• search
  • Live TV
ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊಡಗಿನ ಸಂತ್ರಸ್ತರಿಗೆ ಸಂತಸ ತಂದ ಅಭಿವ್ಯಕ್ತಿ 'ಸಂತ್ವರ'

By ಅಶ್ವಿನಿ ಅನೀಶ್
|

ಮಡಿಕೇರಿ, ಅಕ್ಟೋಬರ್ 11: ದಕ್ಷಿಣ ಕನ್ನಡದ ಪ್ರವಾಹ ಪೀಡಿತ ಸಂತ್ರಸ್ತರಿಗೆ ನೆರವಾಗುವ ಉದ್ದೇಶದಿಂದ ಅಭಿವ್ಯಕ್ತ ತಂಡವು 'ಸಂತ್ವರ' ಎನ್ನುವ ಸಾಂಸ್ಕೃತಿಕ ಕಾರ್ಯಕ್ರಮದ ಮೂಲಕ ಸುಮಾರು 75,000 ನಿಧಿ ಸಂಗ್ರಹಣೆ ಮಾಡಿ ಆ ನಿಧಿಯನ್ನು ಧಾರಾಳವಾಗಿ ನಾಲ್ಕು ಪರಿವಾರಗಳಿಗೆ ನೀಡಿದೆ.

ಆಗಸ್ಟ್ 31, 2018 ರಂದು ಪ್ರಯಾಗ್ ಸ್ಟುಡಿಯೋ ದಲ್ಲಿ ನಡೆದ ಸಂತ್ವರ ಕಾರ್ಯಕ್ರಮದಲ್ಲಿ ಭರತನಾಟ್ಯ, ಕಥಕ್, ಯಕ್ಷಗಾನ, ರಂಗ ಗೀತೆಗಳು ಮತ್ತು ಸಮಗ್ರ ವಾದ್ಯ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳಲಾಗಿತ್ತು. ಈ ಕಾರ್ಯಕ್ರಮಕ್ಕೆ ಬಹಳಷ್ಟು ಜನ ಆಗಮಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದ್ದರು.

ಅಭಿವ್ಯಕ್ತ ಕಾರ್ಯಕ್ರಮದ ಸಂಘಟಕರಾದ ವರ್ಷಿಣಿ ಭಾರಧ್ವಾಜ್, ಮಧುಸುದನ್ ಕಾಕಡೆ, ಶ್ವೇತಾ ನಾರಾಯಣ, ಅರುಣ ಭಾರಧ್ವಾಜ್, ಪ್ರಜ್ವಲ್ ಕಂಚಿ, ಶ್ರೇಯಸ್ ವಸಿಷ್ಠ, ವಿಫುಲ್ ಜೈನ್, ವಿರಾಗ್ ಜೈನ್ ಅವರು ಕಾರ್ಯಕ್ರಮ ಬಹಳ ಯಶಸ್ವಿಯಾಗಿ ನಡೆದಿದ್ದ ಕಾರಣ ಸಂತಸವನ್ನು ವ್ಯಕ್ತ ಪಡಿಸಿದ್ದಾರೆ.

ಸ್ವತಃ ಅಭಿವ್ಯಕ್ತ ತಂಡದವರೇ ಅಕ್ಟೋಬರ್ 1 ಹಾಗು 2 ಕೊಡಗು ಜಿಲ್ಲೆಗೆ ಭೇಟಿ ನೀಡಿ ನಾಲಕ್ಕು ಸಂತ್ರಸ್ತಕ್ಕೆ ತುತ್ತಾದ ಕುಟುಂಬ ಪರಿವಾರದವರಿಗೆ ಹಣ ಸಹಾಯ ಮಾಡಿದ್ದಾರೆ. ಅದರ ವಿವರಗಳು ಇಲ್ಲಿವೆ.

ಮೊದಲನೆಯ ಪರಿವಾರ

ಮೊದಲನೆಯ ಪರಿವಾರ

ಗಾಳಿಬೀಡು ತಾಲೂಕಿಗೆ ಸೇರಿದ ಅರವತ್ತು ಮೂರು ವರ್ಷದ ಎಂ ಟಿ ಸುಬ್ಬಯ್ಯ ಅನ್ನುವವರು ಮೂಲತಃ ರೈತರು. ಮೂರು ವರ್ಷದ ಹಿಂದೆ ತನ್ನ ಮಗನನ್ನು ಕಳೆದುಕೊಂಡಿದ್ದ ಸುಬ್ಬಯ್ಯನವರ ಮನೆ ಮಳೆಯಿಂದ ಕೊಚ್ಚಿ ಹೋಗಿತ್ತು. ತನ್ನ ಮನೆಯನ್ನು ಪುನರ್ ನಿರ್ಮಾಣ ಮಾಡುವಷ್ಟು ಚೈತನ್ಯ ಅವರಿಗರಲಿಲ್ಲ. ಅಭಿವ್ಯಕ್ತ ತಂಡದವರು ಅವರಿಗೆ 25000 ರೂಪಾಯಿಗಳನ್ನು ನೀಡಿದೆ.

