ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗಿನ ಜನರ ರಕ್ಷಣೆಗೆ ಬೆಂಗಳೂರು ಹುಡುಗರ ಡ್ರೋನ್

By Manjunatha
|
Google Oneindia Kannada News

Recommended Video

Kodagu floods: Bangalore drone start-up helps locate stranded people

ಬೆಂಗಳೂರು, ಆಗಸ್ಟ್ 21: ಬೆಂಗಳೂರಿನ ಐಟಿ ಹುಡುಗರು ಸೇರಿ ಮಾಡಿರುವ ಡ್ರೋನ್ ತಯಾರಿಕಾ ಸ್ಟಾರ್ಟ್‌ಅಪ್ ಸಂಸ್ಥೆ ಕೊಡಗಿನಲ್ಲಿ ಪ್ರವಾಹದಲ್ಲಿ ಸಿಲುಕಿರುವವರ ರಕ್ಷಣೆಗೆ ಬಳಕೆಯಾಗುತ್ತಿದೆ.

ಸೆರಾ ಏರೋಸ್ಪೇಸ್ ಎಂಬ ಡ್ರೋನ್ ಸ್ಟಾರ್ಟ್‌ ಅಪ್ ಸಂಸ್ಥೆ ಕೊಡಗಿಗೆ ತಂತ್ರಜ್ಞಾನದ ನೆರವು ನೀಡಿದ್ದು, ತಮ್ಮ ಸಂಸ್ಥೆಯಲ್ಲೇ ತಯಾರಾದ ನಾಲ್ಕು ಡ್ರೋನ್‌ಗಳನ್ನು ಕೊಡಗಿನಲ್ಲಿ ಪ್ರವಾಹ ಪೀಡಿತರ ರಕ್ಷಣೆಗೆ ಬಳಸುತ್ತಿವೆ.

ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?ಕರ್ನಾಟಕದ ಪ್ರವಾಹ ಸಂತ್ರಸ್ತರಿಗೆ ನೆರವಾಗುವುದು ಹೇಗೆ?

ಡ್ರೋನ್‌ಗಳನ್ನು ಹಾರಿಸಿ ವೈಮಾನಿಕವಾಗಿ ಸಂಕಷ್ಟದಲ್ಲಿ ಸಿಲುಕಿರುವವರನ್ನು ಗುರುತಿಸಿ ರಕ್ಷಣಾ ಕಾರ್ಯದಲ್ಲಿ ತೊಡಗಿರುವವರಿಗೆ ಮಾಹಿತಿ ನೀಡಲಾಗುತ್ತಿದೆ. ಅಷ್ಟೆ ಅಲ್ಲದೆ ಈ ಡ್ರೋನ್ ಮೂಲಕ ಕೊಡಗಿನಲ್ಲಿ ಪ್ರವಾಹ ಉಂಟುಮಾಡಿರುವ ಭೀಕರತೆಯ ಚಿತ್ರಣವನ್ನೂ ಸುಲಭವಾಗಿ ತಿಳಿಯಬಹುದಾಗಿದೆ.

Bengaluru drone start-up helps locate stranded people in Kodagu

ಸ್ಟಾರ್ಟ್‌ ಅಪ್ ಸಂಸ್ಥೆಯ ಸಹ-ಮಾಲೀಕ 'ಒನ್‌ಇಂಡಿಯಾ' ಜತೆ ಮಾತನಾಡಿ, 'ರಕ್ಷಣಾ ಕಾರ್ಯಕ್ಕೆ ವಾಟರ್‌ಪ್ರೂಫ್ ಡ್ರೋನ್‌ಗಳನ್ನು ಬಳಸಲಾಗುತ್ತಿದ್ದು, ಎಂತಹುದೇ ವಾತಾವರಣದಲ್ಲಿ ಇವು ರಕ್ಷಣಾ ಕಾರ್ಯದಲ್ಲಿ ನೆರವಾಗುತ್ತವೆ. ಸಂಕಷ್ಟದಲ್ಲಿ ಸಿಲುಕಿರುವವರನ್ನು ಗುರುತಿಸಲು ಹಾಗೂ ರಕ್ಷಣಾ ಸಿಬ್ಬಂದಿಗೆ ಸ್ಥಳದ ನಿಖರ ಮಾಹಿತಿಯನ್ನು ತಿಳಿಸಲು ಇವು ನೆರವಾಗುತ್ತವೆ' ಎಂದು ಅವರು ಹೇಳಿದ್ದಾರೆ.

ಎರಡು ತಿಂಗಳ ಮಗುವನ್ನು ರಕ್ಷಿಸಿದ ಈ ವಿಡಿಯೋ ಎಲ್ಲೆಲ್ಲೂ ವೈರಲ್ ಎರಡು ತಿಂಗಳ ಮಗುವನ್ನು ರಕ್ಷಿಸಿದ ಈ ವಿಡಿಯೋ ಎಲ್ಲೆಲ್ಲೂ ವೈರಲ್

ಜೈನ್ ವಿವಿಯಲ್ಲಿ ಎಂಜಿನಿಯರಿಂಗ್ ಕಲಿತಿರುವ ಮಲ್ಲಿಕಾರ್ಜುನ್, ವಿನಾಯಕ್, ಸುದೀಪ್ ದೇವ್ ಅವರುಗಳು ಈ ಸ್ಟಾರ್ಟ್‌ಅಪ್ ತೆರೆದಿದ್ದು, ಅವರೇ ಖುದ್ದಾಗಿ ಕೊಡಗಿಗೆ ತೆರಳಿ ಡ್ರೋನ್‌ಗಳನ್ನು ಸಂಭಾಳಿಸುತ್ತಿದ್ದಾರೆ. ಸ್ಥಳೀಯರಾದ ದೀಪಕ್ ಮತ್ತು ಕುಶಾಲ್ ಎಂಬುವರು ಅವರಿಗೆ ಸಹಾಯ ಮಾಡುತ್ತಿದ್ದಾರಂತೆ.

English summary
Bengaluru based drone start-up company Sierra Aerospace helping to locate stranded people in Kodagu floods. Four waterproof drones has been using for the rescue operations.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X