• search
 • Live TV
ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ಕೊಡಗು; ಅಮೆರಿಕದಿಂದ ಬಂತು ಆಕ್ಸಿಜನ್ ಕಾನ್ಸ್‌ನ್‌ಟ್ರೇಟರ್

By ಮಡಿಕೇರಿ ಪ್ರತಿನಿಧಿ
|
Google Oneindia Kannada News

ಮಡಿಕೇರಿ, ಮೇ 23; ಅಮೆರಿಕದಿಂದ ಕೊಡಗು ಜಿಲ್ಲೆಗೆ ಆಕ್ಸಿಜನ್ ಕಾನ್ಸ್‌ನ್‌ಟ್ರೇಟರ್ ಕೊಡುಗೆಯಾಗಿ ನೀಡಲಾಗಿದೆ. ಕೊಡಗು ಜಿಲ್ಲಾ ಕೋವಿಡ್ ಆಸ್ಪತ್ರೆಗೆ 5 ಮತ್ತು 10 ಲೀಟರ್ ಸಾಮರ್ಥ್ಯದ 53 ಆಕ್ಸಿಜನ್ ಕಾನ್ಸ್‌ನ್‌ಟ್ರೇಟರ್ ನೀಡಲಾಗಿದೆ.

ನ್ಯೂಜೆರ್ಸಿಯಲ್ಲಿ ಮನೋ ವೈದ್ಯರಾಗಿ ಕಾರ್ಯ ನಿರ್ವಹಿಸುತ್ತಿರುವ ಸಿದ್ದಾಪುರ ಬಳಿಯ ಗುಹ್ಯ ಗ್ರಾಮದ ಡಾ. ಚೊಟ್ಟೇರ ಶೋಭಾ ಟುಟ್ಟು ಹಾಗೂ ಅಮೆರಿಕದಲ್ಲಿನ gofundme.org ವತಿಯಿಂದ ಆಕ್ಸಿಜನ್ ಕಾನ್ಸ್‌ನ್‌ಟ್ರೇಟರ್‌ಗಳನ್ನು ಕೊಡಗೆಯಾಗಿ ಕೊಡಲಾಗಿದೆ.

224 ಆಕ್ಸಿಜನ್ ಎಕ್ಸ್‌ಪ್ರೆಸ್‌ ರೈಲು ಒದಗಿಸಿದ ಪ್ರಾಣವಾಯು ಎಷ್ಟು? 224 ಆಕ್ಸಿಜನ್ ಎಕ್ಸ್‌ಪ್ರೆಸ್‌ ರೈಲು ಒದಗಿಸಿದ ಪ್ರಾಣವಾಯು ಎಷ್ಟು?

ನಾಪೋಕ್ಲು ಗ್ರಾಮದ ಡಾ.ಸಣ್ಣುವಂಡ ಕಾವೇರಪ್ಪ, ವೈದ್ಯಕೀಯ ವಿಜ್ಞಾನ ಸಂಸ್ಥೆಯ ನಿರ್ದೇಶಕರಾದ ಡಾ. ಕಾರ್ಯಪ್ಪ, ಡಾ. ವಿಶಾಲ್ ಕುಮಾರ್, ಡಾ. ಮಂಜುನಾಥ್, ಡಾ. ರೂಪೇಶ್ ಗೋಪಾಲ್ ಆಕ್ಸಿಜನ್ ಕಾನ್ಸ್‌ನ್‌ಟ್ರೇಟರ್ ಹಸ್ತಾಂತರದ ಸಂದರ್ಭದಲ್ಲಿ ಇದ್ದರು.

ಬೆಂಗಳೂರಿನ 'ಆಕ್ಸಿಜನ್ ಮ್ಯಾನ್' ಯತೀಶ್ ಬಗ್ಗೆ ತಿಳಿದಿದೆಯೇ? ಬೆಂಗಳೂರಿನ 'ಆಕ್ಸಿಜನ್ ಮ್ಯಾನ್' ಯತೀಶ್ ಬಗ್ಗೆ ತಿಳಿದಿದೆಯೇ?

