ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ರಾಜಾಸೀಟ್ ಅಭಿವೃದ್ಧಿಗೆ 455 ಲಕ್ಷ ರೂ. ವೆಚ್ಚದ ಯೋಜನೆ

|
Google Oneindia Kannada News

ಮಡಿಕೇರಿ, ನವೆಂಬರ್ 09: ಮಂಜಿನ ನಗರಿ ಮಡಿಕೇರಿಗೆ ಮುದ ನೀಡುವ ರಾಜಾಸೀಟ್ ಸೇರಿದಂತೆ ಸುತ್ತಮುತ್ತಲಿನ ಪ್ರದೇಶಗಳ ಅಭಿವೃದ್ಧಿಗೆ ಪ್ರವಾಸೋದ್ಯಮ ಇಲಾಖೆ ಮುಂದಾಗಿದ್ದು, ಇದಕ್ಕಾಗಿ 455 ಲಕ್ಷ ರೂ.ಗಳ ಯೋಜನೆ ತಯಾರಾಗಿದೆ.

ಈ ಯೋಜನೆಯಲ್ಲಿ ರಾಜಾಸೀಟಿನ ಸುತ್ತಮುತ್ತಲಿನ ಖಾಲಿ ಸ್ಥಳಗಳಲ್ಲಿ ವಿವಿಧ ಹೂವಿನ ಗಿಡ ಮತ್ತು ಮರಗಳನ್ನು ನೆಡುವ ಮೂಲಕ ಉದ್ಯಾನಕ್ಕೆ ಹೊಸ ಕಳೆ ನೀಡುವ ಕಾರ್ಯ ಶೀಘ್ರದಲ್ಲಿಯೇ ಆರಂಭವಾಗಲಿದೆ. ಈಗಾಗಲೇ ರಾಜಾಸೀಟ್ ಉದ್ಯಾನ ವನಕ್ಕೆ ಹೊಂದಿಕೊಂಡಿರುವ ಜಾಗದಲ್ಲಿ ಸಮಗ್ರ ಉದ್ಯಾನ ವನಗಳ ಅಭಿವೃದ್ಧಿಗಾಗಿ ಪ್ರವಾಸೋದ್ಯಮ ಇಲಾಖೆ ವತಿಯಿಂದ 455 ಲಕ್ಷ ರೂ.ಗಳಿಗೆ ಕ್ರಿಯಾ ಯೋಜನೆಗೆ ಅನುಮೋದನೆಯಾಗಿದೆ.

 ಕೊಡಗಿನಲ್ಲೀಗ ಪ್ರವಾಸೋದ್ಯಮದ ಅಭಿವೃದ್ಧಿಯತ್ತ ಚಿತ್ತ ಕೊಡಗಿನಲ್ಲೀಗ ಪ್ರವಾಸೋದ್ಯಮದ ಅಭಿವೃದ್ಧಿಯತ್ತ ಚಿತ್ತ

ಅದರಲ್ಲಿ 369 ಲಕ್ಷ ರೂ.ಗಳನ್ನು ಲೋಕೋಪಯೋಗಿ ಇಲಾಖೆಗೆ ಬಿಡುಗಡೆ ಮಾಡಿ ಕಾಮಗಾರಿಗಳನ್ನು ಕೈಗೊಳ್ಳಲು ಆಡಳಿತಾತ್ಮಕ ಅನುಮೋದನೆ ನೀಡಲಾಗಿದೆ. ಅದರಂತೆ ಲೋಕೋಪಯೋಗಿ ಇಲಾಖೆಯರವರು ಅನುಮೋದಿತ ಅಂದಾಜು ಪಟ್ಟಿಯಂತೆ ಕಾಮಗಾರಿ ಕೈಗೊಳ್ಳಲು ಟೆಂಡರ್ ಕರೆದು ಅನುಮೋದಿತ ಸಂಸ್ಥೆಗೆ ನೀಡಲಾಗಿದೆ.

