ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ತ್ರಿವೇಣಿ ಸಂಗಮದಲ್ಲಿ ಕಳೆದು ಹೋಗಿದ್ದ ಕೊಕ್ಕೆತಾತಿ ಪತ್ತೆ

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಅಕ್ಟೋಬರ್ 18: ಭಾಗಮಂಡಲದ ತ್ರಿವೇಣಿ ಸಂಗಮದಲ್ಲಿ ನದಿ ಪಾಲಾಗಿದ್ದ ಕೊಡಗಿನ ಸಾಂಪ್ರದಾಯಿಕ ಆಭರಣ ಕೊಕ್ಕೆತಾತಿಯನ್ನು ಪತ್ತೆ ಹಚ್ಚುವಲ್ಲಿ ಮುಳುಗು ತಜ್ಞ ಕೊತ್ತೋಳಿರ ರವಿಮುತ್ತಪ್ಪ ಯಶಸ್ವಿಯಾಗಿದ್ದಾರೆ.

22 ವರ್ಷದ ಹಿಂದೆ ಕಾಣೆಯಾಗಿದ್ದ ವ್ಯಕ್ತಿಯ ಶವ ಹುಡುಕಿದ Google Maps!22 ವರ್ಷದ ಹಿಂದೆ ಕಾಣೆಯಾಗಿದ್ದ ವ್ಯಕ್ತಿಯ ಶವ ಹುಡುಕಿದ Google Maps!

ಕಾವೇರಿ ಸಂಕ್ರಮಣದಂದು ಬಿರುನಾಣಿಯ ಚೆಟ್ಟಿಯಪ್ಪ ಎಂಬುವರು ತ್ರಿವೇಣಿ ಸಂಗಮದಲ್ಲಿ ಪಿಂಡ ಪ್ರದಾನ ನೆರವೇರಿಸಿ ಸಂಗಮದಲ್ಲಿ ಪುಣ್ಯಸ್ನಾನ ಮಾಡುವ ಸಂದರ್ಭ ಸುಮಾರು 40 ಸಾವಿರ ರೂಪಾಯಿ ಮೌಲ್ಯದ ಕೊಡವ ಸಾಂಪ್ರದಾಯಿಕ ಕೊಕ್ಕೆತಾತಿಯನ್ನು ಕಳೆದುಕೊಂಡಿದ್ದರು.

ಸಕಾಲದಲ್ಲಿ ಹಾಜರಿದ್ದ ರವಿಮುತ್ತಪ್ಪ ಅವರು ನದಿಗೆ ಮುಳುಗಿ ಕೊಕ್ಕೆತಾತಿಯನ್ನು ಹೊರತರುವಲ್ಲಿ ಯಶಸ್ವಿಯಾದರು. ಚಿನ್ನದ ಕೊಕ್ಕೆತಾತಿಯನ್ನು ನೀರಿನೊಳಗೆ ಪತ್ತೆ ಹಚ್ಚಿದ ಮುಳುಗು ತಜ್ಞ ರವಿ ಅವರ ಬಗ್ಗೆ ಜನರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

English summary
Expert Kottolira Ravimuttappa has succeeded in discovering the kodagu traditional jewelery kokketati in the river at the Triveni Sangamam in Bhagmandala
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X