ಮಡಿಕೇರಿ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
Oneindia App Download

ಕೊಡಗು ಜಿಲ್ಲೆಯಲ್ಲಿ ಮಳೆ ಆರಂಭ, ಭಾನುವಾರ ಸುರಿದ ಮಳೆ ಎಷ್ಟು?

|
Google Oneindia Kannada News

ಮಡಿಕೇರಿ, ಜೂನ್ 10 : ಕೊಡಗು ಜಿಲ್ಲೆಯಲ್ಲಿ ಮಳೆ ಆರಂಭವಾಗಿದೆ. ಭಾನುವಾರ ಜಿಲ್ಲೆಯಲ್ಲಿ 2.59 ಮಿ.ಮೀ ಮಳೆಯಾಗಿದೆ. ಕಳೆದ ವರ್ಷ ಇದೇ ದಿನ 93.22 ಮಿ.ಮೀ.ಮಳೆಯಾಗಿತ್ತು.

ಸೋಮವಾರ ಬೆಳಗ್ಗೆ 8.30ಕ್ಕೆ ಕೊನೆಗೊಂಡಂತೆ ಕಳೆದ 24 ಗಂಟೆಗಳ ಅವಧಿಯಲ್ಲಿ ಕೊಡಗು ಜಿಲ್ಲೆಯಲ್ಲಿ ಸರಾಸರಿ 2.59 ಮಿ.ಮೀ ಮಳೆಯಾಗಿದೆ. ಜನವರಿಯಿಂದ ಇಲ್ಲಿಯ ತನಕ 193.28 ಮಿ.ಮೀ ಮಳೆ ಜಿಲ್ಲೆಯಲ್ಲಿ ಆಗಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 656.93 ಮಿ.ಮೀ ಮಳೆಯಾಗಿತ್ತು.

ಜ್ಯೋತಿಷಿಗಳ ಪ್ರಕಾರ, ಕೊಡಗಿನಲ್ಲಿ ಈ ಬಾರಿಯೂ ಮಳೆ ಅಬ್ಬರಿಸಲಿದೆ!ಜ್ಯೋತಿಷಿಗಳ ಪ್ರಕಾರ, ಕೊಡಗಿನಲ್ಲಿ ಈ ಬಾರಿಯೂ ಮಳೆ ಅಬ್ಬರಿಸಲಿದೆ!

ಮಡಿಕೇರಿ ತಾಲೂಕಿನಲ್ಲಿ ಸರಾಸರಿ ಮಳೆ 2.45 ಮಿ.ಮೀ. ವಿರಾಜಪೇಟೆಯಲ್ಲಿ 4.40 ಮಿ.ಮೀ. ಸೋಮವಾರಪೇಟೆಯಲ್ಲಿ 0.93 ಮಿ.ಮೀ. ಮಳೆಯಾಗಿದೆ. ಮಡಿಕೇರಿ ಕಸಬಾ ಹೋಬಳಿಯಲ್ಲಿ 3, ನಾಪೋಕ್ಲು 2, ಭಾಗಮಂಡಲ 4.80, ಹುದಿಕೇರಿ 1.20, ಪೊನ್ನಂಪೇಟೆ 12.20, ಕುಶಾಲನಗರದಲ್ಲಿ 0.40 ಮಿ.ಮೀ. ಮಳೆ ಸುರಿದಿದೆ.

ಕೊಡಗಿನಲ್ಲಿ ಆತಂಕದ ನಡುವೆಯೇ ಗದ್ದೆಗಿಳಿದ್ದಾರೆ ರೈತರುಕೊಡಗಿನಲ್ಲಿ ಆತಂಕದ ನಡುವೆಯೇ ಗದ್ದೆಗಿಳಿದ್ದಾರೆ ರೈತರು

2.59 millimeter rain in Kodagu, Karnataka

ನೀರಿನ ಮಟ್ಟ : ಹಾರಂಗಿ ಜಲಾಶಯದ ಗರಿಷ್ಠ ಮಟ್ಟ 2,859 ಅಡಿ. ಇಂದಿನ ನೀರಿನ ಮಟ್ಟ 2804.97 ಅಡಿ. ಕಳೆದ ವರ್ಷ ಇದೇ ದಿನ 2799.44 ಅಡಿ ನೀರು ಇತ್ತು. ಜಲಾಶಯಕ್ಕೆ 64 ಕ್ಯುಸೆಕ್ ಒಳಹರಿವು ಇದ್ದು, ಹೊರ ಹರಿವು 60 ಕ್ಯುಸೆಕ್, ನಾಲೆಗೆ 50 ಕ್ಯುಸೆಕ್.

ಮಳೆಗಾಲ ಆರಂಭಕ್ಕೂ ಮುನ್ನ ಕೊಡಗಿಗೆ ಬಂದ ಎನ್‌ಡಿಆರ್‌ಎಫ್ ಪಡೆಮಳೆಗಾಲ ಆರಂಭಕ್ಕೂ ಮುನ್ನ ಕೊಡಗಿಗೆ ಬಂದ ಎನ್‌ಡಿಆರ್‌ಎಫ್ ಪಡೆ

ಮನೆಗಳನ್ನು ಹಸ್ತಾಂತರ ಮಾಡಿ : ಕೊಡಗು ಜಿಲ್ಲೆಯಲ್ಲಿ ಕಳೆದ ವರ್ಷ ಸುರಿದ ಮಳೆಯಿಂದಾಗಿ ಮನೆ ಕಳೆದುಕೊಂಡವರಿಗೆ ನೀಡಲಾಗುವ ಮನೆಗಳ ವಿತರಣೆಗೆ ತಯಾರಿಸಿರುವ ಪಟ್ಟಿಗಳನ್ನು ಎಲ್ಲಾ ಗ್ರಾಮ ಪಂಚಾಯಿತಿಗಳಲ್ಲಿ ಎರಡು ದಿನದೊಳಗೆ ಪ್ರಕಟಿಸಲು ಕೊಡಗು ಜಿಲ್ಲಾ ಉಸ್ತುವಾರಿ ಸಚಿವ ಸಾ.ರಾ.ಮಹೇಶ್ ಸೂಚನೆ ನೀಡಿದ್ದಾರೆ.

English summary
Kodagu district received 2.59 millimeter rain on June 9, 2019. National Disaster Response Force (NDRF) team arrived to Kodagu ahead of monsoon session.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X