ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಡಿಕೇರಿ ವಿಶೇಷ; ಕಾಡಾನೆ ಮರಿ ತಾಯಿಯಿಂದ ದೂರ; ಶಿಬಿರದಲ್ಲಿ ಚಿನ್ನಾಟ!

By Coovercolly Indresh
|
Google Oneindia Kannada News

ಮಡಿಕೇರಿ, ಜುಲೈ 05; ಕಾಡಿನಲ್ಲಿ ತಾಯಿಯೊಂದಿಗೆ ವಿಹರಿಸುತ್ತಿದ್ದ ಕಾಡಾನೆ ಮರಿಯೊಂದು ಅರಣ್ಯ ಇಲಾಖೆಯ ಸಾಕಾನೆಗಳ ಹಿಂಡಿನೊಂದಿಗೆ ಸೇರಿಕೊಂಡು ಮತ್ತಿಗೋಡು ಕ್ಯಾಂಪಿಗೆ ಬಂದು ಸೇರಿಕೊಂಡಿರುವ ಅಪರೂಪದ ಘಟನೆ ನಡೆದಿದೆ.

ಸಾಮಾನ್ಯವಾಗಿ ಕಾಡಾನೆ ಮರಿಗಳು ಗುಂಡಿಗೆ ಅಥವಾ ಕಂದಕಕ್ಕೆ ಬಿದ್ದು ತಾಯಿಯಿಂದ ಬೇರ್ಪಡುತ್ತವೆ. ಆದರೆ ಇಲ್ಲಿ ತಾಯಿಯನ್ನೇ ತೊರೆದು ಬಂದು ಸಾಕಾನೆ ಗುಂಪಿಗೆ ಸೇರಿಕೊಂಡಿರುವುದು ಅರಣ್ಯಾಧಿಕಾರಿಗಳಲ್ಲಿ ಅಚ್ಚರಿ ಹುಟ್ಟಿಸಿದೆ.

ದುಬಾರೆಯ 'ಕುಶ' ಬಂಧ ಮುಕ್ತ; ಮತ್ತೆ ಕಾಡಿಗೆ ಹೋದ ಆನೆ! ದುಬಾರೆಯ 'ಕುಶ' ಬಂಧ ಮುಕ್ತ; ಮತ್ತೆ ಕಾಡಿಗೆ ಹೋದ ಆನೆ!

ಈ ಮರಿಯಾನೆ ಮತ್ತಿಗೋಡು ಆನೆ ಶಿಬಿರದ ವಾತಾವರಣಕ್ಕೆ ಹೊಂದಿಕೊಂಡು ದಿನಚರಿಯನ್ನು ಪ್ರಾರಂಭಿಸಿದೆ. ಮಾವುತರು ಹಾಗೂ ಕಾವಾಡಿಗಳ ಆರೈಕೆಯೊಂದಿಗೆ ಬೆಳವಣಿಗೆ ಪ್ರಾರಂಭಿಸಿದ ಆನೆಗೆ ನಾಮಕರಣ ಮಾಡುವ ದಿನವೂ ಸನಿಹವಾಗಿದೆ.

ಕುಶ ಆನೆ ಮರಳಿ ಕಾಡಿಗೆ; ಸಚಿವ ಅರವಿಂದ ಲಿಂಬಾವಳಿ ಕುಶ ಆನೆ ಮರಳಿ ಕಾಡಿಗೆ; ಸಚಿವ ಅರವಿಂದ ಲಿಂಬಾವಳಿ

ಶಿಬಿರದ ಆಹಾರದ ಕ್ರಮಕ್ಕೆ ಒಗ್ಗಿಕೊಂಡು ರಾಗಿ, ಹುರುಳಿ, ಹೆಸರುಕಾಳು, ಅಕ್ಕಿ, ಉದ್ದು ಮಿಶ್ರಿತವಾಗಿ ಬೇಯಿಸಿದ ಆಹಾರವನ್ನು ಸೇವಿಸುತ್ತಿದೆ. ಮತ್ತಿಗೋಡು ಆನೆ ಶಿಬಿರದ ಗಜಪಡೆಗೆ ಈ ನೂತನ ಸದಸ್ಯನ ಆಗಮನ ಸಂಭ್ರಮಕ್ಕೆ ಕಾರಣವಾಗಿರುವುದಲ್ಲದೆ 21 ಸಂಖ್ಯಾಬಲ ಹೊಂದಿದ್ದ ಆನೆಯ ಕುಟುಂಬಕ್ಕೆ ಮತ್ತೊಬ್ಬ ಅನಿರೀಕ್ಷಿತ ಅತಿಥಿಯ ಸೇರ್ಪಡೆಯಾಗಿದೆ.