 ಪೊದೆ, ಹೂಬಳ್ಳಿ ಸಸ್ಯಗಳ ನಾಟಿ

ಪೊದೆ, ಹೂಬಳ್ಳಿ ಸಸ್ಯಗಳ ನಾಟಿ

ರಾಜಾಸೀಟಿನಲ್ಲಿ ನಡೆಸಲು ಉದ್ದೇಶಿಸಿರುವ ಉದ್ಯಾನವನದ ಕಾಮಗಾರಿಯಲ್ಲಿ ಪೊದೆ ಸಸ್ಯಗಳಾದ ಡ್ರೀಸಿನಾ, ಹೇಮೀಲಿಯಾ, ಕೇಶಿಯಾ, ಟಿಕೋಮಾ, ಸ್ಟೇಫೀಲಿರ ಇತ್ಯಾದಿ 21300 ಸಸ್ಯಗಳನ್ನು ನಾಟಿ ಮಾಡಲು, ಇಳಿಜಾರು ಪ್ರದೇಶದಲ್ಲಿ ಮಣ್ಣಿನ ಸವಕಳಿಯನ್ನು ತಡೆಗಟ್ಟಲು ನೆಲದಲ್ಲಿ ಹಬ್ಬುವ ಹಾಗೂ ಬಳ್ಳಿಗಳ ಜಾತಿಯ ಗಿಡಗಳಾದ ಲಂಟನಾ, ವರ್ಬಿನಾ, ಗಜೇನಿಯಾ, ಬೋಗನ್ ವಿಲ್ಲಾ, ಸೈಡರ್ ಲಿಲ್ಲಿ ಇತ್ಯಾದಿ 25 ಸಾವಿರ ಸಂಖ್ಯೆಯ ಗಿಡಗಳನ್ನು ನೆಡಲು, ಹಾಗೆಯೇ ಉದ್ಯಾನವನದಲ್ಲಿ ಹೂವಿನ ಮರಗಳಾದ ಅಶೋಕ, ಸಂಪಿಗೆ, ಪ್ಲೋಮೀರಿಯಾ, ತಬೋಬಿಯಾ, ಸ್ಪೇತೋಡಿಯಾ, ಲಗೋಸ್ಟ್ರೀಮಿಯಾ ಸೇರಿದಂತೆ 1265 ಮರಗಳನ್ನು ಬೆಳೆಸಲು ಉದ್ದೇಶಿಸಲಾಗಿದೆ.

 ಹುಲ್ಲು ಹಾಸು ನಿರ್ಮಾಣ

ಹುಲ್ಲು ಹಾಸು ನಿರ್ಮಾಣ

ರಾಜಾಸೀಟ್ ವ್ಯಾಪ್ತಿಯ 17222 ಚ.ಅಡಿ ವಿಸ್ತೀರ್ಣದಲ್ಲಿ ಸ್ಥಳೀಯ ಹವಾಗುಣಕ್ಕೆ ಹೊಂದಿಕೊಳ್ಳುವ ಬರ್ಮುಡಾ, ಕೆಂಟುಕಿ ಬ್ಲೂ, ಸೈಟೋಪೋರಮ್ ಇತ್ಯಾದಿ ಹುಲ್ಲು ಹಾಸು (ಲಾನ್) ಮಾಡಲಾಗುತ್ತಿದೆ. ಜತೆಗೆ ಉದ್ಯಾನವನದ ಸುತ್ತಲೂ ಅಂದಾಜು 1.350 ಕಿ.ಮೀಗಳ ಉದ್ದದ ಪಾಥ್ ವೇ (ನಡೆದಾಡುವ ರಸ್ತೆ)ಯನ್ನು ಸಾದರಳ್ಳಿ, ಶಿರಾ, ಕೋಬಲ್ ಕಲ್ಲುಗಳಿಂದ ನಿರ್ಮಿಸಲಾಗುವುದು. ಪಾಥ್ ವೇಯ ಎರಡು ಬದಿಗಳಲ್ಲಿ ಮಣ್ಣು ಸವಕಳಿಯಾಗದಂತೆ ತಡೆಗೋಡೆ ಹಾಗೂ ರೈಲಿಂಗ್ಸ್ (ರಕ್ಷಣಾತ್ಮಕ ಕಂಬಿಗಳು)ನ್ನು ಮಾಡಲು ಯೋಜನೆಯಲ್ಲಿ ಸೇರಿಸಲಾಗಿದೆ.

