ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗಿನಲ್ಲಿ ವಿಶಿಷ್ಟ ಕೋವಿ ಹಬ್ಬ; ಆಯುಧ ಹಕ್ಕು ರಕ್ಷಣೆಗೆ ಒತ್ತಾಯ

By Coovercolly Indresh
|
Google Oneindia Kannada News

ಮಡಿಕೇರಿ, ಡಿಸೆಂಬರ್ 19: ಕೊಡವ ಬುಡಕಟ್ಟು ಕುಲದಲ್ಲಿ ಪ್ರಮುಖ ಸ್ಥಾನ ಪಡೆದಿರುವ ಬಂದೂಕು ಕೊಡವರ ಧಾರ್ಮಿಕ ಮತ್ತು ಸಾಂಸ್ಕೃತಿಕ ಲಾಂಛನವಾಗಿದ್ದು, ಸರ್ಕಾರ ಇದನ್ನು ಮಾನ್ಯ ಮಾಡಿ ಗೌರವದ ಸ್ಥಾನಮಾನ ನೀಡಬೇಕೆಂದು ಕೊಡವ ನ್ಯಾಷನಲ್ ಕೌನ್ಸಿಲ್ ಅಧ್ಯಕ್ಷ ಎನ್.ಯು.ನಾಚಪ್ಪ ಒತ್ತಾಯಿಸಿದ್ದಾರೆ.

ಕೊಡವ ಬುಡಕಟ್ಟು ಕುಲದ ನಾಗರೀಕತೆ ಉಗಮವಾದಂದಿನಿಂದಲೂ ಆಯುಧಗಳು ಕೊಡವರ ಬದುಕಿನ ಅವಿಭಾಜ್ಯ ಅಂಗವಾಗಿವೆ. ಇದರ ಹಕ್ಕು ಮತ್ತು ರಕ್ಷಣೆ ಅಬಾಧಿತವಾಗಿ ಮುಂದುವರೆಯಲು ರಾಜ್ಯಾಂಗ ಖಾತ್ರಿ ನೀಡಬೇಕೆಂದು ಒತ್ತಾಯಿಸಿದ್ದಾರೆ.

ಸೆ.1 ರಂದು ಕೊಡಗಿನ ಚೆಟ್ಟಳ್ಳಿಯಲ್ಲಿ ಬೊಡಿನಮ್ಮೆ!ಸೆ.1 ರಂದು ಕೊಡಗಿನ ಚೆಟ್ಟಳ್ಳಿಯಲ್ಲಿ ಬೊಡಿನಮ್ಮೆ!

ವಿಶ್ವ ಅಲ್ಪಸಂಖ್ಯಾತ ಜನಾಂಗದ ಹಕ್ಕುಗಳ ದಿನಾಚರಣೆ ಅಂಗವಾಗಿ ನಾಪೋಕ್ಲುವಿನ ಕೊಳಕೇರಿಯಲ್ಲಿ ಶನಿವಾರ ನಡೆದ 'ತೋಕ್ ನಮ್ಮೆ' (ಗನ್ ಕಾರ್ನಿವಲ್) ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, "ಕೊಡವ ಬುಡಕಟ್ಟು ಕುಲದ ನಾಗರಿಕತೆ ಉಗಮವಾದಂದಿನಿಂದಲೂ ಆಯುಧಗಳು ಅವರ ಬದುಕಿನ ಅವಿಭಾಜ್ಯ ಅಂಗವಾಗಿವೆ. ಅದೊಂದು ಪರಂಪರೆಯಾಗಿಯೂ, ಜೀವನ ವಿಧಾನವಾಗಿಯೂ ಮುಂದುವರೆದಿದೆ. ಇದರ ಹಕ್ಕು ಮತ್ತು ರಕ್ಷಣೆ ಅಬಾಧಿತವಾಗಿ ಮುಂದುವರೆಯಲು ರಾಜ್ಯಾಂಗ ಖಾತ್ರಿಗಾಗಿ ಹಲವು ಮಹತ್ವದ ನಿರ್ಣಯಗಳನ್ನು ತೋಕ್ ನಮ್ಮೆ ಸಂದರ್ಭ ಅಂಗೀಕರಿಸಲಾಗಿದೆ" ಎಂದು ತಿಳಿಸಿದ್ದಾರೆ.

A Celebration Of Special Festival Kovi Habba On Dec 19

ನಾಚಪ್ಪ ಅವರ ನೇತೃತ್ವದಲ್ಲಿ ಬಂದೂಕು ಕುರಿತಾದ ತೋಕ್ ಪಾಟ್ (ಕೋವಿ ಹಾಡು)ನೊಂದಿಗೆ ಬಂದೂಕಿಗೆ ಸಾಮೂಹಿಕ ಪೂಜೆ ನೆರವೇರಿಸಲಾಯಿತು. ಮಹಿಳೆಯರು, ಮಕ್ಕಳು ಮತ್ತು ಪುರುಷರಿಗೆ ಪ್ರತ್ಯೇಕ ವಿಭಾಗಗಳಲ್ಲಿ ತೆಂಗಿನಕಾಯಿಗೆ ಗುರಿಯಿಟ್ಟು ಗುಂಡು ಹೊಡೆಯುವ ಸ್ಪರ್ಧೆ ನಡೆಸಲಾಯಿತು. ಕೊಡವರ ಪ್ರತಿಯೊಂದು ಆಚರಣೆಗಳು ಭಿನ್ನ, ವಿಶಿಷ್ಟ. ಇಂತಹ ಅಚರಣೆಗಳ ಸಾಲಿಗೆ ಹೊಸ ಸೇರ್ಪಡೆ ಎಂಬಂತೆ ಕೋವಿ ಉತ್ಸವ ಭರ್ಜರಿಯಾಗಿ ನಡೆಯಿತು.

A Celebration Of Special Festival Kovi Habba On Dec 19

Recommended Video

ದೀದಿಗೆ ಶಾಕ್ ಮೇಲೆ ಶಾಕ್! | Didi | west bengal | Oneindia Kannada

ಕಳೆದ 10 ವರ್ಷದಿಂದ ಕೊಡವ ನ್ಯಾಷನಲ್‌ ಕೌನ್ಸಿಲ್‌ ಕೋವಿ ಉತ್ಸವ ನಡೆಸಿಕೊಂಡು ಬರುತ್ತಿದೆ. ಕೊಳಗೇರಿಯಲ್ಲಿ ಶನಿವಾರ ನಡೆದ ಈ ವಿಶಿಷ್ಟ ಉತ್ಸವದಲ್ಲಿ ನೂರಾರು ಜನರು ಪಾಲ್ಗೊಂಡಿದ್ದರು. ಪುರುಷ, ಮಹಿಳೆ ಎಂಬ ಭೇದವಿಲ್ಲದೆ ಎಲ್ಲರೂ ಗುಂಡು ಸಿಡಿಸಿ ಸಂಭ್ರಮಿಸಿದರು.

English summary
A special festival kovi habba celebrated at napoklu in kodagu. In this festival, Kodagu national council president Nachappa demanded Constitution to ensure weapon rights and protections continue unabated,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X