ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಂಜಿನ ನಾಡು ಕೊಡಗಿನಲ್ಲಿ ಪ್ರಚಾರದ ಭರಾಟೆ ಬಿರುಸು

|
Google Oneindia Kannada News

ಮೈಸೂರು, ಮಾರ್ಚ್ 20:ಲೋಕಸಭಾ ಚುನಾವಣೆಗೆ ದಿನಗಣನೆ ಆರಂಭವಾಗಿದೆ. ಈಗಾಗಲೇ ಅಭ್ಯರ್ಥಿಗಳು ತಮ್ಮ ಪ್ರಚಾರದ ಭರಾಟೆಯನ್ನು ಸಹ ಆರಂಭಿಸಿದ್ದಾರೆ.

ಇತ್ತ ಮೈಸೂರಿನ ಲೋಕಸಭಾ ಕ್ಷೇತ್ರಕ್ಕೆ ಹೊಂದಿಕೊಂಡಿರುವ ಕೊಡಗಿಗೆ ಪ್ರತ್ಯೇಕ ಕ್ಷೇತ್ರವಿಲ್ಲ. ಬಹಳ ಹಿಂದೆಯೇ ಪ್ರತ್ಯೇಕ ಕ್ಷೇತ್ರ ಕಳೆದುಕೊಂಡಿರುವ ಕೊಡಗು, ಮೈಸೂರು ಜಿಲ್ಲೆಯೊಂದಿಗೆ ವಿಲೀನವಾಗಿದೆ. ಜಿಲ್ಲೆಯಲ್ಲಿ ಮೂರು ತಾಲ್ಲೂಕು, ಎರಡು ವಿಧಾನಸಭಾ ಕ್ಷೇತ್ರಗಳನ್ನು ಒಳಗೊಂಡಿದ್ದು, ಪ್ರಚಾರವೂ ಅಷ್ಟು ಸುಲಭವಾಗಿಲ್ಲ.

ಕಳೆದ ಹದಿನೈದು ದಿನಗಳಿಂದ ಉತ್ತರ ಕರ್ನಾಟಕದಂತೆಯೇ ಮಲೆನಾಡಿನಲ್ಲೂ ಬಿಸಿಲು ಧಗೆ ಹೆಚ್ಚಾಗಿದೆ. ಈ ನಡುವೆ ಪ್ರಚಾರ ಹೇಗಪ್ಪಾ? ಎಂಬ ಚಿಂತೆಯಲ್ಲಿ ಅಭ್ಯರ್ಥಿಗಳು, ಮುಖಂಡರು ಹಾಗೂ ಕಾರ್ಯಕರ್ತರಿದ್ದಾರೆ.

ಲೋಕ ಸಮರ 2019:ಮೈಸೂರಿನಲ್ಲಿ ಮೂವರು ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆಲೋಕ ಸಮರ 2019:ಮೈಸೂರಿನಲ್ಲಿ ಮೂವರು ಅಭ್ಯರ್ಥಿಗಳಿಂದ ನಾಮಪತ್ರ ಸಲ್ಲಿಕೆ

ಈಗಾಗಲೇ ಕೊಡಗು-ಮೈಸೂರು ಲೋಕಸಭಾ ಕ್ಷೇತ್ರಕ್ಕೆ ಬಿಜೆಪಿಯಿಂದ ಪ್ರತಾಪ ಸಿಂಹ ಹಾಗೂ ಜೆಡಿಎಸ್ - ಕಾಂಗ್ರೆಸ್ ಮೈತ್ರಿಯಿಂದ ಸಿ.ಎಚ್‌.ವಿಜಯಶಂಕರ್‌ ಅಭ್ಯರ್ಥಿಯಾಗುವುದು ಬಹುತೇಕ ಖಚಿತವಾಗಿದೆ.ಅಧಿಕೃತವಾಗಿ ಆ ಪಕ್ಷಗಳು ಹೆಸರು ಘೋಷಿಸಬೇಕಿದೆ. ಇಬ್ಬರೂ ಅಭ್ಯರ್ಥಿಗಳು ತಮ್ಮ ಪ್ರಚಾರ ಆರಂಭಿಸಿದ್ದಾರೆ.

ಇಬ್ಬರು ಅಭ್ಯರ್ಥಿಗಳಿಗೂ ಕಾಫಿ ನಾಡಿಗೆ ಚಿರಪರಿಚಿತ. ಪ್ರತಾಪ ಸಿಂಹ ಅವರು ಗಡಿಭಾಗವಾದ ಸಂಪಾಜೆಯಿಂದ ಪ್ರಚಾರ ಆರಂಭಿಸಿದ್ದಾರೆ. ಸಿ.ಎಚ್‌.ವಿಜಯ ಶಂಕರ್‌ ಅವರು ದಕ್ಷಿಣ ಕೊಡಗು ಭಾಗವಾದ ವಿರಾಜಪೇಟೆಯಿಂದ ಪ್ರಚಾರಕ್ಕೆ ಅಧಿಕೃತವಾಗಿ ಚಾಲನೆ ನೀಡಿದ್ದಾರೆ.

