• search
  • Live TV
ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಭೀಕರ ಅಪಘಾತ: ಸುಂಟಿಕೊಪ್ಪ ಬಳಿ ಹೊತ್ತಿ ಉರಿದ ಕಾರು-ಲಾರಿ

By ಮಡಿಕೇರಿ ಪ್ರತಿನಿಧಿ
|

ಮಡಿಕೇರಿ, ಏಪ್ರಿಲ್ 15: ಮೈಸೂರಿನಿಂದ ಮಂಗಳೂರಿಗೆ ತೆರಳುತ್ತಿದ್ದ ಟೈರ್ ತುಂಬಿದ್ದ ಲಾರಿ ಮತ್ತು ಮಡಿಕೇರಿಯಿಂದ ಮೈಸೂರಿಗೆ ತೆರಳುತ್ತಿದ್ದ ಮಾರುತಿ ಆಲ್ಟೋ ಕಾರಿನ ನಡುವೆ ಡಿಕ್ಕಿ ಸಂಭವಿಸಿ ಎರಡೂ ವಾಹನಗಳು ಸುಟ್ಟು ಕರಕಲಾಗಿವೆ.

ಮೈಸೂರು-ಮಡಿಕೇರಿ ಹೆದ್ದಾರಿಯ ಸುಂಟಿಕೊಪ್ಪ ಸಮೀಪದ ಕೆದಕಲ್‌ನಲ್ಲಿ ಈ ಘಟನೆ ಬುಧವಾರ ರಾತ್ರಿ ೧೧ ಗಂಟೆಗೆ ಸಂಭವಿಸಿದ್ದು, ಲಾರಿ ಚಾಲಕ ಹಾಗೂ ಕಾರು ಚಾಲಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.

ಅದೃಷ್ಟವಶಾತ್ ಎರಡೂ ವಾಹನಗಳಲ್ಲಿ ಒಬ್ಬೊಬ್ಬರೆ ಇದ್ದಿದ್ದರಿಂದ ಯಾರಿಗೂ ಯಾವುದೇ ಅನಾಹುತವಾಗಿಲ್ಲ. ಈ ಘಟನೆಯಿಂದಾಗಿ ರಾತ್ರಿ 2 ಘಂಟೆಯವರೆಗೂ ಮಡಿಕೇರಿ ಹೆದ್ದಾರಿಯಲ್ಲಿ ವಾಹನ ಸಂಚಾರ ಸ್ಥಗಿತಗೊಂಡಿತ್ತು.

ನಂತರ ಅಗ್ನಿಶಾಮಕ ವಾಹನಗಳು ಬಂದು ಬೆಂಕಿ ನಂದಿಸಿದವು. ಪೊಲೀಸರು ಜೆಸಿಬಿ ಹಾಗೂ ಕ್ರೇನ್‌ ಬಳಸಿ ವಾಹನಗಳನ್ನು ಬದಿಗೆ ಸರಿಸಿ ವಾಹನಗಳ ಸಂಚಾರಕ್ಕೆ ಅನುವು ಮಾಡಿಕೊಟ್ಟರು. ಸುಂಟಿಕೊಪ್ಪ ಪೋಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

English summary
An accident between a lorry and a car at Kedakal near Suntikoppa in the Mysuru-Madikeri highway, both vehicles burnt.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X