ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಎಂಥ ಸುದ್ದಿ! ಮನುಷ್ಯನೊಂದಿಗೆ ನೀರುಕಾಗೆಯ ಕುಚುಕು ಸ್ನೇಹ!

By ಕರುಣ್ ಕಾಳಯ್ಯ
|
Google Oneindia Kannada News

ಕೊಡಗು, ಅಕ್ಟೋಬರ್ 30: ಸ್ನೇಹಕ್ಕೆ ಜಾತಿ, ಭಾಷೆ, ಪ್ರಭೇದದ ಹಂಗಿಲ್ಲ! ಈ ಮಾತಿಗೆ ತಾಜಾ ಉದಾಹರಣೆ ಎಂಬಂತೆ ಕೊಡಗು ಜಿಲ್ಲೆಯ ಚೆಟ್ಟಳ್ಳಿ ಎಂಬಲ್ಲಿ ನೀರುಕಾಗೆಯೊಂದು ವ್ಯಕ್ತಿಯೊಬ್ಬರೊಂದಿಗೆ ಕುಚುಕು ಕುಚುಕು ಎಂಬಷ್ಟು ಸ್ನೇಹ ಬೆಳೆಸಿಕೊಂಡಿದೆ!

ನೀರಿನೊಳಗೆ ಈಜಾಡುತ್ತಾ ಮೀನು, ಹುಳ ಹುಪ್ಪಟೆಗಳನ್ನು ತಿಂದು ಬದುಕಬೇಕಿದ್ದ ಕಪ್ಪಗಿನ ನೀರುಕಾಗೆ ಮರಿಯೊಂದು ಹಂಸ ಎಂಬ ವ್ಯಕ್ತಿಯೊಂದಿಗೆಯೊಂದಿಗೆ ಸ್ನೇಹತ್ವವನ್ನು ಬೆಳೆಸಿಕೊಂಡಿದೆ.

A special friendship between a man and cormorant

ಸೋಜಿಗ ಹುಟ್ಟಿಸುವ ಗೀಜಗದ ಜಗತ್ತು, ಸಂತಸ ಪಡಲು ಕಾರಣ ಅದೆಷ್ಟೋ!ಸೋಜಿಗ ಹುಟ್ಟಿಸುವ ಗೀಜಗದ ಜಗತ್ತು, ಸಂತಸ ಪಡಲು ಕಾರಣ ಅದೆಷ್ಟೋ!

ಕಾರ್ಮಿಕರಾಗಿರುವ ಹಂಸ ಎಂಬುವವರಿಗೆ ಗಿಳಿಶಾಸ್ತ್ರದವನೊಂದಿಗೆ ಬಂದ ವ್ಯಕ್ತಿಯೊಬ್ಬರು ಈ ನೀರಕಾಗೆಮರಿಯನ್ನು ನೀಡಿದ್ದರು. ಪ್ರಾಣಿ ಪಕ್ಷಿಗಳನ್ನು ಪ್ರೀತಿಯಿಂದ ಸಾಕಿ, ಬೆಳೆಸುತ್ತಿದ್ದ ಹಂಸ ಈ ನೀರು ಕಾಗೆಯನ್ನು ಪಡೆದು ಮನೆಯಲ್ಲಿ ಪ್ರೀತಿಯಿಂದ ಸಾಕತೊಡಗಿದರು. ಅದಕ್ಕೆ ಬೇಕಾದ ಹಸಿ ಹಾಗು ಒಣಗಿದ ಮೀನನ್ನು ಖರೀದಿಸಿ ತಂದು, ತುಂಡಾಗಿ ಮಾಡಿ ನೀಡುತ್ತಾರೆ. ಹಸ ಅವರ ಬೆನ್ನಮೇಲೆ, ಭುಜದ ಮೇಲೆ ಕೂತಿ ಈ ನೀರುಕಾಗೆ ಪ್ರೀತಿಯಿಂದ ರೆಕ್ಕೆಪಡಿಯುತ್ತ ತನ್ನ ಸಂತಸ ವ್ಯಕ್ತಪಡಿಸುತ್ತದೆ. 'ಪುಟ್ಟಿ' ಎಂದು ನಾಮಕರಣಗೊಂಡ ನೀರುಕಾಗೆ, ಹಂಸನ ಬೆಂಗಾವಲು ಎಂಬತೆ ಆತ ಎಲ್ಲಿ ಹೋದರೂ ಆತನನ್ನು ಅನುಸರಿಸುತ್ತದೆ!

A special friendship between a man and cormorant

ಸ್ವಾತಂತ್ರ್ಯ ದಿನದಂದು ದೇಶದಲ್ಲೇ ಮೊದಲ ಪೆಂಗ್ವಿನ್ ಜನನದ ಸಂಭ್ರಮಸ್ವಾತಂತ್ರ್ಯ ದಿನದಂದು ದೇಶದಲ್ಲೇ ಮೊದಲ ಪೆಂಗ್ವಿನ್ ಜನನದ ಸಂಭ್ರಮ

ಒಟ್ಟಿನಲ್ಲಿ ಸ್ನೇಹಕ್ಕೆ ಯಾವ ಅಡೆತಡೆಯ ಹಂಗಿಲ್ಲ ಎಂಬುದು ಇದರಿಂದ ಸಾಬೀತಾಗಿದೆ.

English summary
Here is an interesting story in which a man has friendship with cormorant a type of bird in Kodagu district.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X