ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಲಹಾಬಾದ್ ಅಲ್ಲ ಪ್ರಯಾಗ್‌ರಾಜ್: ಹೆಸರು ಬದಲಿಸಲು ಯೋಗಿ ಚಿಂತನೆ

|
Google Oneindia Kannada News

ಲಕ್ನೋ, ಅಕ್ಟೋಬರ್ 15: ಉತ್ತರ ಪ್ರದೇಶದ ಪ್ರಮುಖ ನಗರಗಳಲ್ಲಿ ಒಂದಾದ ಅಲಹಾಬಾದ್‌ಗೆ 'ಪ್ರಯಾಗರಾಜ್' ಎಂದು ಮರುನಾಮಕರಣ ಮಾಡಲು ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಉದ್ದೇಶಿಸಿದ್ದಾರೆ.

'ಅಲಹಾಬಾದ್ ಹೆಸರನ್ನು ಪ್ರಯಾಗರಾಜ್ ಎಂದು ಬದಲಿಸುವುದು ಹೆಚ್ಚಿನ ಜನ ಆಶಯವಾಗಿದೆ. ಇದು ಒಳ್ಳೆಯ ಸಂದೇಶ ಸಹ ನೀಡುತ್ತದೆ. ಎಲ್ಲರೂ ಒಪ್ಪುವುದಾದರೆ ಈ ನಗರವನ್ನು ಪ್ರಯಾಗರಾಜ್ ಆಗಿ ಬದಲಿಸಬಹುದು ಮತ್ತು ಇದು ಉತ್ತಮ ಆರಂಭವಾಗಲಿದೆ' ಎಂದು ಯೋಗಿ ಆದಿತ್ಯನಾಥ್ ಹೇಳಿದ್ದಾರೆ.

ಉತ್ತರ ಪ್ರದೇಶದ 50 ಕುಟುಂಬದಿಂದ ಮತಾಂತರದ ಬೆದರಿಕೆಉತ್ತರ ಪ್ರದೇಶದ 50 ಕುಟುಂಬದಿಂದ ಮತಾಂತರದ ಬೆದರಿಕೆ

ಸ್ವಾತಂತ್ರ್ಯ ಹೋರಾಟದೊಂದಿಗೆ ಆಳವಾದ ನಂಟು ಹೊಂದಿರುವ ಐತಿಹಾಸಿಕ ನಗರಿ ಅಲಹಾಬಾದ್, ಗಂಗಾ, ಯಮುನಾ ಮತ್ತು ಪೌರಾಣಿಕ ಸರಸ್ವತಿ ನದಿಗಳ ಸಂಗಮದ ಸ್ಥಳವೂ ಹೌದು. ಹೀಗಾಗಿ ಐತಿಹಾಸಿಕ ಮತ್ತು ಪೌರಾಣಿಕವಾಗಿ ಈ ನಗರ ಬಹಳ ಮಹತ್ವ ಪಡೆದಿದೆ.

ಮೈಸೂರು ದಸರಾ - ವಿಶೇಷ ಪುರವಣಿ

ಆದರೆ, ಯೋಗಿ ಆದಿತ್ಯನಾಥ್ ಸರ್ಕಾರದ ಈ ಮರುನಾಮಕರಣದ ಯೋಜನೆಗೆ ವಿರೋಧವೂ ವ್ಯಕ್ತವಾಗಿದೆ. ವಿರೋಧಪಕ್ಷಗಳು ಸೇರಿದಂತೆ ಅನೇಕರು ಹೆಸರು ಬದಲಿಸುವುದರ ಔಚಿತ್ಯವನ್ನು ಪ್ರಶ್ನಿಸಿದ್ದಾರೆ.

ಕುಂಭಮೇಳಕ್ಕೂ ಮುನ್ನ...

ಕುಂಭಮೇಳಕ್ಕೂ ಮುನ್ನ...

ಮುಂದಿನ ವರ್ಷದ ಜನವರಿ 15 ರಿಂದ ಮಾರ್ಚ್ 4ರ ಅವಧಿಯಲ್ಲಿ ಕುಂಭಮೇಳ ನಡೆಯಲಿದ್ದು, ಅದಕ್ಕೂ ಮುನ್ನ ಅಲಹಾಬಾದ್‌ಗೆ ಪ್ರಯಾಗರಾಜ್ ಹೆಸರಿನ ನಾಮಕರಣ ಮಾಡಲು ಯೋಗಿ ಬಯಸಿದ್ದಾರೆ ಎಂದು ವರದಿಗಳು ತಿಳಿಸಿವೆ.

ಉತ್ತರ ಪ್ರದೇಶದಲ್ಲಿ ಬಿಜೆಪಿಯವರಿಗೆ 'ನೊ ಎಂಟ್ರಿ' ಬೋರ್ಡ್ ನ ಸ್ವಾಗತ!ಉತ್ತರ ಪ್ರದೇಶದಲ್ಲಿ ಬಿಜೆಪಿಯವರಿಗೆ 'ನೊ ಎಂಟ್ರಿ' ಬೋರ್ಡ್ ನ ಸ್ವಾಗತ!