ಆನೆ ಹಾವಳಿ ತಡೆಗೆ ಜೇನು ಸಾಕಣೆ; ದೇಶದಲ್ಲೇ ಮೊದಲ ಪ್ರಯೋಗ ಆನೆ ಹಾವಳಿ ತಡೆಗೆ ಜೇನು ಸಾಕಣೆ; ದೇಶದಲ್ಲೇ ಮೊದಲ ಪ್ರಯೋಗ

ಶಿಬಿರದಲ್ಲಿ ಹಲವು ವಿಶೇಷತೆಗಳು

ಶಿಬಿರದಲ್ಲಿ ಹಲವು ವಿಶೇಷತೆಗಳು

ವಾರದ ಹಿಂದೆ ಸಿಕ್ಕಿದ 8 ತಿಂಗಳ ಮರಿ, 6 ವರ್ಷದ ಚಾಮುಂಡೇಶ್ವರಿ ಸೇರಿದಂತೆ ಶಿಬಿರದಲ್ಲಿ 5 ಹೆಣ್ಣು, 17 ಗಂಡು, 1 ಮಕ್ನಾ ಆನೆಗಳು ಇವೆ. ಅಂಬಾರಿ ಹೊರುವ ಅಭಿಮನ್ಯು, ಕಾಡಾನೆ ಮತ್ತು ಹುಲಿ ಸೆರೆಹಿಡಿಯಲು ಬಳಸುವ ಗೋಪಾಲಸ್ವಾಮಿ, ಬಲರಾಮ ಆನೆ ಇಲ್ಲಿರುವುದರಿಂದ ಶಿಬಿರವು ವಿಶೇಷತೆಯನ್ನು ಪಡೆದುಕೊಂಡಿದೆ.

ಶಿಬಿರದ ಹಿರಿಯರಾದ ಮಾಸ್ತಿ, ಭೀಮ, ಕೃಷ್ಣ, ಕ್ಯಾತ, ಗೋಪಾಲಸ್ವಾಮಿ, ಅಶೋಕ, ಸೋಮಶೇಖರ, ಗಣೇಶ, ಮಹೇಂದ್ರ, ಶ್ರೀರಂಗ, ರಾಮಯ್ಯ, ಧ್ರುವ, ಮಹಾರಾಷ್ಟ್ರದ ಭೀಮ್ ಜತೆಗೆ ಕಾಡಿನಲ್ಲಿ ಸಿಕ್ಕ ಮರಿ ಆನೆ ಕೌಟುಂಬಿಕ ಬಾಂಧವ್ಯ ಅನುಭವಿಸುತ್ತಿದೆ.

ತಾಯಿಯಿಂದ ಬೇರೆಯಾದ ಆನೆ ಮರಿ

ತಾಯಿಯಿಂದ ಬೇರೆಯಾದ ಆನೆ ಮರಿ

ಸಾಮಾನ್ಯವಾಗಿ ಆನೆಗಳು 2 ವರ್ಷಗಳವರೆಗೆ ಮರಿಗಳಿಗೆ ಹಾಲುಣಿಸುತ್ತವೆ. ಆದರೆ ಈ ಮರಿಯು ತಾಯಿಯ ನೆನಪೂ ಇಲ್ಲದಂತೆ 18 ತಿಂಗಳ ಸ್ನೇಹಿತೆ ರಾಜೇಶ್ವರಿಯೊಂದಿಗೆ ಚಿನ್ನಾಟದಲ್ಲಿ ತೊಡಗಿದೆ. ಕಳೆದ 10 ತಿಂಗಳಿನಿಂದ ಆನೆಗಳಿಗೆ ಆಹಾರ ಕ್ರಮದಲ್ಲಿ ವ್ಯತ್ಯಾಸ ಉಂಟಾಗಿ ಆರೋಗ್ಯ ಕೆಡದಂತೆ ಬಾಯ್ಲರ್ ಬಳಕೆಯ ಮೂಲಕ ಆಹಾರವನ್ನು ಬೇಯಿಸಲಾಗುತ್ತಿದೆ. ಈ ಹಿಂದೆ ಮಾವುತರು, ಕಾವಾಡಿಗಳು ಸೌದೆ ಒಲೆಯಲ್ಲಿ ದೊಡ್ಡ ಬಟ್ಟಲಿನಲ್ಲಿ ಆಹಾರ ಬೇಯಿಸುವ ಕ್ರಮವಿತ್ತು.

