• search
  • Live TV
ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

Madikeri Dasara 2022 : ಮಡಿಕೇರಿ ದಸರಾ ಲಾಂಛನ ಲೋಕಾರ್ಪಣೆ

|
Google Oneindia Kannada News

ಮಡಿಕೇರಿ, ಸೆಪ್ಟೆಂಬರ್ 12: 2022ನೇ ಸಾಲಿನ ಮಡಿಕೇರಿ ದಸರಾ ಸಿದ್ಧತೆಗಳು ಆರಂಭಗೊಂಡಿವೆ. ದಸರಾದ ಲಾಂಛನ ಮತ್ತು ವೆಬ್‌ಸೈಟ್ ಬಿಡುಗಡೆ ಮಾಡಲಾಗಿದೆ.

ಮಂಗಳವಾರ ಮಡಿಕೇರಿ ನಗರಸಭೆ ಅಧ್ಯಕ್ಷರಾದ ಅನಿತಾ ಪೂವಯ್ಯ, ಪ್ರಧಾನ ಕಾರ್ಯದರ್ಶಿ ರಾಜೇಶ್ ಯಲ್ಲಪ್ಪ, ಕಾರ್ಯಾಧ್ಯಕ್ಷರಾದ ಕೆ. ಎಸ್. ರಮೇಶ್ ಲಾಂಛನ ಬಿಡುಗಡೆ ಮಾಡಿದರು.

ಮೈಸೂರು ದಸರಾ ವಿಶೇಷ; ದಸರಾ ಗಜಪಡೆ ಸುಂದರವಾಗಿ ಕಾಣುವುದು ಹೇಗೆ? ಮೈಸೂರು ದಸರಾ ವಿಶೇಷ; ದಸರಾ ಗಜಪಡೆ ಸುಂದರವಾಗಿ ಕಾಣುವುದು ಹೇಗೆ?

ಸೆಪ್ಟೆಂಬರ್ 2ರಂದು ಸಾಂಪ್ರದಾಯಿಕ ಪೂಜೆಯೊಂದಿಗೆ ಮಡಿಕೇರಿ ಜನೋತ್ಸವ ದಸರಾ ಆಚರಣೆಗೆ ಚಾಲನೆ ಕೊಡಲಾಗಿದೆ. ದಸರಾ ಸಮಿತಿ ಕಾರ್ಯಾಧ್ಯಕ್ಷ ಕೆ. ಎಸ್. ರಮೇಶ್ ಮಾತನಾಡಿ, "ಈ ಬಾರಿ ವಿಜೃಂಭಣೆಯಿಂದ ದಸರಾ ಹಬ್ಬವನ್ನು ಆಚರಣೆ ಮಾಡಲಾಗುತ್ತದೆ. ಸರ್ಕಾರ 1 ಕೋಟಿ ರೂ. ಅನುದಾನ ನೀಡಿದೆ" ಎಂದು ಹೇಳಿದ್ದಾರೆ.

Breaking: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ದಸರಾ ಉದ್ಘಾಟನೆBreaking: ರಾಷ್ಟ್ರಪತಿ ದ್ರೌಪದಿ ಮುರ್ಮು ಅವರಿಂದ ದಸರಾ ಉದ್ಘಾಟನೆ

ಅನುದಾನ ಹಂಚಿಕೆ ಬಿಕ್ಕಟ್ಟು; ಮಡಿಕೇರಿ ದಸರಾಕ್ಕೆ ನೀಡಿರುವ ಅನುದಾನ ಹಂಚಿಕೆಯಲ್ಲಿ ಬಿಕ್ಕಟ್ಟು ಉಂಟಾಗಿದೆ. ಸರ್ಕಾರ ದಸರಾ ಆಚರಣೆಗೆ 1 ಕೋಟಿ ರೂ. ಅನುದಾನ ನೀಡಿದೆ. ಆದರೆ ದಶಮಂಟಪ- ನಾಲ್ಕು ಕರಗಗಳಿಗೆ ಹೆಚ್ಚಿನ ಅನುದಾನ ನೀಡಬೇಕು ಎಂಬ ಬೇಡಿಕೆ ಕೇಳಿ ಬಂದಿದೆ. ಮಂಟಪಗಳಿಗೆ ತಲಾ 3.30 ಲಕ್ಷ ಮತ್ತು ಕರಗಗಳಿಗೆ 2 ಲಕ್ಷ ದಸರಾ ಸಮಿತಿ ಕಾರ್ಯಾಧ್ಯಕ್ಷ ಕೆ. ಎಸ್. ರಮೇಶ್ ಘೋಷಣೆ ಮಾಡಿದ್ದರು.

ದಕ್ಷಿಣ ಕನ್ನಡ ಜಿಲ್ಲೆ -ಮಡಿಕೇರಿ ಗಡಿಭಾಗದಲ್ಲಿ ಭೂಕಂಪಕ್ಕೆ ಕಾರಣವೇನು? ಫ್ರೊ.ಕೆ.ವಿ.ರಾವ್ ಮಾಹಿತಿ ದಕ್ಷಿಣ ಕನ್ನಡ ಜಿಲ್ಲೆ -ಮಡಿಕೇರಿ ಗಡಿಭಾಗದಲ್ಲಿ ಭೂಕಂಪಕ್ಕೆ ಕಾರಣವೇನು? ಫ್ರೊ.ಕೆ.ವಿ.ರಾವ್ ಮಾಹಿತಿ

ಕಳೆದ ವರ್ಷ ಸಹ ಮಡಿಕೇರಿ ದಸರಾಕ್ಕೆ ಸರ್ಕಾರ 1 ಕೋಟಿ ರೂ. ಅನುದಾನ ಮಂಜೂರು ಮಾಡಿತ್ತು. ಶಾಸಕರ ಸೂಚನೆಯಂತೆ ಇದರಲ್ಲಿ 75 ಲಕ್ಷ ರೂ.ಗಳನ್ನು ಗಾಂಧಿ ಮೈದಾನದಲ್ಲಿ ಸಭಾಂಗಣ ನಿರ್ಮಾಣ ಮಾಡಲು ಬಳಕೆ ಮಾಡಲಾಗಿದೆ. ಕಾಮಗಾರಿ ನಡೆಯುತ್ತಿದ್ದು, ಸೆ. 25ರೊಳಗೆ ಪೂರ್ಣಗೊಳ್ಳುವ ನಿರೀಕ್ಷೆ ಇದೆ.

ಮಂಟಪಗಳಿಗೆ 3.50 ಲಕ್ಷ, ಕರಗಗಳಿಗೆ 2.25 ಲಕ್ಷ ರೂ. ನೀಡುವ ಭರವಸೆಯನ್ನು ಕೆ. ಎಸ್. ರಮೇಶ್ ನೀಡಿದ್ದರು. ಕಲಾಕೃತಿ ಸಿದ್ಧಪಡಿಸಿ ಹೆಚ್ಚು ಹಣ ಖರ್ಚಾಗುತ್ತದೆ. ಅನುದಾನ ಕಡಿತ ಮಾಡಿದಲ್ಲಿ ಪ್ರತಿಭಟನೆ ಮಾಡಬೇಕಾಗುತ್ತದೆ ಎಂದು ದಶಮಂಟಪ ಸಮಿತಿ ಅಧ್ಯಕ್ಷ ಮಜು ಮಂಜುನಾಥ್ ಹೇಳಿದ್ದಾರೆ.

English summary
Preparations for the Madikeri dasara 2022 began. Dasara executive committee released logo for the dasara.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X