ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಮಡಿಕೇರಿ ಹೋಂಸ್ಟೇನಲ್ಲಿ ಅನೈತಿಕ ಚಟುವಟಿಕೆ ಆರೋಪ; 7 ಮಂದಿ ಬಂಧನ

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಕೊಡಗು, ಅಕ್ಟೋಬರ್ 14: ಅನೈತಿಕ ಚಟುವಟಿಕೆ ನಡೆಸುತ್ತಿದೆ ಎಂಬ ಆರೋಪದ ಮೇರೆಗೆ ಮಡಿಕೇರಿ ಸಮೀಪದ ಮೂರ್ನಾಡಿನ ಹೋಂ ಸ್ಟೇಯೊಂದರ ಮೇಲೆ ಪೊಲೀಸರು ದಿಢೀರ್ ದಾಳಿ ನಡೆಸಿ 7 ಮಂದಿಯನ್ನು ಇಂದು ವಶಕ್ಕೆ ಪಡೆದಿದ್ದಾರೆ.

 ಕೊಡಗಿನವರನ್ನು ಕಾಡುತ್ತಿದೆ ಹತ್ತಾರು ಸಮಸ್ಯೆಗಳು..! ಕೊಡಗಿನವರನ್ನು ಕಾಡುತ್ತಿದೆ ಹತ್ತಾರು ಸಮಸ್ಯೆಗಳು..!

Recommended Video

DK Shivakumar's Bail Plea Hearing Today | Oneindia Kannada

ಈ ಹೋಂ ಸ್ಟೇಯಲ್ಲಿ ಕೇರಳ ಮೂಲದ ಯುವಕರ ತಂಡ ತಂಗಿತ್ತು ಎನ್ನಲಾಗಿದೆ. ಕೇರಳ ಮೂಲದ‌ ನಾಲ್ವರು ಯುವಕರು ಹಾಗೂ ಇಬ್ಬರು ಯುವತಿಯರನ್ನು ವಶಕ್ಕೆ ಪಡೆಯಲಾಗಿದೆ. ಮಡಿಕೇರಿ-ವಿರಾಜಪೇಟೆ ರಸ್ತೆಯ ಭೀಮಯ್ಯ ಎಂಬುವರಿಗೆ ಸೇರಿದ ಭವಾನಿ ಹೋಂ ಸ್ಟೇನಲ್ಲಿ ಘಟನೆ ನಡೆದಿದೆ. ಹೋಂ‌ ಸ್ಟೇ ಮಾಲೀಕನನ್ನೂ ಬಂಧಿಸಲಾಗಿದೆ. ಈ ಸಂಬಂಧ ಮಡಿಕೇರಿ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಹೋಂ ಸ್ಟೇಗಳ ಚಟುವಟಿಕೆಗಳ ಬಗ್ಗೆ ಕೊಡಗು ಪೊಲೀಸರು ತೀವ್ರ ನಿಗಾ ವಹಿಸಿದ್ದಾರೆ ಎನ್ನಲಾಗಿದೆ.

7 Arrested For Illegal Activity in Madikeri Homestay

ಪುಟ್ಟ ಜಿಲ್ಲೆ ಕೊಡಗಿನಲ್ಲಿ ಪ್ರವಾಸೋದ್ಯಮ ಬೆಳೆಯುತ್ತಿದ್ದಂತೆಯೇ ಪ್ರವಾಸಿಗರಿಗೆ ವಾಸ್ತವ್ಯ ಕಲ್ಪಿಸಲು ಹೋಂ ಸ್ಟೇಗಳೂ ಹೆಚ್ಚಾಗಿವೆ. ಕೊಡಗಿನಲ್ಲಿ ಸುಮಾರು 5000 ಹೋಂ ಸ್ಟೇಗಳಿದ್ದು ಇದರಲ್ಲಿ ಸರ್ಕಾರದ ಪರವಾನಗಿ ಹೊಂದಿರುವ ಹೋಂ ಸ್ಟೇ ಗಳು ಸಾವಿರದ ಆಸುಪಾಸಿನಲ್ಲಿವೆ. ಇತ್ತೀಚೆಗೆ ಹೋಂ ಸ್ಟೇಗಳಲ್ಲಿ ಅನೈತಿಕ ಚಟುವಟಿಕೆಯ ಆರೋಪ ಕೇಳಿ ಬಂದಿದ್ದು, ಅದಕ್ಕೆ ಪುಷ್ಟಿ ನೀಡುವಂತೆ ಮತ್ತೊಂದು ಘಟನೆ ನಡೆದಿದೆ.

English summary
Police have raided a homestay in Moornadu near Madikeri and arrested seven people today for allegedly involving illegal activity.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X