ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಇದ್ದಕ್ಕಿದ್ದಂತೆ ಹೆಚ್ಚಾದ ಪ್ರಕರಣ; ಕೊಡಗಿನ 6 ಪ್ರದೇಶಗಳು ಸೀಲ್ ಡೌನ್

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಜೂನ್ 25: ಕೊಡಗು ಜಿಲ್ಲೆಯಲ್ಲಿ ಬುಧವಾರ ಒಂದೇ ದಿನ 14 ಕೊರೊನಾ ವೈರಸ್ ಪ್ರಕರಣಗಳು ಕಾಣಿಸಿಕೊಂಡಿದ್ದು, ತಣ್ಣಗಿದ್ದ ಜಿಲ್ಲೆಯಲ್ಲಿ ಮತ್ತೆ ಆತಂಕ ಎದುರಾಗಿದೆ.
ಹೀಗೆ ಏಕಾಏಕಿ ಒಂದೇ ದಿನ 14 ಪಾಸಿಟಿವ್ ಪ್ರಕರಣಗಳು ದಾಖಲಾಗಿದ್ದರಿಂದ ಕೊಡಗಿನ ಆರು ಪ್ರದೇಶಗಳನ್ನು ನಿನ್ನೆ ರಾತ್ರಿಯೇ ಜಿಲ್ಲಾಡಳಿತ ಸೀಲ್ ‍ಡೌನ್ ಮಾಡಿದೆ.

Recommended Video

Covid update : almost 17000 cases in the last 24 hours in India | Oneindia Kannada

ಕೊಡಗಿನತ್ತ ಅಕ್ರಮವಾಗಿ ತೆರಳಲು ತೂಗುಸೇತುವೆ ಬಳಕೆ?ಕೊಡಗಿನತ್ತ ಅಕ್ರಮವಾಗಿ ತೆರಳಲು ತೂಗುಸೇತುವೆ ಬಳಕೆ?

ಮಡಿಕೇರಿ ನಗರದ ಓಂಕಾರೇಶ್ವರ ದೇವಾಸ್ಥಾನ ರಸ್ತೆ, ಪುಟಾಣಿ ನಗರ, ಡೇರಿ ಫಾರಂ, ಮಡಿಕೇರಿ ತಾಲೂಕಿನ ತಾಳತ್ ಮನೆ ಮತ್ತು ವಿರಾಜಪೇಟೆ ತಾಲೂಕಿನ ಬಿಟ್ಟಂಗಾಲ ಗ್ರಾಮದ ಪ್ರದೇಶವನ್ನು ಸಂಪೂರ್ಣ ಸೀಲ್ ‍ಡೌನ್ ಮಾಡಲಾಗಿದೆ. ಈ ಪ್ರದೇಶಗಳಲ್ಲಿ ರಸ್ತೆಗಳಿಗೆ ಬ್ಯಾರಿಕೇಡ್ ಹಾಕಿ ಬಂದ್ ಮಾಡಿ ಪೊಲೀಸರನ್ನು ನಿಯೋಜಿಸಲಾಗಿದೆ.

Six Areas Seal Down In Kodagu As 14 Cases Found In One Day

ಸೀಲ್ ‍ಡೌನ್ ಆದ ಪ್ರದೇಶಗಳಿಂದ ಜನರು ಹೊರ ಹೋಗದಂತೆ ಮತ್ತು ಹೊರಗಿನವರು ಒಳಗೆ ಬರದಂತೆ ಕಟ್ಟುನಿಟ್ಟಿನ ಕ್ರಮವನ್ನು ಜಿಲ್ಲಾಡಳಿತ ಕೈಗೊಂಡಿದೆ. ಇಷ್ಟು ದಿನ ಕೊರೊನಾ ವೈರಸ್ ನಿಂದ ಮುಕ್ತವಾಗಿ ನಿಟ್ಟುಸಿರುಬಿಟ್ಟಿದ್ದ ಜಿಲ್ಲೆಯಲ್ಲಿ ಮತ್ತೆ ವೈರಸ್ ಹಾವಳಿ ಆರಂಭವಾಗಿರುವುದು ಜಿಲ್ಲೆಯ ಜನತೆಯಲ್ಲಿ ಭಯ ಮೂಡಿಸಿದೆ.

English summary
In Kodagu district, 14 coronavirus cases were recorded on Wednesday and six areas were sealed down by the district last night,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X