ಅವರೇಮಾದಂಡ ಕೆ.ಮೊಣ್ಣಪ್ಪ (ನಿವೃತ್ತ ಐಎಎಸ್ ಅಧಿಕಾರಿ) ಅವರ ಪ್ರಯತ್ನದಿಂದ ಅಮೆರಿಕದಿಂದ ಈ ಉಪಕರಣಗಳನ್ನು ತರಿಸಿಕೊಳ್ಳಲಾಗಿದೆ. ಕೊಡಗು ಜಿಲ್ಲೆಯ ಕೋವಿಡ್ ಸೋಂಕಿತರಿಗೆ ಒಳಿತಾಗಲಿ ಎಂಬ ಉದ್ದೇಶದಿಂದ ಡಾ.ಚೊಟ್ಟೇರ ಶೋಭಾ ಟುಟ್ಟು ಈ ಉಪಕರಣಗಳನ್ನು ಕಳುಹಿಸಿದ್ದಾರೆ ಎಂದು ಡಾ. ಸಣ್ಣುವಂಡ ಕಾವೇರಪ್ಪ ತಿಳಿಸಿದ್ದಾರೆ.

ಕೋವಿಡ್ ಹೆಚ್ಚಿರುವ ಜಿಲ್ಲೆಗಳಿಗೆ ಆಕ್ಸಿಜನ್ ಕಾನ್ಸಂಟ್ರೇಟರ್: ಸುಧಾಕರ್ ಕೋವಿಡ್ ಹೆಚ್ಚಿರುವ ಜಿಲ್ಲೆಗಳಿಗೆ ಆಕ್ಸಿಜನ್ ಕಾನ್ಸಂಟ್ರೇಟರ್: ಸುಧಾಕರ್

1984ರಲ್ಲಿ ದೆಹಲಿಯ ಮೌಲಾನಾ ಅಜಾದ್ ವೈದ್ಯಕೀಯ ಕಾಲೇಜಿನಲ್ಲಿ ವೈದ್ಯ ವಿದ್ಯಾರ್ಥಿಗಳಾಗಿ ವ್ಯಾಸಂಗ ಮಾಡುತ್ತಿದ್ದ ಡಾ.ಶುಭ ವರ್ಮ, ಮೀರಾ ವೆಲ್ಸ್ ಇತರ ಭಾರತೀಯ ವೈದ್ಯರು ಇದಕ್ಕೆ ಸಹಕಾರ ನೀಡಿದ್ದಾರೆ.

   Karnatakaದಲ್ಲಿ ಈಗ ಎಲ್ಲೆಲ್ಲಿ , ಎಷ್ಟು ಲಸಿಕೆ ಉಳಿದಿದೆ ? | Oneindia Kannada

   ಕೊಡಗು ಜಿಲ್ಲಾಧಿಕಾರಿ ಚಾರುಲತ ಸೋಮಲ್ ಸೇರಿದಂತೆ ಅಮೆರಿಕದಲ್ಲಿರುವ ವೈದ್ಯರು ವಾಟ್ಸ್ಆಪ್ ಗುಂಪು ಮಾಡಿ, ಹಲವು ಭಾರಿ ಚರ್ಚಿಸಿ ಈ ಉಪಕರಣಗಳನ್ನು ತರಿಸಿಕೊಳ್ಳಲಾಗಿದೆ ಎಂದು ಡಾ. ಕಾವೇರಪ್ಪ ಹೇಳಿದ್ದಾರೆ.

   English summary
   53 oxygen concentrator donated to Kodagu district Covid hospital from America.
   ತಾಜಾ ಸುದ್ದಿ ತಕ್ಷಣ ಪಡೆಯಿರಿ
   Enable
   x
   Notification Settings X
   Time Settings
   Done
   Clear Notification X
   Do you want to clear all the notifications from your inbox?
   Settings X