ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫೈಜಾಬಾದ್ ಇನ್ನು ಮುಂದೆ ಅಯೋಧ್ಯಾ: ಯೋಗಿಯಿಂದ ಮತ್ತಷ್ಟು ಹೆಸರು ಬದಲು

|
Google Oneindia Kannada News

ಅಯೋಧ್ಯಾ, ನವೆಂಬರ್ 6: ಇತ್ತೀಚೆಗಷ್ಟೇ ಅಲಹಾಬಾದ್ ಹೆಸರನ್ನು ಪ್ರಯಾಗ್‌ರಾಜ್ ಎಂದು ಬದಲಿಸಿದ್ದ ಉತ್ತರ ಪ್ರದೇಶ ಸರ್ಕಾರ, ಮತ್ತೊಂದು ಹೆಸರು ಬದಲಾವಣೆಗೆ ಮುಂದಾಗಿದೆ.

ಫೈಜಾಬಾದ್ ಜಿಲ್ಲೆಯ ಹೆಸರನ್ನು ಅಯೋಧ್ಯಾ ಎಂದು ಬದಲಿಸುವುದಾಗಿ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಘೋಷಿಸಿದ್ದಾರೆ.

ಕ್ರಿಕೆಟ್ ಮೈದಾನಕ್ಕೆ ವಾಜಪೇಯಿ ಹೆಸರು ನಾಮಕರಣ ಮಾಡಿದ ಯೋಗಿ ಸರ್ಕಾರಕ್ರಿಕೆಟ್ ಮೈದಾನಕ್ಕೆ ವಾಜಪೇಯಿ ಹೆಸರು ನಾಮಕರಣ ಮಾಡಿದ ಯೋಗಿ ಸರ್ಕಾರ

ದೀಪಾವಳಿ ಪ್ರಯುಕ್ತ ಮಾಡಿದ ಭಾಷಣದ ವೇಳೆ ಯೋಗಿ ಈ ಪ್ರಕಟಣೆ ನೀಡಿದ್ದಾರೆ.

yogi adityanath announced name change of faizabad as ayodhya

'ಅಯೋಧ್ಯಾ ನಮ್ಮ ಹೆಮ್ಮೆ ಮತ್ತು ಘನತೆಯ ಸಂಕೇತ. ಶ್ರೀರಾಮನೊಂದಿಗೆ ಅದು ತನ್ನ ಗುರುತನ್ನು ಪಡೆದುಕೊಂಡಿದೆ' ಎಂದು ಯೋಗಿ ಹೇಳಿದ್ದಾರೆ.

ದೀಪಾವಳಿ ವಿಶೇಷ ಪುರವಣಿ

ಫೈಜಾಬಾದ್ ಜಿಲ್ಲೆಯಲ್ಲಿ ಫೈಜಾಬಾದ್ ಮತ್ತು ಅಯೋಧ್ಯಾ ಅವಳಿನಗರಗಳಿವೆ. ಸರಯು ನದಿ ತಟದಲ್ಲಿರುವ ಈ ಜಿಲ್ಲೆ ಇನ್ನು ಮುಂದೆ ಅಯೋಧ್ಯಾ ಎಂಬ ಹೆಸರು ಪಡೆದುಕೊಳ್ಳಲಿದೆ.

ಯೋಗಿ ಆದಿತ್ಯನಾಥ ಯಾರ್ಯಾರ ಹೆಸರು ಬದಲಾಯಿಸಿದ್ದಾರೆ ಗೊತ್ತಾ?ಯೋಗಿ ಆದಿತ್ಯನಾಥ ಯಾರ್ಯಾರ ಹೆಸರು ಬದಲಾಯಿಸಿದ್ದಾರೆ ಗೊತ್ತಾ?

ರಾಮಾಯಣ ಮಹಾಕಾವ್ಯದಲ್ಲಿನ ಶ್ರೀರಾಮನ ತಂದೆ ರಾಜ ದಶರಥನ ಹೆಸರನ್ನು ವೈದ್ಯಕೀಯ ಕಾಲೇಜೊಂದಕ್ಕೆ ಇರಿಸಲಾಗುವುದು. ಹಾಗೆಯೇ ಅಯೋಧ್ಯಾದಲ್ಲಿರುವ ವಿಮಾನ ನಿಲ್ದಾಣವು ಶ್ರೀರಾಮನ ಹೆಸರು ಪಡೆದುಕೊಳ್ಳಲಿದೆ.

ಅಯೋಧ್ಯಾದಲ್ಲಿ ಶ್ರೀರಾಮ ಪ್ರತಿಮೆ ಸ್ಥಾಪನೆಗೆ ಮುಂದಾದ ಯೋಗಿ ಅಯೋಧ್ಯಾದಲ್ಲಿ ಶ್ರೀರಾಮ ಪ್ರತಿಮೆ ಸ್ಥಾಪನೆಗೆ ಮುಂದಾದ ಯೋಗಿ

ಶ್ರೀರಾಮನ ವಂಶದ ಹೆಸರು ಎಂದೆಂದಿಗೂ ಉಳಿಯುವಂತಾಗಬೇಕು ಎಂದು ಯೋಗಿ ಪ್ರತಿಪಾದಿಸಿದರು.

English summary
Uttar Pradesh Yogi Adityanath government announced the name change of Faizabad district as Ayodhya.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X