ತಾಯಿ ಜೊತೆ ಸೇರಿಸಲು ಪ್ರಯತ್ನ

ತಾಯಿ ಜೊತೆ ಸೇರಿಸಲು ಪ್ರಯತ್ನ

ಈ ಕುರಿತು ಒನ್‌ ಇಂಡಿಯಾ ಕನ್ನಡಕ್ಕೆ ಪ್ರತಿಕ್ರಿಯೆ ನೀಡಿದ ನಾಗರಹೊಳೆ ಅಭಯಾರಣ್ಯದ ಉಪ ಅರಣ್ಯ ಸಂರಕ್ಷಣಾಧಿಕಾರಿ ಮಹೇಶ್‌, "ತಾಯಿಯಿಂದ ತಪ್ಪಿಸಿಕೊಂಡಿರುವ ಮರಿಯನ್ನು 3-4 ದಿನಗಳ ಕಾಲ ಅದು ಸಿಕ್ಕಿರುವ ಸ್ಥಳದಲ್ಲೇ ತಾಯಿಯೊಂದಿಗೆ ಸೇರಿಸಲು ಅರಣ್ಯ ಸಿಬ್ಬಂದಿ ಪ್ರಯತ್ನ ಪಟ್ಟಿದ್ದಾರೆ. ಆದರೆ ತಾಯಿ ಆನೆ ಪತ್ತೆ ಆಗಿಲ್ಲ. ಎಲ್ಲಕ್ಕಿಂತ ಹೆಚ್ಚಾಗಿ ಮರಿ ಆನೆ ತಾಯಿಗಾಗಿ ಹಂಬಲಿಸದೇ ಶಿಬಿರದಲ್ಲೇ ಆಟವಾಡಿಕೊಂಡು ಆರಾಮವಾಗಿದೆ" ಎಂದರು.

Recommended Video

Tab ಖರೀದಿಸಲು ರಸ್ತೆ ಬದಿಯಲ್ಲಿ ಸೊಪ್ಪು ಮಾರಾಟ ಮಾಡ್ತಿರೋ ಕೀರ್ತನಾಳ ಕಥೆ‌ ನೋಡಿ | Oneindia Kannada
ಆಹಾರ ಕ್ರಮಕ್ಕೆ ಹೊಂದಿಕೊಂಡಿದೆ

ಆಹಾರ ಕ್ರಮಕ್ಕೆ ಹೊಂದಿಕೊಂಡಿದೆ

ಕಳೆದ 6 ದಿನಗಳ ಹಿಂದೆ ಕಾಡಿನಲ್ಲಿ ಸಿಕ್ಕ ಆನೆ ಮರಿಯನ್ನು ವಿಶೇಷವಾಗಿ ಪರಿಗಣಿಸಿ ಆರೈಕೆ ಮಾಡಲಾಗುತ್ತಿದೆ. ನಿಧಾನವಾಗಿ ಶಿಬಿರದ ಕ್ರಮಕ್ಕೆ ಹೊಂದಿಕೊಂಡು ಆಹಾರ ಸೇವನೆ ಮಾಡುತ್ತಿದೆ. ಸಾಮಾನ್ಯವಾಗಿ ವರ್ಷಕ್ಕಿಂತ ಚಿಕ್ಕ ಮರಿಗಳು ತಾಯಿ ಇಲ್ಲದೆ ಬದುಕುವುದಿಲ್ಲ ಆದರೆ ಈ ಆನೆಮರಿ ಈಗಾಗಲೇ ಹುಲ್ಲನ್ನೂ ತಿನ್ನುವುದರ ಜೊತೆಗೆ ಬೇಯಿಸಿದ ಆಹಾರವನ್ನೂ ಸೇವಿಸುತ್ತಿರುವುದು ನಿಜಕ್ಕೂ ಅಚ್ಚರಿಯ ಸಂಗತಿ ಆಗಿದೆ.

English summary
Baby elephant playing with other elephant at Mattigodu elephant camp. Baby elephant missing their mother and other group of elephant.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X