ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ಲಾಂ ವಿರುದ್ಧ ಬರವಣಿಗೆ: ಪತ್ರಕರ್ತನಿಗೆ ಪರಿಚಯಸ್ಥನಿಂದಲೇ ಬೆದರಿಕೆ, ಬಂಧನ

|
Google Oneindia Kannada News

ಹೊಸದಿಲ್ಲಿ ಸೆಪ್ಟೆಂಬರ್ 21: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ಸಂಯೋಜಿತ ಪ್ರಕಟಣೆಯಾದ 'ಆರ್ಗನೈಸರ್ ವೀಕ್ಲಿ' ವರದಿಗಾರನಿಗೆ ಇಸ್ಲಾಂ ಧರ್ಮದ ವಿರುದ್ಧ ಬರೆದಿದ್ದಕ್ಕಾಗಿ ಜೀವ ಬೆದರಿಕೆ ಹಾಕಿದ್ದ ಆರೋಪಿಯನ್ನು ಗಾಜಿಯಾಬಾದ್ ಪೊಲೀಸರು ಬಂಧಿಸಿದ್ದಾರೆ. ಆರೋಪಿಯನ್ನು ಪ್ರಾಣಪ್ರಿಯಾ ವತ್ಸ್ ಎಂದು ಗುರುತಿಸಲಾಗಿದೆ. ಬಂಧಿತ ಆರೋಪಿ ವರದಿಗಾರನಿಗೆ ಪರಿಚಯಸ್ಥ ಎಂದು ತಿಳಿದು ಬಂದಿದೆ.

ಪತ್ರಕರ್ತ ನಿಶಾಂತ್ ಆಜಾದ್ ಅವರು ಸೆಪ್ಟೆಂಬರ್ 10 ರಂದು ಉತ್ತರ ಪ್ರದೇಶದ ಗಾಜಿಯಾಬಾದ್‌ನ ಇಂದಿರಾಪುರಂ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದರು. ದೂರಿನಲ್ಲಿ ತಾವು ಇಸ್ಲಾಂ ಧರ್ಮದ ವಿರುದ್ಧ ಬರೆದಿದ್ದಕ್ಕಾಗಿ ಅಮೆರಿಕ ಮೂಲದ ಅಪರಿಚಿತ ಸಂಖ್ಯೆಯಿಂದ ಬೆದರಿಕೆ ಸಂದೇಶಗಳು ಮತ್ತು ವಾಟ್ಸಾಪ್ ಕರೆಯನ್ನು ಸ್ವೀಕರಿಸಿದ್ದಾರೆ ಎಂದು ಆರೋಪಿಸಿದ್ದರು.

Writing against Islam: Journalist threatened, acquaintance arrested

ಪತ್ರಕರ್ತ ನಿಶಾಂತ್ ಆಜಾದ್ ತಮಗೆ ಬಂದ ಬೆದರಿಕೆ ಸಂದೇಶಗಳ ಸ್ಕ್ರೀನ್ ಶಾಟ್‌ ಅನ್ನೂ ಹಂಚಿಕೊಂಡಿದ್ದಾರೆ. ಇಸ್ಲಾಂ ವಿರುದ್ಧ ಅಜೆಂಡಾವನ್ನು ಪ್ರಚಾರ ಮಾಡುವುದನ್ನು ನಿಲ್ಲಿಸಿ. ಇಲ್ಲವಾದರೆ ಶಿರಚ್ಛೇದ ಮಾಡುವುದಾಗಿ ಬೆದರಿಕೆ ಸಂದೇಶಗಳು ಪತ್ರಕರ್ತ ನಿಶಾಂತ್ ಆಜಾದ್ ಅವರಿಗೆ ಬಂದಿವೆ.

