ತಲಕಾವೇರಿಯಲ್ಲಿ ಕೇರಳ ಯುವಕರ ಪುಂಡಾಟ; 10 ಮಂದಿ ಬಂಧನ
ಮಡಿಕೇರಿ, ನವೆಂಬರ್ 16; ತಲಕಾವೇರಿ ಕ್ಷೇತ್ರದ ಸ್ವಾಗತ ಕಮಾನಿನ ಬಳಿ ಯುವತಿಯರನ್ನು ಕೇರಳ ಮೂಲದ ಯುವಕರ ಗುಂಪೊಂದು ಚುಡಾಯಿಸುತ್ತಾ ನಿಂತಿದ್ದು, ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಸ್ಥಳೀಯರ ಮೇಲೆ ಆ ಯುವಕರು ಹಲ್ಲೆ ನಡೆಸಿರುವ ಘಟನೆ ಭಾನುವಾರ ಸಂಜೆ ನಡೆದಿದೆ.
ಪ್ರವಾಸಕ್ಕೆಂದು ಬಂದಿದ್ದ ಕೇರಳದ ಯುವಕರು ಮಾಸ್ಕ್ ಧರಿಸಿರಲಿಲ್ಲ. ಮಾಸ್ಕ್ ಧರಿಸುವಂತೆ ಸಲಹೆ ನೀಡಿದ ಸಮಿತಿ ಅಧ್ಯಕ್ಷ ಬಿ.ಎಸ್.ತಿಮ್ಮಯ್ಯ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದಾರೆ. ಅಲ್ಲದೇ, ಪ್ರಶ್ನಿಸಲು ಮುಂದಾದ ವ್ಯಕ್ತಿಯೊಬ್ಬರ ಕೈ ಬೆರಳನ್ನು ಮುರಿದಿದ್ದಾರೆ ಎನ್ನಲಾಗಿದೆ.
ಬೆಂಗಳೂರು; ಬಡಿದಾಡಿಕೊಂಡ ಮನೆ ಮಾಲೀಕ, ಬಾಡಿಗೆದಾರ!
ಅಷ್ಟಲ್ಲದೇ ಇವರು ತಲಕಾವೇರಿ ಬಳಿ ಯುವತಿಯರನ್ನು ಚುಡಾಯಿಸುತ್ತಿದ್ದರು. ಈ ಬಗ್ಗೆ ಕ್ಷೇತ್ರದ ಸೆಕ್ಯುರಿಟಿ ಗಾರ್ಡ್ ಎಚ್ಚರಿಕೆ ನೀಡಿದ್ದು, ಅವರ ಮೇಲೂ ಹರಿಹಾಯ್ದಿದ್ದಾರೆ. ಕ್ಷೇತ್ರಕ್ಕೆ ಭೇಟಿ ನೀಡಿದ್ದ ಕೆಲವು ಸ್ಥಳೀಯರ ಮೇಲೂ ಹಲ್ಲೆಗೆ ಮುಂದಾಗಿ ಪುಂಡಾಟಿಕೆ ಮೆರೆದಿದ್ದಾರೆ ಎಂದು ದೂರಲಾಗಿದೆ.
ವಿಷಯ ತಿಳಿದು ಸ್ಥಳಕ್ಕೆ ಆಗಮಿಸಿದ ಭಾಗಮಂಡಲ ಪೊಲೀಸರು ಕೇರಳದ ಹತ್ತು ಯುವಕರನ್ನು ವಶಕ್ಕೆ ಪಡೆದಿದ್ದಾರೆ. ಈ ಕುರಿತು ಮೊಕದ್ದಮೆಯನ್ನು ದಾಖಲಿಸಿಕೊಂಡಿದ್ದಾರೆ.