ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ದೇವೇಗೌಡರದು ಬ್ಲ್ಯಾಕ್‌ಮೇಲ್ ತಂತ್ರ: ಅಪ್ಪಚ್ಚು ರಂಜನ್

|
Google Oneindia Kannada News

ಕೊಡಗು, ಜೂನ್ 21: ಮಧ್ಯಂತರ ಚುನಾವಣೆ ಕುರಿತು ಜೆಡಿಎಸ್ ವರಿಷ್ಠ ಎಚ್ ಡಿ ದೇವೇಗೌಡ ಅವರು ನೀಡಿರುವ ಹೇಳಿಕೆ ಕೇವಲ ಬ್ಲ್ಯಾಕ್ ಮೇಲ್ ತಂತ್ರ ಎಂದು ಬಿಜೆಪಿ ಶಾಸಕ ಅಪ್ಪಚ್ಚು ರಂಜನ್ ಮಡಿಕೇರಿಯಲ್ಲಿ ಹೇಳಿದರು.

ಕಾಂಗ್ರೆಸ್ ಪಕ್ಷದ ನಾಯಕರನ್ನು ಬ್ಲ್ಯಾಕ್ ಮೇಲ್ ಮಾಡಿ ಮುಖ್ಯಮಂತ್ರಿ ಕುರ್ಚಿಯಲ್ಲಿ ಗಟ್ಟಿಯಾಗಿ ಕೂರುವ ಪ್ಲ್ಯಾನ್ ಇದು. ದೇವೇಗೌಡರಿಗೆ ಈ ರೀತಿಯ ಎಲ್ಲ ತಂತ್ರಗಳೂ ಗೊತ್ತಿವೆ. ಇದೇ ತಂತ್ರ ಬಳಸಿ ಅವರು ಕಾಂಗ್ರೆಸ್‌ನವರನ್ನು ಬೆದರಿಸುತ್ತಿದ್ದಾರೆ ಎಂದು ಅವರು ಹೇಳಿದರು.

ಮಧ್ಯಂತರ ಚುನಾವಣೆ ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪ ಸಿಡಿಸಿದ್ರು ಬಾಂಬ್ ಮಧ್ಯಂತರ ಚುನಾವಣೆ ಬಗ್ಗೆ ಮಾಜಿ ಸಿಎಂ ಯಡಿಯೂರಪ್ಪ ಸಿಡಿಸಿದ್ರು ಬಾಂಬ್

ಸಿದ್ದರಾಮಯ್ಯ ಅವರಿಗೆ ಬೇಕಾದ ಕೆಲಸವನ್ನು ಕೂಡ ಎಚ್ ಡಿ ದೇವೇಗೌಡರು ಮಾಡುತ್ತಾರೆ. ಮಧ್ಯಂತರ ಚುನಾವಣೆ ಆದರೆ ಸರ್ಕಾರಕ್ಕೆ ಹೊರೆಯಾಗುತ್ತದೆ. ಹೀಗಾಗಿ ಇನ್ನು ನಾಲ್ಕು ವರ್ಷ ಚುನಾವಣೆಗೆ ಹೋಗಬಾರದು ಎಂದು ಅಭಿಪ್ರಾಯಪಟ್ಟರು.

appacchu ranjan hd devegowda blackmail strategy on congress

ದೇವೇಗೌಡರು ಚುನಾವಣಾ ಆಯುಕ್ತರ ರೀತಿ ಮಾತನಾಡುತ್ತಿದ್ದಾರೆ ಎಂದು ಶಾಸಕ ಕೆ.ಜಿ. ಬೋಪಯ್ಯ ಟೀಕಿಸಿದರು.

ದೇವೇಗೌಡರು ಲೋಕಸಭೆ ಚುನಾವಣೆಯಲ್ಲಿನ ಸೋಲಿನ ಹತಾಶೆಯಿಂದ ಏನೇನೋ ಮಾತನಾಡುತ್ತಿದ್ದಾರೆ. ಮಾಜಿ ಪ್ರಧಾನಿಯಾದವರ ಮಾತಿನಲ್ಲಿ ಗಾಂಭೀರ್ಯ ಇರಬೇಕು. ಈಗ ಚುನಾವಣೆ ನಡೆದರೂ ಬಿಜೆಪಿ 150 ಸ್ಥಾನಗಳಲ್ಲಿ ಗೆಲ್ಲುತ್ತದೆ ಎಂದು ಅವರು ಹೇಳಿದರು.

English summary
BJP MLA Appachu Ranjan criticised HD Deve Gowda's statement on Mid-term election is a blackmail strategy against Congress.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X