• search
 • Live TV
ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಮಡಿಕೇರಿ: ಕಾಡಾನೆ ದಾಳಿಯಿಂದ ಪರಿಸರ ಹೋರಾಟಗಾರನಿಗೆ ಗಾಯ

By ಮಡಿಕೇರಿ ಪ್ರತಿನಿಧಿ
|

ಮಡಿಕೇರಿ, ನವೆಂಬರ್ 4: ಮಡಿಕೇರಿ ಸಮೀಪದ ಗೋಣಿಕೊಪ್ಪಲು ಬಳಿಯ ಅತ್ತೂರಿನಲ್ಲಿ ಬುಧವಾರ (ನ.4) ಬೆಳಿಗ್ಗೆ ಕಾಡಾನೆಯೊಂದು ನಡೆಸಿದ ದಾಳಿಯಿಂದ ಪರಿಸರ ಹೋರಾಟಗಾರ, ನಿವೃತ್ತ ಕರ್ನಲ್‌ ಚೆಪ್ಪುಡೀರ ಮುತ್ತಣ್ಣ ಅವರು ಗಾಯಗೊಂಡಿದ್ದಾರೆ.

ಪರಿಸರ ಹೋರಾಟಗಾರ ಮುತ್ತಣ್ಣ ಅವರು ಬೆಳಿಗ್ಗೆ 10 ಗಂಟೆ ಸುಮಾರಿಗೆ ಮನೆಯ ಪಕ್ಕದಲ್ಲಿರುವ ಕಾಫಿ ತೋಟಕ್ಕೆ ತೆರಳಿದ್ದರು. ಆಗ ಕಾಡಾನೆ ಕಂಡು ಓಡುವ ಭರದಲ್ಲಿ ಮುತ್ತಣ್ಣ ಕೆಳಗೆ ಬಿದ್ದಿದ್ದಾರೆ. ಕಾಡಾನೆಯು ಮುತಣ್ಣ ಅವರ ಕಾಲು ತುಳಿದು ಮುಂದಕ್ಕೆ ಸಾಗಿದೆ.

ಕುಶಾಲನಗರದ ಹೋಂ ಸ್ಟೇನಲ್ಲಿ ವೇಶ್ಯಾವಾಟಿಕೆ; ಇಬ್ಬರ ಬಂಧನ

ಇದರಿಂದ ಮುತ್ತಣ್ಣ ಅವರ ಬಲಗಾಲಿಗೆ ತೀವ್ರ ನೋವಾಗಿದ್ದು, ತಕ್ಷಣ ಗೋಣಿಕೊಪ್ಪಲು ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿ ನಂತರ ಹೆಚ್ಚಿನ ಚಿಕಿತ್ಸೆಗೆ ಮೈಸೂರಿನ ಅಪೋಲೊ ಆಸ್ಪತ್ರೆಗೆ ದಾಖಲಿಸಲಾಗಿದೆ.

ಇವರು ಕೊಡಗಿನ ಮಾಜಿ ಮುಖ್ಯಮಂತ್ರಿ ಸಿ.ಎಂ ಪೂಣಚ್ಚ ಅವರ ಮಗ ಆಗಿದ್ದು, ಕೂರ್ಗ್‌ ವೈಲ್ಡ್‌ಲೈಫ್ ಸೊಸೈಟಿಯ ಮಾಜಿ ಅಧ್ಯಕ್ಷ ಕೂಡಾ ಆಗಿದ್ದಾರೆ.

   ಯುದ್ಧಕ್ಕೆ ಚೀನದೊರಿಗೆ ಯಾಕ್ರೀ ಅರ್ಜೆಂಟು!! | Rafale Fighter Jet | Oneindia Kannada

   ಕೊಡಗಿನ ಪರಿಸರ ಉಳಿಯ ಬೇಕು, ಕಾಡಾನೆಗಳು ಸೇರಿದಂತೆ ವನ್ಯಜೀವಿಗಳ ಬದುಕಿಗೆ ತೊಂದರೆ ಆಗಬಾರದು ಎಂದು ನಿರಂತರವಾಗಿ ಹೋರಾಟ ಮಾಡುತ್ತಿದ್ದಾರೆ. ಕಾಡಾನೆಗಳ ಬಗ್ಗೆ ಅಪಾರವಾದ ಪ್ರೀತಿ ಇಟ್ಟುಕೊಂಡಿರುವ ಮುತ್ತಣ್ಣ, ಅವರ ಮೇಲೆ ಕಾಡಾನೆ ದಾಳಿಯಿಂದ ಪರಿಸರವಾದಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

   English summary
   Environmental activist and retired Colonel Cheppudira Muthanna was injured in a forest Elephant attack on Wednesday morning at Attur near Gonikoppalu, Madikeri.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X