷಾ ಪ್ರಯೋಗಾಲಯ

ಕೊರೊನಾ ವೈರಸ್ ನಿಂದ ಪಾರಾಗಲು ಸುರಕ್ಷತಾ ದೃಷ್ಟಿಯಿಂದ ಚಾಲಕ ಕುಶರವರು ಹೆಲ್ಮೆಟ್ ಧಾರಿಯಾಗಿ ಬಸ್ ಚಲಾಯಿಸಿರುವುದಾಗಿ ಹೇಳಿದ್ದಾರೆ.

Bus Driver Wearing Helmet In Madikeri

ಕೊರೊನಾ ಸೋಂಕಿತರಿಗಾಗಿ ಮೈಸೂರಿನಲ್ಲೂ ಪ್ರತ್ಯೇಕ ಆಸ್ಪತ್ರೆಯನ್ನು ಮೈಸೂರಿನಲ್ಲಿ ತೆರೆಯಲಾಗಿದೆ. ನೂತನ ಜಿಲ್ಲಾಸ್ಪತ್ರೆ ಕಟ್ಟಡವನ್ನು ಐಸೋಲೇಷನ್ ಹಾಸ್ಪಿಟಲ್ ಎಂದು ಮೈಸೂರು ಜಿಲ್ಲಾಡಳಿತ ಘೋಷಿಸಿದೆ.

ಇತ್ತೀಚಿಗೆ ಉದ್ಘಾಟನೆಗೊಂಡು, ವೈದ್ಯಕೀಯ ಸೌಲಭ್ಯಗಳಿಲ್ಲದೆ ಖಾಲಿ ಇದ್ದು, ಜನದಟ್ಟಣೆ ಇಲ್ಲದ ಕಾರಣಕ್ಕೆ ಜಿಲ್ಲಾಸ್ಪತ್ರೆ ಕಟ್ಟಡವನ್ನು ಕೊರೊನಾ ಚಿಕಿತ್ಸೆಗೆ ಮೀಸಲಿಡಲಾಗಿದೆ.

Bus Driver Wearing Helmet In Madikeri

ತಾತ್ಕಾಲಿಕವಾಗಿ ಬೆಡ್, ನೀರು, ವಿದ್ಯುತ್ ಸೌಕರ್ಯ ಒದಗಿಸಿ, ಮುಂದಿನ ಸವಾಲು ಎದುರಿಸಲು ಸಜ್ಜಾಗಿದೆ. ಒಂದು ವಾರ ಕೊರೊನಾ ಪಾಸಿಟಿವ್ ಕೇಸ್‌ಗಳು ಕಂಡುಬಂದರೆ ಮಾತ್ರ ಐಸೋಲೇಷನ್ ಹಾಸ್ಪಿಟಲ್‌ಗೆ ಸ್ಥಳಾಂತರಕ್ಕೆ ಚಿಂತನೆ ನಡೆಸಲಾಗಿದ್ದು, ಇದುವರೆಗೂ ಹಳೆ ಮೈಸೂರು ಭಾಗದಲ್ಲಿ ಕೊರೊನಾ ಸೋಂಕು ಕಂಡುಬಂದಿಲ್ಲ.

English summary
The incident took place in Madikeri, when a bus driver was wearing a helmet over the head for corona virus fear.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X