ಪ್ರತಿಯೊಬ್ಬರು ನೋಡಲೇಬೇಕಾದ ಕೊಡಗಿನ ಟಾಪ್‌ 20 ಪ್ರವಾಸಿ ತಾಣಗಳುಪ್ರತಿಯೊಬ್ಬರು ನೋಡಲೇಬೇಕಾದ ಕೊಡಗಿನ ಟಾಪ್‌ 20 ಪ್ರವಾಸಿ ತಾಣಗಳು

 ಮೆಟ್ಟಲು, ತಡೆಗೋಡೆ ನಿರ್ಮಾಣ

ಮೆಟ್ಟಲು, ತಡೆಗೋಡೆ ನಿರ್ಮಾಣ

ಇಲ್ಲಿ ಇಳಿಜಾರಿನಲ್ಲಿ ಮೆಟ್ಟಲುಗಳು ಹಾಗೂ ತಡೆಗೋಡೆಗಳನ್ನು ಎರಡು ಕಡೆ ನಿರ್ಮಿಸುವುದು. ಜತೆಗೆ ಲಭ್ಯವಿರುವ ಉದ್ಯಾನವನ ಎತ್ತರದ ಗುಡ್ಡದಲ್ಲಿ ಮೂಲ ಸ್ವರೂಪಗಳಿಗೆ ಧಕ್ಕೆಯಾಗದಂತೆ ಎರಡು ವೀಕ್ಷಣಾ ಗೋಪುರಗಳನ್ನು ಹಾಗೂ ಮಳೆ, ಬಿಸಿಲಿನಲ್ಲಿ ವಿಶ್ರಾಂತಿಗಾಗಿ ಮೂರು ಅಲಂಕಾರಿಕ ಮಂಟಪಗಳನ್ನು, ಉದ್ಯಾನವನದ ವಿವಿಧ ಭಾಗಗಳಲ್ಲಿ ಅಲಂಕಾರಿಕ ಹೂವಿನ ಬಳ್ಳಿಗಳನ್ನು ಹಬ್ಬಿಸಲು ಕಲ್ಲಿನ ಎಂಟು ಪೆರ್ಗೊಲಾಗಳನ್ನು ನಿರ್ಮಿಸಲಾಗುವುದು. ಉದ್ಯಾನವನದಲ್ಲಿ ನೈಸರ್ಗಿಕವಾಗಿರುವ ಪ್ರದೇಶದಲ್ಲಿ ಮಕ್ಕಳ ಸಣ್ಣ ಆಟದ ಉದ್ಯಾನವನ್ನು ನಿರ್ಮಿಸಲಾಗುವುದು.

Recommended Video

Muniratna vs Kusuma : RR Nagar ಕಣದಲ್ಲಿ ಗೆಲ್ಲೋದು ಯಾರು, ಎರಡೂ ಪಕ್ಷಗಳ ಜಿದ್ದಾಜಿದ್ದಿ | Oneindia Kannada
 ವಿದ್ಯುದ್ದೀಪ, ಸಿ.ಸಿ ಕ್ಯಾಮರಾ ಅಳವಡಿಕೆ

ವಿದ್ಯುದ್ದೀಪ, ಸಿ.ಸಿ ಕ್ಯಾಮರಾ ಅಳವಡಿಕೆ

ಸಾರ್ವಜನಿಕರ ವಿಶ್ರಾಂತಿಗಾಗಿ 25 ಆಸನಗಳ ವ್ಯವಸ್ಥೆ ಹಾಗೂ ಮರದ ಸುತ್ತಲೂ ಕೂರಲು ಆಸನದ ವ್ಯವಸ್ಥೆ, ಉದ್ಯಾನವನದಲ್ಲಿ ಮಕ್ಕಳ ಮನೋರಂಜನೆಗಾಗಿ ವಿವಿಧ ಪ್ರಾಣಿಗಳ ಕಲಾಕೃತಿಗಳನ್ನು ಹಾಗೂ ಶಿಲ್ಪಕಲಾಕೃತಿಗಳನ್ನು ಅಳವಡಿಸುವುದು, ವಿವಿಧ ಅಲಂಕಾರಿಕ ಹೂವಿನ ಕುಂಡಗಳು, ಕಸದ ಬುಟ್ಟಿ, ಸೂಚನಾ ಫಲಕಗಳು, ಪ್ರವಾಸಿ ಮಾಹಿತಿ ಫಲಕ ಇತ್ಯಾದಿಗಳನ್ನು ಅಳವಡಿಸಲಾಗುವುದು. ಉದ್ಯಾವನದಲ್ಲಿ ಅಲಂಕಾರಿಕ ವಿದ್ಯುತ್ ದೀಪ ಅಳವಡಿಕೆ, ನೀರಾವರಿ ಅಳವಡಿಕೆ ಹಾಗೂ ಸಿ.ಸಿ ಕ್ಯಾಮರಾವನ್ನು ಅಳವಡಿಸಲು ಯೋಜನೆ ತಿಳಿಸಲಾಗಿದೆ.

English summary
The tourism department has taken steps to develop Rajaseet and its surrounding tourists places in madikeri and estimated 455 Lakh Rupees Cost Planning,
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X