Array

ಮರು ನಾಮಕರಣವಲ್ಲ

ಈ ನಿರ್ಧಾರವನ್ನು ಸ್ವಾಗತಿಸುತ್ತೇನೆ. ಅಲಹಬಾದ್ ಬೇಗನೇ ಪ್ರಯಾಗರಾಜ್ ಆಗಲಿ. ಪ್ರಯಾಗರಾಜ್, ಅಲಹಾಬಾದ್‌ನ ಪುರಾತನ ಹೆಸರು. ಅದನ್ನು 1575ರಲ್ಲಿ ಬದಲಿಸಲಾಯಿತು. ಹೀಗಾಗಿ ಇದು ಮರ ಸ್ಥಾಪನೆಯೇ ಹೊರತು ಮರು ನಾಮಕರಣವಲ್ಲ. ಮೂರು ನದಿಗಳ ಒಂದುಗೂಡಿವಿಕೆಯ ತ್ರಿವೇಣಿ ಸಂಗಮಕ್ಕೆ ಕೂಡ ಪ್ರಯಾಗರಾಜ್ ಹೆಸರುವಾಸಿ ಎಂದು ಸಾಧ್ವಿ ಖೋಸ್ಲಾ ಹೇಳಿದ್ದಾರೆ.

ಬಾಬ್ರಿ ದೇಶಕ್ಕೆ ಕಳಂಕ, ಅದು ಮಸೀದಿಯಲ್ಲ: ಮುಸ್ಲಿಂ ಮುಖಂಡ!ಬಾಬ್ರಿ ದೇಶಕ್ಕೆ ಕಳಂಕ, ಅದು ಮಸೀದಿಯಲ್ಲ: ಮುಸ್ಲಿಂ ಮುಖಂಡ!

ಬೇಡಿಕೆ ಇಟ್ಟಿರಲಿಲ್ಲ

ಪ್ರಯಾಗರಾಜ್ ತನ್ನ ಹೆಸರನ್ನು ಅಲಹಾಬಾದ್ ಎಂದು ಬದಲಿಸಿಕೊಂಡ ಬಳಿಕವೂ ಅಸ್ತಿತ್ವ ಉಳಿಸಿಕೊಂಡಿತ್ತು. ಇಲ್ಲಿನ ಜನರು ಧೈರ್ಯಶಾಲಿಗಳು ಮತ್ತು ವಿಧೇಯರು. ಹಳೆಯ ಪ್ರಸಿದ್ಧ ಹೆಸರನ್ನು ಮತ್ತೆ ಇರಿಸುವಂತೆ ಎಂದಿಗೂ ಬೇಡಿಕೆ ಇರಿಸಿರಲಿಲ್ಲ ಎಂದು ಅಶೋಕ್ ಕರೇಕರ್ ಎಂಬುವವರು ಹೇಳಿದ್ದಾರೆ.

ಉತ್ತರ ಪ್ರದೇಶದ ಈ ಶಾಲೇಲಿ 'ಭಾರತ್ ಮಾತಾ ಕೀ ಜೈ' ಅಂದ್ರೆ ಅಪರಾಧ!ಉತ್ತರ ಪ್ರದೇಶದ ಈ ಶಾಲೇಲಿ 'ಭಾರತ್ ಮಾತಾ ಕೀ ಜೈ' ಅಂದ್ರೆ ಅಪರಾಧ!

ಆಗ ಏಕೆ ಇರಲಿಲ್ಲ?

ಬಾಂಬೆಯ ಹೆಸರು ಮುಂಬೈ ಎಂದು ಬದಲಾದಾಗ, ಮದ್ರಾಸ್ ಹೆಸರು ಚೆನ್ನೈ ಎಂದು ಮರುನಾಮಕರಣವಾದಾಗ, ಕಲ್ಕತ್ತಾ ಹೆಸರು ಕೋಲ್ಕತ್ತಾ ಎಂದು ಬದಲಿಸಿದಾಗ ಯಾವ ಪ್ರಗತಿಪರರ ಆಕ್ರೋಶವೂ ಇರಲಿಲ್ಲ. ಆದರೆ, ಅಲಹಾಬಾದ್ ಹೆಸರನ್ನು ಪ್ರಯಾಗ್‌ರಾಜ್ ಎಂದು ಬದಲಿಸುವಾಗ ಅಲ್ಲಿ ಆಕ್ರೋಶ ಇದೆ- ಏಕೆ? ಎಂದು ಅವಿನಾಶ್ ಎಂಬುವವರು ಪ್ರಶ್ನಿಸಿದ್ದಾರೆ.

English summary
Uttar Pradesh Chief Minister Yogi Adityanath reportedly wants to rename Allahabad to Prayagraj. But people from various political parties and section criticized the decision.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X