 ಸವಾಲಿನ ಕೆಲಸವಾದ ಅಭ್ಯರ್ಥಿಗಳ ಭೇಟಿ

ಸವಾಲಿನ ಕೆಲಸವಾದ ಅಭ್ಯರ್ಥಿಗಳ ಭೇಟಿ

ಕೊಪ್ಪದಿಂದ ಸಂಪಾಜೆ, ಕುಟ್ಟದಿಂದ ಶನಿವಾರಸಂತೆ ತನಕವೂ ಕೊಡಗು ಹಬ್ಬಿಕೊಂಡಿದೆ. ಬೆಟ್ಟಗುಡ್ಡಗಳ ಮೇಲೆ ಒಂಟಿ ಮನೆಗಳಿದ್ದು, ಅಭ್ಯರ್ಥಿಗಳು ಖುದ್ದು ಅಲ್ಲಿಗೆ ಭೇಟಿ ನೀಡುವುದು ಸವಾಲಿನ ಕೆಲಸವಾಗಿದೆ.

 ಮದುವೆ ಗಂಡು ಯಾರೆಂಬುದು ನಾಳೆ ಗೊತ್ತಾಗಲಿದೆ:ಶಾಸಕ ಎಸ್.ಎ.ರಾಮದಾಸ್ ಮದುವೆ ಗಂಡು ಯಾರೆಂಬುದು ನಾಳೆ ಗೊತ್ತಾಗಲಿದೆ:ಶಾಸಕ ಎಸ್.ಎ.ರಾಮದಾಸ್

 ಕೊಡಗಿನ ಮೇಲೆ ಅಭ್ಯರ್ಥಿಗಳ ಕಣ್ಣು

ಕೊಡಗಿನ ಮೇಲೆ ಅಭ್ಯರ್ಥಿಗಳ ಕಣ್ಣು

ಗೆಲ್ಲುವ ಅಭ್ಯರ್ಥಿಗೆ ಕೊಡಗಿನಲ್ಲಿ ಬೀಳುವ ಮತಗಳು ಅತ್ಯಂತ ನಿರ್ಣಾಯಕ. ಹೀಗಾಗಿ, ಕೊಡಗಿನ ಮೇಲೆ ಅಭ್ಯರ್ಥಿಗಳು ಕಣ್ಣಿಟ್ಟಿದ್ದಾರೆ. ಕೊಡಗಿನಲ್ಲಿ ಬಿಜೆಪಿಗೆ ಭದ್ರ ನೆಲೆಯಿದೆ. ಹೀಗಾಗಿ, ಬಿಜೆಪಿ ತಮ್ಮ ಸಾಂಪ್ರದಾಯಿಕ ಮತಗಳನ್ನೇ ನೆಚ್ಚಿಕೊಂಡಿದೆ. ಕಾಂಗ್ರೆಸ್‌ ಅಭ್ಯರ್ಥಿಗೆ ಮೈತ್ರಿ ಬಲ ತುಂಬಲಿದೆ ಎಂಬ ನಂಬಿಕೆಯಲ್ಲಿದ್ದಾರೆ.

 ಕರ್ನಾಟಕದಿಂದ ರಾಹುಲ್ ಗಾಂಧಿ ಸ್ಪರ್ಧೆ : ಮೂರು ಕ್ಷೇತ್ರಗಳು ಕರ್ನಾಟಕದಿಂದ ರಾಹುಲ್ ಗಾಂಧಿ ಸ್ಪರ್ಧೆ : ಮೂರು ಕ್ಷೇತ್ರಗಳು

ಮಡಿಕೇರಿಯಲ್ಲಿರುವ ಮತದಾರರ ಸಂಖ್ಯೆ

ಮಡಿಕೇರಿಯಲ್ಲಿರುವ ಮತದಾರರ ಸಂಖ್ಯೆ

ಜಿಲ್ಲೆಯಲ್ಲಿ ಒಟ್ಟು 4,35,554 ಮತದಾರರು ಇದ್ದಾರೆ. ಮಡಿಕೇರಿ ವಿಧಾನಸಭಾ ಕ್ಷೇತ್ರದಲ್ಲಿ 1,07,509 ಪುರುಷ ಮತದಾರರು ಹಾಗೂ 1,09,669 ಮಹಿಳಾ ಮತದಾರರಿದ್ದಾರೆ. ಈ ಕ್ಷೇತ್ರದಲ್ಲಿ ಪುರುಷ ಮತದಾರರಗಿಂತ 2,160 ಮಹಿಳಾ ಮತದಾರರೇ ಹೆಚ್ಚು.

ವಿರಾಜಪೇಟೆಯಲ್ಲಿರುವ ಮತದಾರರ ಸಂಖ್ಯೆ

ವಿರಾಜಪೇಟೆಯಲ್ಲಿರುವ ಮತದಾರರ ಸಂಖ್ಯೆ

ವಿರಾಜಪೇಟೆ ವಿಧಾನಸಭಾ ಕ್ಷೇತ್ರದಲ್ಲಿ 1,08,468 ಪುರುಷ ಮತದಾರರು, 1,08,585 ಮಹಿಳಾ ಮತದಾರರಿದ್ದಾರೆ. ಪುರುಷರಿಗಿಂತ 117 ಮಹಿಳಾ ಮತದಾರರ ಸಂಖ್ಯೆ ಹೆಚ್ಚಿದೆ. ಸೇವಾ ಮತದಾರರು 1,298 ಇದ್ದಾರೆ. 7,080 ಹೊಸ ಮತದಾರರು ಇದ್ದು, ಅವರದ್ದು ಈ ಬಾರಿ ಪ್ರಮುಖ ಪಾತ್ರ.

English summary
BJP candidate Pratap simha and Congress candidate vijayashankar started lokasbaha election campaign in Kodagu district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X