ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ರಿಕೆಟ್ ಮೈದಾನಕ್ಕೆ ವಾಜಪೇಯಿ ಹೆಸರು ನಾಮಕರಣ ಮಾಡಿದ ಯೋಗಿ ಸರ್ಕಾರ

|
Google Oneindia Kannada News

ಲಕ್ನೋ, ನವೆಂಬರ್ 6: ರಾಜ್ಯದ ವಿವಿಧ ಪ್ರದೇಶಗಳ ಹೆಸರು ಬದಲಾವಣೆಗೆ ಮುಂದಾಗಿರುವ ಉತ್ತರ ಪ್ರದೇಶ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ ಅವರ ಸರ್ಕಾರ, ಈಗ ಕ್ರಿಕೆಟ್ ಮೈದಾನದ ಹೆಸರನ್ನು ಬದಲಾಯಿಸಿದೆ.

ಅಲಹಬಾದ್ ಪ್ರದೇಶವನ್ನು ಪ್ರಯಾಗ್‌ರಾಜ್ ಎಂದು ಬದಲಿಸಿದ್ದ ಯೋಗಿ ಸರ್ಕಾರ, ಮೊದಲ ಅಂತಾರಾಷ್ಟ್ರೀಯ ಕ್ರಿಕೆಟ್ ಪಂದ್ಯಕ್ಕೆ ಸಜ್ಜುಗೊಳ್ಳುತ್ತಿರುವ ಉತ್ತರ ಪ್ರದೇಶ ಸರ್ಕಾರ ಎಕನಾ ಅಂತಾರಾಷ್ಟ್ರೀಯ ಕ್ರಿಕೆಟ್ ಮೈದಾನಕ್ಕೆ 'ಭಾರತ ರತ್ನ ಅಟಲ್ ಬಿಹಾರಿ ವಾಜಪೇಯಿ ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣ' ಎಂದು ಮರುನಾಮಕರಣ ಮಾಡಿದೆ.

yogi government changed name lucknow ekana cricket stadium as vajpayee stadium

ಅಯೋಧ್ಯಾದಲ್ಲಿ ಶ್ರೀರಾಮ ಪ್ರತಿಮೆ ಸ್ಥಾಪನೆಗೆ ಮುಂದಾದ ಯೋಗಿ ಅಯೋಧ್ಯಾದಲ್ಲಿ ಶ್ರೀರಾಮ ಪ್ರತಿಮೆ ಸ್ಥಾಪನೆಗೆ ಮುಂದಾದ ಯೋಗಿ

ಭಾರತ-ವೆಸ್ಟ್ ಇಂಡೀಸ್ ತಂಡಗಳ ನಡುವೆ ಮಂಗಳವಾರ ಇಲ್ಲಿ ಮೊದಲ ಬಾರಿಗೆ ಟಿ20 ಪಂದ್ಯ ನಡೆಯುತ್ತಿದೆ. ಸಂಸತ್‌ನಲ್ಲಿ ಲಕ್ನೋವನ್ನು ಪ್ರತಿನಿಧಿಸುತ್ತಿದ್ದ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಹೆಸರನ್ನು ಕ್ರೀಡಾಂಗಣಕ್ಕೆ ಇರಿಸಿದ್ದು, ಅವರ ಅಭಿಮಾನಿಗಳಲ್ಲಿ ಪುಳಕ ಮೂಡಿಸಿದೆ.

ಯೋಗಿ ಆದಿತ್ಯನಾಥ ಅವರ ಸರ್ಕಾರ ಹೆಸರು ಬದಲಾವಣೆಗಾಗಿ ಕಳುಹಿಸಿದ್ದ ಪ್ರಸ್ತಾವಕ್ಕೆ ಉತ್ತರ ಪ್ರದೇಶ ರಾಜ್ಯಪಾಲ ರಾಮ್ ನಾಯಕ್ ಅನುಮತಿ ನೀಡಿದರು. ಬಳಿಕ ಪ್ರಧಾನ ಕಾರ್ಯದರ್ಶಿ (ಗೃಹ) ನಿತಿನ್ ರಮೇಶ್ ಅವರು ಸೋಮವಾರ ಸಂಜೆ ಹೆಸರು ಬದಲಾವಣೆಯ ಆದೇಶ ಹೊರಡಿಸಿದರು.

ಯೋಗಿ ಆದಿತ್ಯನಾಥ ಯಾರ್ಯಾರ ಹೆಸರು ಬದಲಾಯಿಸಿದ್ದಾರೆ ಗೊತ್ತಾ? ಯೋಗಿ ಆದಿತ್ಯನಾಥ ಯಾರ್ಯಾರ ಹೆಸರು ಬದಲಾಯಿಸಿದ್ದಾರೆ ಗೊತ್ತಾ?

ಎಕನಾ ಸ್ಪೋರ್ಟ್ಸ್ ಸಿಟಿ ಪ್ರೈವೇಟ್ ಲಿಮಿಟೆಡ್, ಜಿಸಿ ಕನ್‌ಸ್ಟ್ರಕ್ಷನ್ಸ್ ಮತ್ತು ಡೆವೆಲೆಪ್‌ಮೆಂಟ್ ಇಂಡಸ್ಟ್ರೀಸ್ ಲಿಮಿಟೆಡ್ ಹಾಗೂ ಲಕ್ನೋ ಅಭಿವೃದ್ಧಿ ಪ್ರಾಧಿಕಾರ (ಎಲ್‌ಡಿಎ) ನಡುವೆ 17.5.1ರ ನಿಯಮದಡಿ ಯೋಜನೆ ಪೂರ್ಣಗೊಂಡ ಬಳಿಕ ಎಕನಾ ಸ್ಪೋರ್ಟ್ಸ್ ಹೆಸರಿಡಲು ಒಪ್ಪಂದ ಮಾಡಿಕೊಳ್ಳಲಾಗಿತ್ತು ಎಂದು ಅಧಿಕಾರಿಗಳು ಸರ್ಕಾರಕ್ಕೆ ಮಾಹಿತಿ ನೀಡಿದ್ದರು.

ಆದರೆ, ತನ್ನ ಅಧಿಕಾರ ಬಳಸಿಕೊಂಡ ರಾಜ್ಯ ಸರ್ಕಾರ ನಿಯಮದಲ್ಲಿನ ಒಪ್ಪಂದವನ್ನು ರದ್ದುಗೊಳಿಸಿ ತೀವ್ರ ಕಾದಾಟದ ನಿರೀಕ್ಷೆ ಮೂಡಿಸಿರುವ ಪಂದ್ಯಕ್ಕೂ ಮುನ್ನ ಹೆಸರು ಬದಲಾವಣೆ ಮಾಡಿದೆ.

English summary
Uttar Pradesh Yogi Adityanath government renamed Lucknow's Ekana International Cricket Stadium as Bharat Ratan Atal Bihari Vajpayee International Cricket Stadium.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X