ಎರಡನೆಯ ಪರಿವಾರ

ಎರಡನೆಯ ಪರಿವಾರ

ಗಾಳಿಬೀಡು ತಾಲೂಕಿನ ಇಪ್ಪತ್ತೆಂಟು ಅಚ್ಚೇಯ ಎನ್ನುವವರು ರೈತರು ಹಾಗು ವಾಹನ ಚಾಲಕರು. ಮಳೆಯಿಂದ ತಮ್ಮ ಮೂರು ಎಕರೆ ತೋಟವನ್ನು ಕಳೆದುಕೊಂಡಿದ್ದರು. ಅಭಿವ್ಯಕ್ತ ತಂಡ ಅವರಿಗೆ 15,000 ರೂಪಾಯಿಗಳನ್ನ ನೆರವಾಗಿ ನೀಡಿದೆ.

ಮೂರನೆಯ ಪರಿವಾರ

ಮೂರನೆಯ ಪರಿವಾರ

ಗಾಳಿಬೀಡು ತಾಲ್ಲೂಕಿನ ಇಪ್ಪತ್ತಾರು ವರ್ಷದ ಎ ಎ ಶರಣ್ ಅವರು ದಿನಗೂಲಿ ಕೆಲಸಗಾರರು. ಅವರು ಒಂದು ಸಣ್ಣ ಮನೆಯನ್ನು ಕಟ್ಟಿಕೊಂಡಿದ್ದರು. ಮಳೆಯಿಂದಾಗಿ ಅವರ ಮನೆ ಕೊಚ್ಚಿ ಹೋಗಿದ್ದ ಕಾರಣ ಅಭಿವ್ಯಕ್ತ ತಂಡ ಅವರ ಅಗತ್ಯವನ್ನು ಪರಿಗಣಿಸಿ 25000 ರೂಪಾಯಿಯನ್ನು ನೀಡಿದೆ.

ನಾಲ್ಕನೇ ಪರಿವಾರ

ನಾಲ್ಕನೇ ಪರಿವಾರ

"ಸಂತ್ರಸ್ತ ಕುಟುಂಬಗಳಿಗೆ ನೆರವು ನೀಡಲು ಕಾರ್ಯಕ್ರಮಕ್ಕೆ ಬಂದು ಪ್ರೋತ್ಸಾಹ ನೀಡಿ ಹರಸಿದ ಎಲ್ಲರಿಗೂ ನಮ್ಮ ಧನ್ಯವಾದಗಳು" ಎಂದು ವರ್ಷಿಣಿ ಭಾರಧ್ವಾಜ್ ಅವರು ಈ ಮೂಲಕ ದೇಣಿಗೆ ನೀಡಿದ ಎಲ್ಲರಿಗೂ ಧನ್ಯವಾದ ತಿಳಿಸಿದರು.

ಮನೆಯ ದುರಸ್ತಿಗಾಗಿ ದೇಣಿಗೆ

ಮನೆಯ ದುರಸ್ತಿಗಾಗಿ ದೇಣಿಗೆ

ಗಾಳಿಬೀಡು ತಾಲ್ಲೂಕಿಗೆ ಸೇರಿದ ಎಪ್ಪತ್ತೊಂದು ವರ್ಷದ ಕೆ ಪಿ ಐಯ್ಯಣ್ಣ ಒಬ್ಬರು ದಿನಗೂಲಿ ಕೆಲಸಗಾರರು. ಅವರ ಮನೆಯಲ್ಲಿ ಮಳೆಯಿಂದಾಗಿ ಒಂದು ಬಿರುಕು ಉಂಟಾಗಿ ಅವರ ಮನೆಯ ದುರಸ್ತಿಗಾಗಿ ಹತ್ತು ಸಾವಿರ ರೂಪಾಯಿಗಳನ್ನ ಅಭಿವ್ಯಕ್ತ ತಂಡ ನೀಡಿತ್ತು.

English summary
Bengaluru based art group Abhivyaktha oraganised 'Santvara' a fundraising a cultural event in favour of Flood hit regions. Now Abhivyaktha has denoted the collected money to four family who hit by floods.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X