• search
  • Live TV
ಲಕ್ನೋ ಸುದ್ದಿಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  

ರಸ್ತೆಯಲ್ಲೇ ಮಹಿಳಾ ಅಭ್ಯರ್ಥಿಯ ಸೀರೆ ಎಳೆದಾಡಿದ ದುರುಳರು

|
Google Oneindia Kannada News

ಲಕ್ನೋ, ಜುಲೈ 09: ಸ್ಥಳೀಯ ಚುನಾವಣೆಗೆ ನಾಮಪತ್ರ ಸಲ್ಲಿಸಲು ಬಂದಿದ್ದ ಮಹಿಳಾ ಅಭ್ಯರ್ಥಿಯ ಸೀರೆ ಎಳೆದು ಅವಮಾನ ಮಾಡಿರುವ ಘಟನೆ ಉತ್ತರ ಪ್ರದೇಶದಲ್ಲಿ ನಡೆದಿದೆ.

ವ್ಯಕ್ತಿಗಳಿಬ್ಬರು ಮಹಿಳೆಯೊಬ್ಬರ ಮೇಲೆ ಕೈ ಮಾಡಿ, ಬಳಿಕ ಸೀರೆ ಎಳೆದು ಅವಮಾನ ಮಾಡಿದ್ದಾರೆ, ಅಖಿಲೇಶ್ ಯಾದವ್ ಅವರ ಸಮಾಜವಾದಿ ಪಕ್ಷದ ಬೆಂಬಲಿಗರೇ ಈ ಕೃತ್ಯ ಎಸಗಿದ್ದಾರೆ ಎಂದು ಆರೋಪಿಸಲಾಗಿದೆ.

ಬ್ಲಾಕ್ ಪಂಚಾಯ್ತಿ ಚುನಾವಣೆಗೆ ಅಭ್ಯರ್ಥಿಯೊಬ್ಬರ ಜತೆ ಆಕೆಯೂ ಕೂಡ ನಾಮಪತ್ರ ಸಲ್ಲಿಸಲು ತೆರಳುವಾಗ ಘಟನೆ ನಡೆದಿದೆ.

825 ಬ್ಲಾಕ್ ಅಥವಾ ಸ್ಥಳೀಯ ಪಂಚಾಯತ್ ಮುಖಂಡರಿಗೆ ಶನಿವಾರ ಮತದಾನ ನಡೆಯಲಿದೆ. ನಾಮಪತ್ರ ಸಲ್ಲಿಸಲು ಭದ್ರತಾ ವ್ಯವಸ್ಥೆ ಮಾಡಲಾಗಿದೆ ಆದರೆ 14 ಪ್ರದೇಶಗಳಿಂದ ಹಿಂಸಾಚಾರ ಪ್ರಕರಣ ವರದಿಯಾಗಿದೆ.

ಈ ವಿಡಿಯೋವನ್ನು ಅಖಿಲೇಶ್ ಯಾದವ್ ಹಂಚಿಕೊಂಡಿದ್ದು, ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಅವರ ಗೂಂಡಾಗಳು ಮಹಿಳೆಗೆ ಅವಮಾನ ಮಾಡಿದ್ದಾರೆ ಎಂದು ಆರೋಪಿಸಿದ್ದಾರೆ.

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಹಿಂಸಾಚಾರದ ವಿಡಿಯೋವನ್ನು ಹಂಚಿಕೊಂಡಿದ್ದು, ಪ್ರಧಾನಿ ನರೇಂದ್ರ ಮೋದಿ ಹಾಗೂ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ವಿರುದ್ಧ ಟೀಕೆ ನಡೆಸಿದ್ದಾರೆ.

ಈ ಘಟನೆ ಉತ್ತರ ಪ್ರದೇಶದ ಲಕ್ನೋನಿಂದ 130 ಕಿ.ಮೀ ದೂರದಲ್ಲಿರುವ ಲಿಂಖಿಪರ್ ಖೇರಿಯಲ್ಲಿ ನಡೆದಿದೆ.

English summary
A video of two men pulling a woman’s saree emerged from Uttar Pradesh today as nominations for local polls were filed in the state. The woman was reportedly a supporter of Akhilesh Yadav’s Samajwadi Party (SP) and had accompanied a candidate who was filing nominations for the upcoming block panchayat polls.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X