ಗಾಜಿಯಾಬಾದ್ ಪೊಲೀಸರು ಮಂಗಳವಾರ (ಸೆಪ್ಟೆಂಬರ್ 20) ಟ್ವಿಟರ್‌ಗೆ ಅಪ್‌ಲೋಡ್ ಮಾಡಿದ ಹೇಳಿಕೆಯಲ್ಲಿ, ಪ್ರಕರಣದ ಆರೋಪಿ ಪ್ರಾಣಪ್ರಿಯಾ ವತ್ಸ್ ಅವರನ್ನು ಬಂಧಿಸಲಾಗಿದೆ ಎಂದು ತಿಳಿಸಿದ್ದಾರೆ. "ಪತ್ರಕರ್ತ ನಿಶಾಂತ್ ಆಜಾದ್, ಸೆಪ್ಟೆಂಬರ್ 13 ರಂದು ಇಂದಿರಾಪುರಂ ಪೊಲೀಸ್ ಠಾಣೆಯಲ್ಲಿ ದಾಖಲಾದ ದೂರಿನಲ್ಲಿ, ವಾಟ್ಸಾಪ್‌ನಲ್ಲಿ ಬಂದ ಕರೆ ಮೂಲಕ ಬೆದರಿಕೆ ಹಾಕಲಾಗಿದೆ" ಎಂದು ದೂರಿದ್ದಾರೆ. "ಇಂದಿರಾಪುರಂ ಠಾಣೆಯ ಸೈಬರ್ ಸೆಲ್ ಮೂಲಕ ಡೇಟಾವನ್ನು ವಿಶ್ಲೇಷಿಸಿದಾಗ, ಕರೆ ಹಿಂದೆ ಪ್ರಾಣಪ್ರಿಯಾ ವತ್ಸ್ ಇದ್ದಾರೆ ಮತ್ತು (ಆಜಾದ್) ಅವರನ್ನು ಹೆದರಿಸಲು ಮತ್ತು ತೊಂದರೆ ನೀಡುವಂತೆ ಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣದಲ್ಲಿ ಅವರನ್ನು (ಪ್ರಾಣಪ್ರಿಯಾ ವತ್ಸ್) ಬಂಧಿಸಲಾಗಿದೆ. ವತ್ಸ್ ಆಜಾದ್ ಗೆ ಗೊತ್ತಿರುವ ವ್ಯಕ್ತಿ ಎಂದು ಹೇಳಲಾಗುತ್ತಿದೆ.

ಗಾಜಿಯಾಬಾದ್ ಮೂಲದ ವೈದ್ಯರೊಬ್ಬರು ಹಿಂದೂ ಸಂಘಟನೆಗಳನ್ನು ಬೆಂಬಲಿಸುವ ಉದ್ದೇಶದಿಂದ ಬೆದರಿಕೆ ಸಂದೇಶಗಳನ್ನು ಸ್ವೀಕರಿಸಿದ್ದರು. ಅದೇ ಸಮಯದಲ್ಲಿ ಆಜಾದ್ ಅವರ ಆರೋಪಗಳು ಹೊರಹೊಮ್ಮಿದವು ಎಂಬುದನ್ನು ಸಹ ಗಮನಿಸಬೇಕು.

ಆ ಸಂದರ್ಭದಲ್ಲಿ "ಯುಎಸ್ ಮೂಲದ" ಫೋನ್ ಸಂಖ್ಯೆಯಿಂದ ಬೆದರಿಕೆ ಸಂದೇಶಗಳು ಆಜಾದ್ ಅವರಿಗೆ ಬಂದಿವೆ. ಬೆದರಿಕೆಗಳನ್ನು ವಾಟ್ಸಾಪ್‌ನಲ್ಲಿ ಮಾಡಲಾಗಿದೆ ಮತ್ತು ಸಂದೇಶಗಳ ಹಿಂದೆ ಇರುವ ಉದ್ದೇಶಿತ ವ್ಯಕ್ತಿ ವೈದ್ಯ ಅರವಿಂದ್ ವತ್ಸ್ ಅಕೇಲಾ ಎಂದು ತಿಳಿದು ಬಂದಿದೆ.

English summary
Ghaziabad police have arrested an accused who threatened to kill a reporter of Rashtriya Swayamsevak Sangh (RSS)-affiliated publication 'Organizer Weekly' for writing against Islam.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X