ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಯೋಗಿ ಆದಿತ್ಯನಾಥ್ ಅಯೋಧ್ಯೆ ಭೇಟಿ ರದ್ದು

|
Google Oneindia Kannada News

ಲಕ್ನೋ, ಆಗಸ್ಟ್ 02: ಉತ್ತರ ಪ್ರದೇಶದ ಸಚಿವೆ ಕಮಲ್ ರಾಣಿ ವರುಣ್ ವಿಧಿವಶರಾಗಿದ್ದಾರೆ. ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಯೋಧ್ಯೆ ಭೇಟಿ ರದ್ದಾಗಿದೆ. ಅಯೋಧ್ಯೆಯಲ್ಲಿ ಆಗಸ್ಟ್ 5ರಂದು ರಾಮಮಂದಿರ ನಿರ್ಮಾಣಕ್ಕೆ ಶಂಕು ಸ್ಥಾಪನೆ ನಡೆಯಲಿದೆ.

62 ವರ್ಷದ ಕಮಲ್ ರಾಣಿ ವರುಣ್ ಲಕ್ನೋದ ಆಸ್ಪತ್ರೆಯಲ್ಲಿ ಭಾನುವಾರ ಮೃತಪಟ್ಟಿದ್ದಾರೆ. ಕೋವಿಡ್ ಸೋಂಕಿನ ಕಾರಣ ಜುಲೈ 18ರಂದು ಅವರು ಆಸ್ಪತ್ರೆಗೆ ದಾಖಲಾಗಿದ್ದರು. ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.

 ಕೋವಿಡ್‌ 19; ಉತ್ತರ ಪ್ರದೇಶದ ಸಚಿವೆ ಸಾವು ಕೋವಿಡ್‌ 19; ಉತ್ತರ ಪ್ರದೇಶದ ಸಚಿವೆ ಸಾವು

 Yogi Adityanath Visit To Ayodhya Cancelled

ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅಯೋಧ್ಯೆಗೆ ಇಂದು ಭೇಟಿ ನೀಡಿ ರಾಮ ಮಂದಿರ ಶಂಕು ಸ್ಥಾಪನೆ ಕಾರ್ಯಕ್ರಮದ ಸಿದ್ಧತೆ ಪರಿಶೀಲಿಸಬೇಕಿತ್ತು. ಸೋಮವಾರದಿಂದ ಅಯೋಧ್ಯೆಯಲ್ಲಿ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ಆರಂಭವಾಗಲಿವೆ.

ರಾಮಮಂದಿರ ಭೂಮಿ ಪೂಜೆ ಅಡ್ವಾಣಿಗೂ ಸಿಕ್ಕಿದೆ ಆಹ್ವಾನ ರಾಮಮಂದಿರ ಭೂಮಿ ಪೂಜೆ ಅಡ್ವಾಣಿಗೂ ಸಿಕ್ಕಿದೆ ಆಹ್ವಾನ

ಸಚಿವೆ ಕಮಲ್ ರಾಣಿ ವರುಣ್ ನಿಧನಕ್ಕೆ ಯೋಗಿ ಆದಿತ್ಯನಾಥ್ ಸಂತಾಪ ಸೂಚಿಸಿದ್ದಾರೆ. "ಕಮಲ್ ರಾಣಿ ವರುಣ್ ಸಮಾಜ ಸೇವಕಿ ಮತ್ತು ಖ್ಯಾತ ಜನಪ್ರತಿನಿಧಿಯಾಗಿದ್ದರು. ಅವರ ಕುಟುಂಬಕ್ಕೆ ದುಃಖ ಭರಿಸುವ ಶಕ್ತಿ ದೇವರು ನೀಡಲಿ" ಎಂದು ಆದಿತ್ಯನಾಥ್ ಹೇಳಿದ್ದಾರೆ.

ರಾಮ ಜನ್ಮಭೂಮಿ ಟ್ರಸ್ಟ್ ಸದಸ್ಯರ ಜೊತೆ ಯೋಗಿ ಆದಿತ್ಯನಾಥ್ ಚರ್ಚೆರಾಮ ಜನ್ಮಭೂಮಿ ಟ್ರಸ್ಟ್ ಸದಸ್ಯರ ಜೊತೆ ಯೋಗಿ ಆದಿತ್ಯನಾಥ್ ಚರ್ಚೆ

ಅಯೋಧ್ಯೆಯಲ್ಲಿ ರಾಮ ಮಂದಿರ ಶಂಕು ಸ್ಥಾಪನೆ ಕಾರ್ಯಕ್ರಮ ಆಗಸ್ಟ್ 5ರಂದು ನಡೆಯಲಿದೆ. ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ 50 ಗಣ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ. ಕಾರ್ಯಕ್ರಮದ ಸಿದ್ಧತೆಗಳು ಭರದಿಂದ ಸಾಗಿವೆ.

English summary
Uttar Pradesh CM Yogi Adityanath visit to Ayodhya cancelled. Ayodhya all set for Ram temple foundation laying ceremony on August 5.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X